|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮತಾಂತರ ವಿರೋಧಿ ಆಂದೋಲನ: ಪೇಜಾವರ ಶ್ರೀ ಜೊತೆ ವಿಹಿಂಪ ಅಧ್ಯಕ್ಷರ ಸಮಾಲೋಚನೆ

ಮತಾಂತರ ವಿರೋಧಿ ಆಂದೋಲನ: ಪೇಜಾವರ ಶ್ರೀ ಜೊತೆ ವಿಹಿಂಪ ಅಧ್ಯಕ್ಷರ ಸಮಾಲೋಚನೆಬೆಂಗಳೂರು: ದೇಶದಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿದೆ. ಇದರ ವಿರುದ್ಧ ವಿಶ್ವಹಿಂದು ಪರಿಷತ್ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಸಜ್ಜಾಗಿದ್ದು ಇದರ ನೇತೃತ್ವವನ್ನು ಮಠಾಧೀಶರು ಸಾಧು ಸಂತರು ಧರ್ಮಾಧಿಕಾರಿಗಳು ವಹಿಸಬೇಕೆಂದು ವಿಶ್ವಹಿಂದು ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.


ಈ ಸಂಬಂಧ, ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಭಾನುವಾರ ಭೇಟಿಯಾಗಿ ಸಮಾಲೋಚನೆ ನಡೆಸಿದರು.


ಈ ಹಿಂದೆಯೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕಾಲಕಾಲಕ್ಕೆ ಹಿಂದೂ ಸಮಾಜಕ್ಕೆ ಎದುರಾದ ಸಂಕಟ ಸವಾಲುಗಳ ಸಂದರ್ಭದಲ್ಲಿ ಸ್ವಯಂಸ್ಫೂರ್ತಿಯಿಂದ ಮುಂಚೂಣಿಯಲ್ಲಿ ನಿಂತು ಹಿಂದೂ ಸಮಾಜಕ್ಕೆ ದಿವ್ಯ ನೇತೃತ್ವ ಮತ್ತು ಮಾರ್ಗದರ್ಶನ ನೀಡಿರುವುದನ್ನು ಸ್ಮರಿಸಿರುವ ಅಲೋಕ್ ಕುಮಾರ್ ಇದೀಗ ಅವರ ಶಿಷ್ಯರಾಗಿರುವ ತಾವೂ ಆ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಬೇಕೆಂದು ವಿನಂತಿಸಿದರು.  


ಅದೇ ರೀತಿ ದೇಶಾದ್ಯಂತ ಸರ್ಕಾರಿ ಸ್ವಮ್ಯದಲ್ಲಿರುವ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಸ್ವಾಯತ್ತಗೊಳಿಸುವ ನಿಟ್ಟಿನಲ್ಲಿಯೂ ವಿಹಿಂಪ ವಿಸ್ತೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಅದರಲ್ಲೂ ಮಠಾಧಿಪತಿಗಳು ಮಾರ್ಗದರ್ಶನ ಮಾಡುವಂತೆಯೂ ಮನವಿ ಮಾಡಿದರು.


ಶ್ರೀಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.‌ ಅಲೋಕ್ ಕುಮಾರ್ ಅವರನ್ನು ಶ್ರೀಗಳು ಆಶೀರ್ವದಿಸಿದರು. ವಿಹಿಂಪ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಮತ್ತು ಮುಖಂಡ ಬಸವರಾಜ್ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments

Post a Comment

Post a Comment (0)

Previous Post Next Post