ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಮಹಮ್ಮದ್ ಇತಿಶಾಮ್ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 29 ರಿಂದ 31ರ ವರೆಗೆ ಹರ್ಯಾಣದ ಎಂ. ಡಿ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ 29ನೇ ಸಬ್ ಜೂನಿಯರ್ ಹುಡುಗರ ಮತ್ತು ಹುಡುಗಿಯರ, 44ನೇ ಸೀನಿಯರ್ ಪುರುಷರ ಮತ್ತು ಮಹಿಳೆಯರ ಥ್ರೋಬಾಲ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ತಂಡದ ಭಾಗವಾಗಿರಲಿದ್ದಾರೆ. ಗದಗದಲ್ಲಿ ಅಕ್ಟೋಬರ್ 16 ರಿಂದ 25 ರವರೆಗೆ ನಡೆದ ರಾಜ್ಯಮಟ್ಟದ ಥ್ರೋಬಾಲ್ ಕ್ಯಾಂಪ್ನಲ್ಲಿ ಈ ಆಯ್ಕೆ ನಡೆದಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ