ಮುದ್ದೇಬಿಹಾಳ: ಪೇಜಾವರ ಶ್ರೀಗಳಿಗೆ ತುಲಾಭಾರ
ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ವಿಪ್ರಸಮಾಜದ ವತಿಯಿಂದ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ತುಲಾಭಾರ ಸಹಿತ ಅಭಿವಂದನಾ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಶಾಸಕ ಸಿ ಎಸ್ ಪಾಟೀಲ್ ನಡಹಳ್ಳಿಯವರು ಪೇಜಾವರ ಶ್ರೀಗಳ ಗೋರಕ್ಷಣಾ ಕಾರ್ಯಕ್ಕೆ 5 ಲಕ್ಷ ರೂಗಳನ್ನು ಬೆಳ್ಳಿಯ ತಟ್ಟೆಯಲ್ಲಿಟ್ಟು (ತಟ್ಟೆ ಸಹಿತ) ಅರ್ಪಿಸಿದರು. ವಿಪ್ರ ಸಮಾಜ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಸಕ ನಡಹಳ್ಳಿ ಮನೆಗೆ ಶ್ರೀಗಳ ಭೇಟಿ:
ಬೆಳಿಗ್ಗೆ ಶಾಸಕ ನಡಹಳ್ಳಿಯವರ ಆಹ್ವಾನದ ಮನೆಗೆ ಶ್ರೀಗಳು ಭೇಟಿ ನೀಡಿ ಗುರುವಂದನೆ ಸ್ವೀಕರಿಸಿದರು. ದಿನಪೂರ್ತಿ ಶಾಸಕರು ಶ್ರೀಗಳ ಜೊತೆಗೇನೇ ಇದ್ದು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ