'ಅಕ್ಷರ ಸಂಗಾತ’ ಕಥಾ ಸ್ಪರ್ಧೆ ಬಹುಮಾನ ಪ್ರಕಟ

Upayuktha
0


ಧಾರವಾಡ: ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ಯುವ ಕಥಾ ಸ್ಪರ್ಧೆಯಲ್ಲಿ ಕಥಾ ಬಹುಮಾನವನ್ನು ಇಬ್ಬರು ಸಮಾನವಾಗಿ ಹಂಚಿಕೊಂಡಿದ್ದು, ಸುವರ್ಣ ಚೆಳ್ಳೂರು ಅವರ ‘ಕಂಬದ ಹಕ್ಕಿ’ ಮತ್ತು ಪ್ರವೀಣ್ ಕುಮಾರ್ ಜಿ ಅವರ ‘ಗುಟ್ಟು’ ಕಥಾ ಬಹುಮಾನ ಪಡೆದುಕೊಂಡಿವೆ.


ನಾಗರಾಜ ಕೋರಿ ಅವರ ‘ಮಲ್ಲಯ್ಯನ ಮೈಕು’, ಝಬೈರ್ ಅಹ್ಮದ್ ಪರಪ್ಪು ಅವರ ‘ಒಂದು ತಿರುವಿನ ಕರಾಮತ್ತು’ ಒಪ್ಪಿತ ಕತೆಗಳಾಗಿ ಆಯ್ಕೆಯಾಗಿವೆ.


ನಾಲ್ಕೂ ಕಥೆಗಳಿಗೂ ತಲಾ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಕಥೆಗಳು ‘ಅಕ್ಷರ ಸಂಗಾತ’ ನವೆಂಬರ್ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ. 2022 ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ‘ಅಕ್ಷರ ಸಂಗಾತ’ ಪತ್ರಿಕೆಯ ನಾಲ್ಕನೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.


ಹಿರಿಯ ಕಥೆಗಾರರಾದ ಬಾನು ಮುಷ್ತಾಕ್ ಹಾಗೂ ಜಿ.ವಿ. ಆನಂದಮೂರ್ತಿ ತೀರ್ಪುಗಾರರಾಗಿದ್ದರು ಎಂದು ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top