||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೇಸೀ ಗೋವು ಆಧರಿತ ವಿಷಮುಕ್ತ ಸಹಜ ಕೃಷಿಯ ಅಕ್ಕಿ ಎಲ್ಲಿ ಸಿಗುತ್ತದೆ ಅಂತ ಹುಡುಕುತ್ತಿದ್ದೀರಾ...? ಹಾಗಾದರೆ ಇದನ್ನು ಓದಿ

ದೇಸೀ ಗೋವು ಆಧರಿತ ವಿಷಮುಕ್ತ ಸಹಜ ಕೃಷಿಯ ಅಕ್ಕಿ ಎಲ್ಲಿ ಸಿಗುತ್ತದೆ ಅಂತ ಹುಡುಕುತ್ತಿದ್ದೀರಾ...? ಹಾಗಾದರೆ ಇದನ್ನು ಓದಿ


ಉಡುಪಿ: ಮಣಿಪಾಲದಲ್ಲಿ ದೇಸೀ ಗೋವು ಆಧರಿತ ನೈಸರ್ಗಿಕ ಹಾಗೂ ವಿಷಮುಕ್ತ ಕೃಷಿ ನಡೆಸುತ್ತಿರುವ ಶಿವರಾಮ್ ಭಟ್ ಅವರ ಗದ್ದೆಯಲ್ಲಿ ಬೆಳೆದ ಹೊಂಬಣ್ಣದ ಭತ್ತದ ತೆನೆಗಳ ಸುಂದರ ನೋಟವಿದು.


ರೈತರ ಬದುಕು ಸದಾ ಹವಾಮಾನದ ಜತೆಗಿನ ಜೂಜಾಟ ಎಂಬುದು ಲಾಗಾಯ್ತಿನಿಂದಲೂ ಪ್ರಚಲಿತದಲ್ಲಿರುವ ಮಾತು ಇಂದಿಗೂ ಪ್ರಸ್ತುತ. ಅದರಲ್ಲೂ ಭತ್ತದ ಕೃಷಿಕರ ಪಾಡು ಬಹಳ. ಕೊಯ್ಲಿಗೆ ಸಜ್ಜಾಗಿ ನಿಂತ ಭತ್ತದ ತೆನೆಗೆಳು ತಲೆದೂಗಿ ತೊನೆಯುತ್ತಿರುವ ಕಾಲದಲ್ಲಿ ಪ್ರತಿ ವರ್ಷವೂ ಅಕಾಲಿಕ ಮಳೆ ಸುರಿದು ರೈತರ ಪರಿಶ್ರಮವನ್ನು ಮಣ್ಣುಪಾಲು ಮಾಡುವುದು ವಿಧಿ ವಿಪರೀತ.


ಹಾಗಿದ್ದರೂ ಸಹಜ ಹಾಗೂ ನೈಸರ್ಗಿಕ ಕೃಷಿಯನ್ನೇ ನಡೆಸುತ್ತ ಬಂದಿರುವ ತಮಗೆ ಪ್ರಕೃತಿ ಮಾತೆ ಯಾವತ್ತೂ ಮೋಸ ಮಾಡಿಲ್ಲ ಎನ್ನುತ್ತಾರೆ ಶಿವರಾಮ ಭಟ್ಟರು.


ತಾವು ಬೆಳೆದ ಭತ್ತವನ್ನು, ತಮ್ಮ ಬಳಕೆಗೆ ತೆಗೆದಿಟ್ಟುಕೊಂಡು ಉಳಿಯುವ ಭತ್ತವನ್ನು ಪಾಲಿಶ್ ರಹಿತ ಆರೋಗ್ಯಕರ ಅಕ್ಕಿಯನ್ನಾಗಿ ಮಾಡಿ ಗ್ರಾಹಕರಿಗೆ ನೇರ ಮಾರಾಟ ಮಾಡುತ್ತ ಬಂದಿದ್ದಾರೆ. ವ್ಯವಸ್ಥಿತವಾದ ಯೋಜನೆಯ ಮೂಲಕ ನೈಸರ್ಗಿಕ ಕೃಷಿ ನಡೆಸುತ್ತಿರುವ ಅವರ ಗದ್ದೆಯಲ್ಲಿ ಇಂದಿನಿಂದ ಭತ್ತದ ಕೊಯ್ಲು ಆರಂಭವಾಗಿದೆ.


ಅಂದಾಜು ನಾಲ್ಕೂವರೆ-ಐದು ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ಹಂತ ಹಂತವಾಗಿ ಕೊಯ್ಲು ನಡೆಯುತ್ತಿದ್ದು ಆಗಾಗ ಬರುವ ಮಳೆ ಅಡ್ಡಿ ಉಂಟು ಮಾಡುತ್ತಿದೆ. ಮಳೆಯೂ ನಿಸರ್ಗದ ಕೃಪೆಯೇ ಆಗಿರುವುದರಿಂದ ಅದರ ವಿರುದ್ಧ ನಾವು ಗೊಣಗಾಟ ಮಾಡಿ ಪ್ರಯೋಜನವಿಲ್ಲ. ಹೊಂದಿಕೊಳ್ಳಬೇಕಾದವರು ಮನುಷ್ಯರೇ ಹೊರತು ಮಳೆಯಲ್ಲವಲ್ಲ ಎಂಬುದು ಅವರ ನಿಲುವು.


ಭತ್ತದ ಕೊಯ್ಲು ಮುಗಿದ ಬಳಿಕ ಅಗತ್ಯವಿದ್ದಷ್ಟು ಬಿಸಿಲಲ್ಲಿ ಒಣಗಿಸಿ ಮಿಲ್‌ನಲ್ಲಿ ಅಕ್ಕಿ ಮಾಡಿಸಿ ಇಡುವ ಶಿವರಾಮ ಭಟ್ಟರು 25 ಕೆಜಿ ಚೀಲಗಳಲ್ಲಿ ಅಕ್ಕಿ ಮಾರಾಟ ಮಾಡುತ್ತಾರೆ. ಕೆ.ಜಿಗೆ 60 ರೂ ಬೆಲೆ. (ಕೊರಿಯರ್ ಶುಲ್ಕ ಪ್ರತ್ಯೇಕ). ದೂರ ದೂರದ ಊರುಗಳಿಂದಲೂ ಆರೋಗ್ಯದ ಕಾಳಜಿಯುಳ್ಳ ಗ್ರಾಹಕರು ಅವರಿಂದ ಅಕ್ಕಿಯನ್ನು ತರಿಸಿಕೊಳ್ಳುತ್ತಾರೆ. ಗ್ರಾಹಕರಿಂದ ಮುಂಚಿತವಾಗಿಯೇ ಆರ್ಡರ್‌ ತೆಗೆದುಕೊಳ್ಳುವ ಭಟ್ಟರು ಈ ಋತುವಿನ ಬೆಳೆಯನ್ನು 2022ರ ಜನವರಿಯ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಡೆಲಿವರಿ ಕೊಡುವುದಾಗಿ ಪ್ರಕಟಿಸಿದ್ದಾರೆ. 


ಆಸಕ್ತ ಗ್ರಾಹಕರು ಶಿವರಾಮ ಭಟ್ಟರು ಬೆಳೆಸಿದ ಅಕ್ಕಿಯ ಊಟದ ಸವಿಯನ್ನು ಅನುಭವಿಸಬಹುದು.


ಹೆಚ್ಚಿನ ಮಾಹಿತಿಗೆ-  83103 32453- ಈ ಸಂಖ್ಯೆಯನ್ನು ಸಂಪರ್ಕಿಸಬಹುದು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post