|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾವಗೀತೆ: ಸ್ನೇಹ ದಂಗೆ

ಭಾವಗೀತೆ: ಸ್ನೇಹ ದಂಗೆಎರಡು ಮನಗಳ ನಡುವೆ ಉದಿಸಿತು

ಕುರುಡು ಸೇಡಿನ ಗೋಡೆಯು|

ಮೆರೆವ ಯಶವನು ಸಹಿಸಲಾಗದೆ

ಬಿರುಕ ಮಾಡಿತು ಪೀಡೆಯು|


ಕರಕೆ ಕರವನು ಹಿಡಿವ ಮನಗಳು

ಹರಕೆ ಕುರಿಗಳೆ ಆದವು|

ಶಿರಕೆ ಏರಿದ ಮದದ ಅಮಲಿಗೆ

ಕೆರಳಿ ನರಕಕೆ ಹೋದವು|


ವರದ ಗೆಳೆತನ ಉರುಳಿ ಬೀಳಲು

ಕೊರಗ ತೊಡಗಿತು ಜೀವನ|

ಬರದೆ ಮರಳಿ ಮೊದಲ ವಿನಯವು

ಹೊರಗೆ ಉಳಿಯಿತು ಚೇತನ|


ಅರಳಿ ಹೂಗಳು ನಗತ ಜೊತೆಯಲಿ

ಪುರಕೆ ಕೀರುತಿ ನೀಡಲಿ|

ಇರಿದು ಸೋಲನು ಬಿರಿದು ಅರಳಲಿ

ಇರಿಸಿ ಜೇನನು ಗೂಡಲಿ| 


- ಕಾ.ವೀ.ಕೃಷ್ಣದಾಸ್


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post