ಸರಕಾರಿ ಮತ್ತು ಕುಮ್ಕಿ ಜಮೀನು ಸಕ್ರಮೀಕರಣ ಅರ್ಜಿ ನಮೂನೆ 57ರ ಸ್ವೀಕಾರಕ್ಕೆ ಮನವಿ

Upayuktha
0


ಬಂಟ್ವಾಳ: ಈ ವಿಷಯಕ್ಕೆ ಸಂಬಂಧಿಸಿದಂತೆ ಕರಾವಳಿ ಜಿಲ್ಲೆಯ ಕೃಷಿಕರು ಮತ್ತು ರೈತರು ತಮ್ಮ ಸ್ವಂತ ಜಮೀನು ತಾಗಿಕೊಂಡು ಇರುವ ಸರಕಾರಿ, ಕುಮ್ಕಿ, ಜಮೀನುಗಳನ್ನು ಆಕ್ರಮಿಸಿ ಕೃಷಿ ಮಾಡಿಕೊಂಡು ಬಂದಿದ್ದು ಸದ್ರಿ ಜಮೀನು ಸಕ್ರಮೀಕರಣ ಗೊಳಿಸಲು ಹಲವಾರು ರೈತರು ಅರ್ಜಿ ನೀಡಿರುತ್ತಾರೆ. ಸದ್ರಿ ನಮೂನೆ 57ರ ಅರ್ಜಿಗಳನ್ನು 2019 ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಡೆಹಿಡಿಯಲಾಗಿತ್ತು.


ನಂತರದ ದಿನಗಳಲ್ಲಿ ಸರಕಾರದ ಸಚಿವ ಸಂಪುಟ ಸಭೆಯಲ್ಲಿ 94c,94cc, ಹಾಗೂ ನಮೂನೆ 57 ರ ಅರ್ಜಿಗಳನ್ನು ಮರು ಸ್ವೀಕರಿಸಲು ನಿರ್ಣಯ ಮಾಡಲಾಗಿದೆ. ಆದರೆ ಕಂದಾಯ ಇಲಾಖೆ 94c, 94cc ಅರ್ಜಿ ಸ್ವೀಕಾರಕ್ಕೆ ಮಾತ್ರ ಆದೇಶ ಹೊರಡಿಸಿ ನಮೂನೆ 57ರ ಅರ್ಜಿ ಸ್ವೀಕಾರಕ್ಕೆ ಆದೇಶ ಮಾಡಿರುವುದಿಲ್ಲ.


ಈಗಾಗಲೇ 2018ರಲ್ಲಿ ಕುಮ್ಕಿ ಕೃಷಿ ಜಮೀನು ಸಕ್ರಮೀಕರಣಕ್ಕೆ ಸಂಬಂಧಿಸಿದಂತೆ ನಮೂನೆ 57ರಲ್ಲಿ ಅರ್ಜಿ ನೀಡಿದ್ದರೂ ಸಹ ಸಂಬಂಧ ಪಟ್ಟವರಿಗೆ ಸಾಗುವಳಿ ಚೀಟಿ ನೀಡಲು ಅಧಿಕಾರಿಗಳು ಸಬೂಬು ಕಾರಣ ನೀಡಿ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಸಾಗುವಳಿ ಚೀಟಿ ಅಪೇಕ್ಷಿಸಿ ನಮೂನೆ 57ರಲ್ಲಿ ಅರ್ಜಿ ನೀಡಿದ ರೈತರು ಹಕ್ಕು ಪತ್ರಕ್ಕಾಗಿ ಎದುರು ನೋಡುವಂತಾಗಿದೆ.


ಆದುದರಿಂದ ಕುಮ್ಕಿ ಜಮೀನುದಾರರಿಗೆ ಅನುಕೂಲವಾಗುವಂತ ನಮೂನೆ 57ರ ಅರ್ಜಿಗಳನ್ನು ಮರು ಸ್ವೀಕರಿಸಲು ಹಾಗೂ ಕುಮ್ಕಿ ಜಮೀನುಗಳಿಗೆ ಸಹ ಅಕ್ರಮ ಸಕ್ರಮ ಸಮಿತಿಯ ಮೂಲಕ ಹಕ್ಕು ಪತ್ರ ನೀಡಲು ಸೂಕ್ತ ನಿರ್ದೇಶನ, ಆದೇಶ ಹೊರಡಿಸುವಂತೆ ಬಂಟ್ವಾಳ ತಾಲೂಕು ಪಂಚಾಯತ್‌ ಸದಸ್ಯ ಪ್ರಭಾಕರ ಪ್ರಭು ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top