ಕಾಸರಗೋಡು: ಹಿರಿಯ ಸಾಹಿತಿ, ಸಂಘಟಕ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರು ಹಾಗೂ ಪ್ರತಿಭಾ ಪೋಷಕರಾದ ವಿ. ಬಿ. ಕುಳಮರ್ವ ಅವರಿಗೆ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ ವಿಂಶತಿ ವರ್ಷಾಚರಣೆ ಅಂಗವಾಗಿ ಅ.16ರ ಶನಿವಾರ ಗುರುನಮನ ಸಲ್ಲಿಸಲಾಗುವುದು. ಇದರ ಅಂಗವಾಗಿ ಅಂದು ಅಪರಾಹ್ನ 3:30ಕ್ಕೆ ವಿ.ಬಿ ಕುಳಮರ್ವ ಅವರ ನಾರಾಯಣಮಂಗಲ ಮನೆಯಲ್ಲಿ ಗಮಕ ವಾಚನ- ಪ್ರವಚನ ನಡೆಯಲಿದೆ.
ನೀರ್ಚಾಲಿನ ಎಂಎಸ್‌ಸಿಎಚ್ಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶಮಾ ಜೈಮಿನಿ ಭಾರತ ಕಾವ್ಯದ ಆಯ್ದ ಭಾಗವನ್ನು ವಾಚನ ಮಾಡಲಿದ್ದಾಳೆ. ನಿವೃತ್ತ ಶಿಕ್ಷಕ ಶ್ರೀಹರಿ ಭಟ್ ಪೆಲ್ತಾಜೆ ವ್ಯಾಖ್ಯಾನ ಮಾಡಲಿರುವರು.
ಗಮಕ ಕಲಾ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಅವರು ನೇತೃತ್ವ ವಹಿಸಲಿದ್ದಾರೆ.