|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಉದ್ಯೋಗದ ಸುರಿಮಳೆ

ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಉದ್ಯೋಗದ ಸುರಿಮಳೆ

ಕೊರೋನಾ ಸಂದರ್ಭದಲ್ಲೂ ಸಿಎಂಆರ್ ನಲ್ಲಿ ಶೇ.100ರಷ್ಟು ಕ್ಯಾಂಪಸ್ ನಿಯೋಜನೆ

 ಬೆಂಗಳೂರು: ಸಾಂಕ್ರಾಮಿಕ ರೋಗ ಕೊರೋನಾ ಔದ್ಯೋಗಿಕ ಮಾರುಕಟ್ಟೆಯಲ್ಲಿಯ ಕುಸಿತ ಸೇರಿದಂತೆ ಅನೇಕ ಆತಂಕಗಳನ್ನು ಹುಟ್ಟುಹಾಕಿದೆ. ಆದರೆ ಸಿಎಂಆರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿಷಯಕ್ಕೆ ಬಂದರೆ, ನೇಮಕಾತಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಿಶ್ವವಿದ್ಯಾನಿಲಯವು ಇಂತಹ ಸಂಕಷ್ಟದ ಸಂದರ್ಭದಲ್ಲೂ ತನ್ನ ವಿದ್ಯಾರ್ಥಿಗಳನ್ನು ಭಾರತದ ಉನ್ನತ ಕಂಪನಿಗಳಲ್ಲಿ ನೇಮಕ ಮಾಡಿಸಿದೆ.


120 ಉನ್ನತ ಸಂಸ್ಥೆಗಳು ತಮ್ಮ ವರ್ಚುವಲ್ ಮೋಡ್ ಮೂಲಕ ಸಿಎಂಆರ್ ವಿಶ್ವವಿದ್ಯಾಲಯದಿಂದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿವೆ. ಕೌಶಲ್ಯದೊಂದಿಗೆ ಶಿಕ್ಷಣವನ್ನು ನೀಡುವುದು ಸಿಎಂಆರ್ ವಿವಿ ವಿದ್ಯಾರ್ಥಿಗಳಿಗೆ ಪ್ಲಸ್ ಪಾಯಿಂಟ್ ಆಗಿದೆ. ವಿಶ್ವವಿದ್ಯಾಲಯವು ತನ್ನ ಎಂಬಿಎ ಮತ್ತು ಇತರ ವಿದ್ಯಾರ್ಥಿಗಳಿಗೆ ಉದ್ಯಮ ಆಧಾರಿತ ಶಿಕ್ಷಣವನ್ನು ಒದಗಿಸುತ್ತಿದೆ.


ಸೆರ್ನರ್ ಕಾರ್ಪೊರೇಶನ್ ಇಂಡಿಯಾ, ಬಾಷ್ ಲಿಮಿಟೆಡ್, ಕ್ಯಾಪ್‌ಜೆಮಿನಿ ಇಂಡಿಯಾ, ಇನ್ಫೋಸಿಸ್ ಲಿಮಿಟೆಡ್, ಸಿಂಪ್ಲಿಲೀರ್ನ್, ಜೊಮಾಟೊ ಇಂಡಿಯಾ, ಬಜಾಜ್ ಅಲಿಯಾನ್ಸ್, ಕೆಪಿಎಂಜಿ ಇಂಡಿಯಾ, ವಿಪ್ರೋ, ಎಸ್‌ಎಲ್‌ಕೆ ಸಾಫ್ಟ್‌ವೇರ್, ಫ್ಲಿಪ್‌ಕಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಎಚ್‌ಪಿ ಎಂಟರ್‌ಪ್ರೈಸ್ ಲಿಮಿಟೆಡ್, ಮತ್ತು ಥಾಮ್ಸನ್ ರಾಯಿಟರ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಇವು ಸಿಎಮ್‌ಆರ್‌ಯು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ ಪ್ರಮುಖ ಕಂಪನಿಗಳು. ಇದು ನಂಬಲಸಾಧ್ಯವೆನಿಸಿದರೂ ನಿಜ.


ಸಿಎಂಆರ್ ವಿವಿಯಿಂದ ಹೊಸದಾಗಿ ಎಂಬಿಎ ಪದವೀಧರರಾಗಿರುವ ಸುಬ್ಬಯ್ಯ ಕೆಕೆ ವರ್ಷಕ್ಕೆ 7 ಲಕ್ಷ ರೂ.ಗಳ ವೇತನ ಪ್ಯಾಕೇಜ್ ಪಡೆದಿದ್ದಾರೆ, ಅಶುತೋಷ್ ಕುಮಾರ್, ಕ್ಯಾಲೆಬ್ ಎಸ್, ಹನಿ ಸೈಯದ್ ಮತ್ತು ಅಖಿಲ್ ಹರಿ ಅವರು ವಾರ್ಷಿಕ 6 ಲಕ್ಷ ರೂ. ಪ್ಯಾಕೇಜ್ ಪಡೆದಿದ್ದಾರೆ.


ಸಿಎಂಆರ್ ನ ಹೊಸ ಎಂಬಿಎ ಪದವೀದರರಿಗೆ ಸರಾಸರಿ ನೀಡಲಾದ ವೇತನ ರೂ 4.3 ಲಕ್ಷ ರೂ. ಬಿಬಿಎ ವಿಭಾಗದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ವಾರ್ಷಿಕ 6 ಲಕ್ಷ ರೂ., ಬಿ.ಟೆಕ್ ವಿಭಾಗದ ಪದವೀದರರು ವಾರ್ಷಿಕ 11 ಲಕ್ಷ ರೂ. ವರೆಗೂ ಪ್ಯಾಕೇಜ್ ಪಡೆದುಕೊಂಡಿದ್ದಾರೆ.


ಈ ಕ್ಯಾಂಪಸ್ ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ಸುಬ್ಬಯ್ಯ, "ಕೋವಿಡ್ -19 ಸಾಂಕ್ರಾಮಿಕ ಉತ್ತುಂಗದಲ್ಲಿದ್ದಾಗ ಕಾಲೇಜು ನೀಡಿದ ಅವಕಾಶವನ್ನು ನಾನು ಪಡೆದುಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ನನ್ನನ್ನು ನೇಮಿಸಿಕೊಂಡ ಕಂಪನಿ ನನ್ನ ಪ್ರತಿಭೆಯನ್ನು ಗುರುತಿಸಿದೆ" ಎಂದು ಹೇಳುತ್ತಾರೆ.


ಸಾಂಕ್ರಾಮಿಕ ಕೊರೋನಾ ಸಮಯದಲ್ಲಿಯೂ ಸಹ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಿಎಂಆರ್ ವಿವಿ ಅನೇಕ ಅವಕಾಶಗಳನ್ನು ನೀಡಿದೆ ಎಂದು ಕ್ಯಾಲೆಬ್ ಎಸ್ ಹೇಳುತ್ತಾರೆ.


"ವಿಶ್ವವಿದ್ಯಾನಿಲಯದ ನಿಯೋಜನೆ ವಿಭಾಗವು ಯಾವಾಗಲೂ ನಮ್ಮೊಂದಿಗೆ ನಿಂತಿದೆ. ಇದು ಲಾಭದಾಯಕ ಉದ್ಯೋಗಗಳನ್ನು ಪಡೆಯಲು ನಮಗೆ ಸಹಾಯ ಮಾಡಿದೆ" ಎಂದು ಅವರು ಹೇಳಿದರು.

ಅಖಿಲ್ ಹರಿ, ಉದ್ಯೋಗದ ಅವಕಾಶವನ್ನು ಪಡೆದ ಇನ್ನೊಬ್ಬ ಅದೃಷ್ಟಶಾಲಿ ವಿದ್ಯಾರ್ಥಿ. ಯುವ ವಿಶ್ವವಿದ್ಯಾಲಯವಾಗಿದ್ದರೂ ಸಿಎಂಆರ್ ವಿವಿ ಸಾಂಕ್ರಾಮಿಕ ಸಂಕಷ್ಟದಲ್ಲೂ ಅದ್ಭುತವಾದ ಬೆಂಬಲವನ್ನು ನೀಡಿದೆ ಎಂದು ಹೇಳುತ್ತಾರೆ. "ನನ್ನ ಉದ್ಯೋಗದ ಪ್ಯಾಕೇಜ್ ಬಗ್ಗೆ ನನಗೆ ಸಂತೋಷವಾಗಿದೆ" ಎಂದು ಅವರು ಹೇಳಿದರು.


ಕೇವಲ ಕೆಲವು ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದಿದ್ದಾರೆ ಎನ್ನುವುದಕ್ಕಷ್ಟೆ ಇದು ಸೀಮಿತವಾಗಿಲ್ಲ. ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ಸಂಬಳವು ಕೋವಿಡ್ ಪೂರ್ವದ ಸಮಯಕ್ಕಿಂತ ಉತ್ತಮವಾಗಿದೆ ಎನ್ನುವುದು ವಿಶೇಷ.  ಮಾರ್ಕೆಟಿಂಗ್ ವಿಭಾಗದ ವಿದ್ಯಾರ್ಥಿಗಳ ಪಾಲಿಗೆ ಇದು ಅಚ್ಛರಿ ಮೂಡಿಸಿದೆ.


ನಿಸ್ಸಂದೇಹವಾಗಿ, ಸಾಂಕ್ರಾಮಿಕವು 2020 ಬ್ಯಾಚ್‌ನ ನಿಯೋಜನೆ ಭವಿಷ್ಯವನ್ನು ಹಾನಿಗೊಳಿಸಿದೆ. ಆದಾಗ್ಯೂ, ಕಳೆದ 8 ರಿಂದ 10 ತಿಂಗಳುಗಳಲ್ಲಿ, ಮಾರುಕಟ್ಟೆಯು ಬೆಳವಣಿಗೆ ಕಾಣುತ್ತಿದೆ. ಬೇಡಿಕೆ ಮತ್ತು ಪೂರೈಕೆಯ ಅಸಮಾನತೆಯಿಂದಾಗಿ ನೇಮಕಾತಿ ಆರಂಭವಾಗಿದೆ. ಉದ್ಯೋಗದಾತರು ತಮ್ಮ ಸರಾಸರಿ ನೇಮಕಾತಿ ಪ್ರಮಾಣಕ್ಕಿಂತ ಎರಡರಿಂದ ಮೂರು ಪಟ್ಟು ಹೆಚ್ಚು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಲಾಕ್ಡೌನ್ ಮತ್ತು ನಂತರದ ಆರ್ಥಿಕತೆಯ ಕುಸಿತದ ಸಮಯದಲ್ಲಿ ಪಾಠಗಳನ್ನು ಕಲಿಸುವುದರ ಜೊತೆಗೆ ಸಿಎಂಆರ್ ವಿವಿ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಹೆಚ್ಚಿಸಿ ಅವರ ಸಾಮರ್ಥ್ಯವನ್ನು ದ್ವಿಗುಣಗೊಲಿಸಿತು. ಜೊತೆಗೆ, ಅವರಿಗೆ ಸಮರ್ಥ ಉದ್ಯೋಗಗಳನ್ನು ಒದಗಿಸಿಕೊಟ್ಟಿತು.


ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:

Dr. Lakhsminarayan

Director of Training and Placements at CMRU

M: 7022007677 | director.tp@cmr.edu.in


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post