|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 23ನೇ ಭಜನಾ ಕಮ್ಮಟ: ಶಿಬಿರಾರ್ಥಿಗಳೊಂದಿಗೆ ಧರ್ಮಾಧಿಕಾರಿಗಳ ಸಂವಾದ

23ನೇ ಭಜನಾ ಕಮ್ಮಟ: ಶಿಬಿರಾರ್ಥಿಗಳೊಂದಿಗೆ ಧರ್ಮಾಧಿಕಾರಿಗಳ ಸಂವಾದ




ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 23ನೇ ವರ್ಷದ ಭಜನಾ ತರಬೇತಿ ಕಮ್ಮಟದ ಆರನೇ ದಿನದಂದು ಪೂಜ್ಯ ಶ್ರೀ ಡಿ ವೀರೇಂದ್ರ ಹೆಗ್ಗಡೆಯರು ಶಿಬಿರಕ್ಕೆ ಆಗಮಿಸಿ ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.


ಸದಾ ಚಟುವಟಿಕೆಯಿಂದ ಇರುವವರನ್ನು ಕಳುಹಿಸಿ, ಹಿಡಿದಿಟ್ಟುಕೊಳ್ಳುವುದು ಕಷ್ಟ. ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಕಮ್ಮಟ ಪೂರಕವಾಗಿದೆ. ಬಾಲ್ಯದ ಜೀವನಕ್ಕೆ ಮನೆಯಲ್ಲೇ ಸಂಸ್ಕಾರ ಕೊಡುವ ಕೆಲಸವಾಗಬೇಕಾಗಿದೆ ಎಂದು ತಿಳಿಸಿದರು.


ಅತಿಥಿಗಳು ಬಂದಾಗ ಹೇಗಿರಬೇಕು, ಶಾಲೆಯಲ್ಲಿ ಸಾರ್ವಜನಿಕವಾಗಿ ಹೇಗಿರಬೇಕು ಎಂಬ ತಿಳುವಳಿಕೆ ಕೊಡಬೇಕು. ಮೊದಲಿಗೆ ಜಾತ್ರೆ, ಬ್ರಹ್ಮಕಲಶದಲ್ಲಿ ಬೀಡಿ, ಗುಟ್ಕಾ ಸೇವನೆ ಇತ್ತು. ಪ್ರಸ್ತುತ ಕಡಿಮೆಯಾಗಿದೆ. ಬೀಡಿಯ ಹೊಗೆಯಿಲ್ಲ, ಪರಿಮಳಯುಕ್ತವಾದ ಅಗರಬತ್ತಿಯ ಹೊಗೆ ಇದೆ ಎಂದರು.


ಜಾತ್ರೆ ಬ್ರಹ್ಮಕಲಶದಲ್ಲಿ ಯೋಜನೆಯ ಒಬ್ಬ ಕಾರ್ಯಕರ್ತ ಇದ್ದರೆ ಸಾಕು ಎಲ್ಲವು ಸುವ್ಯವಸ್ಥಿತವಾಗಿ ಸಂಘಟಿಸುತ್ತಾರೆ. ಯೋಜನೆಯ ಕಾರ್ಯಕರ್ತರು ಹಾಗೂ ಭಜಕರನ್ನು ಮೆರವಣಿಗೆಯಲ್ಲಿ ಕಾಣುತ್ತಿದ್ದೇವೆ. ಪ್ರತೀ ಗ್ರಾಮದಲ್ಲಿ ಭಜನಾ ಮಂಡಳಿಯ ಮೂಲಕ ಭಜನಾ ಪಾಠ ನೀಡುತ್ತಿದ್ದಾರೆ. ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ದಾಸೋಹ ಅಂದರೆ  ಭಕ್ತರಿಗೆ ಬರುವ ಭಕ್ತರಿಗೆ ಅನ್ನದಾನ ನೀಡುವುದು. ಬಸವಣ್ಣನವರು ಪ್ರತೀ ದಿನ ಒಬ್ಬ ಭಕ್ತರಿಗೆ ದಾನ ನೀಡಿ ದಾಸೋಹ ಮಾಡಿ ಊಟ ಮಾಡಿಸುತ್ತಿದ್ದರು. ಭಕ್ತರ ಸೇವೆಯನ್ನು ಶ್ರೀಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ಭಗವಂತನಿಗೆ ನಾವು ಸಮರ್ಪಿಸಿಕೊಳ್ಳಬೇಕು. ಭಗವಂತನಿಗೆ ನವವಿಧದ ಭಕ್ತಿಯನ್ನು ಸಮರ್ಪಿಸಬೇಕು. ಭಗವಂತ ಸದಾ ನಮ್ಮ ಒಳಗೆ ಇದ್ದಾನೆ ಎಂಬ ಭಾವನೆ ಇರಬೇಕು ಎಂದು ನುಡಿದರು.


ಕೃಷ್ಣನ ಜೊತೆಗೆ ಅನೇಕ ಹುಡುಗರು ಆಟವಾಡುತ್ತಿದ್ದರು; ಅನೇಕ ಮಹಿಳೆಯರು ತಾಯಿಯ ರೂಪದಲ್ಲಿದ್ದು ಬೆಣ್ಣೆಯನ್ನು ಕೊಟ್ಟರು. ಕೃಷ್ಣ ತನ್ನ ಬಾಲ್ಯದ ಲೀಲೆಯನ್ನು ತೋರಿಸಿದ. ಮಕ್ಕಳ ತುಂಟತನವನ್ನು ನೋಡಿ ನಾವು ಆನಂದಿಸಬೇಕು. ಮಕ್ಕಳಲ್ಲಿ ಭಜನಾ ಸಂಸ್ಕಾರವನ್ನು ಬೆಳೆಸಬೇಕು. ಸಾಮಾಜಿಕವಾಗಿ ಬದುಕಲು ಸಂಸ್ಕಾರ ಬೇಕು. ಓದುವ ಅಭ್ಯಾಸ ಭಜನಾ ಮಂಡಳಿಯ ಇತರ ಸಭೆಗಳಲ್ಲಿ ಮಾತನಾಡುವ ಅಭ್ಯಾಸವನ್ನು ಬೆಳೆಸಿಕೊಂಡು ಗ್ರಾಮೀಣದ ಸಾಮಾಜಿಕ ಪರಿವರ್ತನೆಯೊಂದಿಗೆ ಧಾರ್ಮಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಕರೆ ನೀಡಿದರು.


ಕಮ್ಮಟದಲ್ಲಿ ಉಪಸ್ಥಿತರಿದ್ದ ಶ್ರೀ ಮೋಹನದಾಸ ಸ್ವಾಮೀಜಿಗಳವರು ಶ್ರೀಧಾಮ ಮಾಣಿಲ ಇವರು ಮಾತನಾಡಿ,  ಭಜನಾ ತರಬೇತಿಯಲ್ಲಿ ಪಡೆದ ಭಜನಾ ಪ್ರಸಾದವನ್ನು ಊರಿನಲ್ಲಿ ಮಂಡಳಿಗಳನ್ನು ಸಂಘಟಿಸಿ ಭಾವೈಕ್ಯತೆಯನ್ನು ಬೆಳೆಸಿಕೊಳ್ಳಬೇಕು. ಆರ್ಥಿಕತೆ ಮತ್ತು ಸಾಮರಸ್ಯ ಸ್ವಚ್ಚತೆಗೆ ಪ್ರಾಮುಖ್ಯತೆ ಇರಲಿ ನೀವು ಸಂಘಟಿಸಿದ ಕಾರ್ಯಕ್ರಮದಲ್ಲಿ ಭಜನಾ ಪರಿಷತ್ತಿನ ಮಾರ್ಗದರ್ಶನ ಸದಾ ನಿಮ್ಮ ಜೊತೆಯಲ್ಲಿರುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿಗಳಾದ ಶ್ರೀಮತಿ ಮಮತಾರಾವ್‍ರವರು ನಿರೂಪಿಸಿ ವಂದಿಸಿದರು.


ಈ ಕಾರ್ಯಕ್ರಮದಲ್ಲಿ ಭಜನಾ ಪರಿಷತ್‍ನ ಅಧ್ಯಕ್ಷರಾದ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಬಿ. ಜಯರಾಮ ನೆಲ್ಲಿತ್ತಾಯ. ಸೀತಾರಾಮ ತೋಳ್ಪಡಿತ್ತಾಯ, ಕೋಶಾಧಿಕಾರಿಗಳಾದ ಡಿ. ಧರ್ಣಪ್ಪ, ಸದಸ್ಯರಾದ ಭುಜಬಲಿ ಬಿ, ರತ್ನವರ್ಮ ಜೈನ್, ಶ್ರೀನಿವಾಸ್‍ರಾವ್, ಮೋಹನ್ ಶೆಟ್ಟಿ, ಶ್ರೀಮತಿ ಸುನಿತಾರವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post