ಅಪೂರ್ವ ಉಬ್ರಂಗಳ ಇವರಿಗೆ ಫಿಸಿಕಲ್ ಕೆಮೆಸ್ಟ್ರಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್

Upayuktha
0


ಬದಿಯಡ್ಕ: ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 2019-20ನೇ ಸಾಲಿನ ಸ್ನಾತಕೋತ್ತರ ಪರೀಕ್ಷೆ ಎಂಎಸ್‌ಸಿ ಫಿಸಿಕಲ್ ಕೆಮೆಸ್ಟ್ರಿ ವಿಭಾಗದಲ್ಲಿ ಅಪೂರ್ವ ಉಬ್ರಂಗಳ ಅವರು ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್ ಪಡೆದಿರುತ್ತಾರೆ.


ಶನಿವಾರ ನಡೆದ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧಾರವಾಡ ಎಗ್ರಿಕಲ್ಚರಲ್ ಸೈನ್ಸ್ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಮಹಾದೇವಪ್ಪ ಬಿ. ಚಟ್ಟಿ ಇವರು ಪ್ರಶಸ್ತಿ ಪ್ರದಾನ ಮಾಡಿದರು.


ಉಬ್ರಂಗಳ ಜಯರಾಜ ಕುಣಿಕುಳ್ಳಾಯ ಹಾಗೂ ಪ್ರತಿಭಾ ರಾಣಿ ಇವರ ಪುತ್ರಿ. ಪೆರಡಾಲ ನವಜೀವನ ಪ್ರೌಢಶಾಲೆ, ಎಡನ್ನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ, ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಸೈನ್ಸ್ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಗಮನಾರ್ಹ ಸಾಧನೆಯನ್ನು ಗೈದು ನಾಡಿಗೆ ಕೀರ್ತಿಯನ್ನು ತಂದಿದ್ದಾರೆ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top