"ಬಾಕಾಹು ತಯಾರಿ ಸೇವನೆ ಜೀವನದ ಮರೆಯಲಾಗದ ಅನುಭವ"

Upayuktha
0


 -ಕೇರಳದ 57 ವರ್ಷದ 'ಕರ್ಷಕಶ್ರೀ’ ಪ್ರಶಸ್ತಿ ವಿಜೇತರ ಉದ್ಗಾರ

K. Krishnan Unni- 94009 34852 (6- 8 AM)


"ನಮ್ಮದೇ ಬಾಳೆಕಾಯಿಯನ್ನು ಮನೆಯಲ್ಲೇ ಹುಡಿ ಮಾಡುವುದು ಮತ್ತದರ ತಿಂಡಿ ಸವಿಯುವುದು ನನ್ನ ಜೀವನದ ಮರೆಯಲಾಗದ ಅನುಭವ" ಎನ್ನುತ್ತಾರೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೃಷ್ಣನ್ ಉಣ್ಣಿ. ಇವರು 2020ರಲ್ಲಿ ಖ್ಯಾತ 'ಮಲೆಯಾಳ ಮನೋರಮಾ' ದೈನಿಕದಿಂದ ಕರ್ಷಕಶ್ರೀ ಪ್ರಶಸ್ತಿ ಪಡೆದ ಕೃಷಿಕರು.


ಜೀವನದಲ್ಲೇ ಮೊದಲ ಬಾರಿಗೆ ಕಳೆದ ವಾರ ಇವರು ಮನೆಯಲ್ಲಿ ಬಾಳೆಕಾಯಿಯ ಹುಡಿ ತಯಾರಿಸಿಕೊಂಡರು. ಅದರಿಂದ ದಿನನಿತ್ಯದ ತಿಂಡಿಗಳಾದ ಇಡ್ಲಿ, ದೋಸೆ, ಪುಟ್ಟು, ಉಣ್ಣಿಯಪ್ಪಮ್, ಉಪ್ಪಿಟ್ಟು, ಚಪಾತಿ ಅಲ್ಲದೆ ಮೈಸೂರ್ ಪಾಕ್ ಕೂಡಾ ಮಾಡಿದರು. ಈ ತಿಂಡಿಗಳಲ್ಲಿ ಕೆಲವಕ್ಕೆ ಬರೇ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಬಳಸಿದ್ದರೆ, ಉಳಿದವಕ್ಕೆ ಸ್ವಲ್ಪ ಪ್ರಮಾಣದಲ್ಲಿ ಬೇರೆ ಹಿಟ್ಟು ಸೇರಿಸಿದ್ದರು.


"ನನಗೆ ಗೋಧಿ ದೋಸೆ, ಚಪಾತಿ ತಿಂದರೆ ಹೊಟ್ಟೆನೋವು ಆಗುತ್ತದೆ. ಬಾಳೆಕಾಯಿ ಹುಡಿಯ ಯಾವುದೇ ತಯಾರಿಯಿಂದ ಆಸಿಡಿಟಿ ಆಗಲೀ ಹೊಟ್ಟೆನೋವು ಆಗಲೀ ಕಾಣಿಸಿಕೊಳ್ಳಲಿಲ್ಲ. ಇಡ್ಲಿ ಮೆತ್ತಗೆ ಸ್ಪಂಜಿನಂತಾಗಿತ್ತು, ಚಪಾತಿಯೂ ಸೂಪರ್. ಚಪಾತಿ, ಉಣ್ಣಿಯಪ್ಪಮ್ ಮತ್ತು ಪುಟ್ಟು ಬರೇ ’ಕಾಯ ಪೊಡಿ’ (ಬಾಕಾಹು) ಬಳಸಿ ಮಾಡಿದ್ದೆವು. ಬರೇ ಬಾಳೆಕಾಯಿ ಹುಡಿಯ ದೋಸೆ ತುಂಬ ಮೆತ್ತಗಾಗಿ ಕಾವಲಿಯಿಂದ ಸರಿಯಾಗಿ ಏಳಲಿಲ್ಲ. ಸ್ವಲ್ಪ ಅಕ್ಕಿ ಹುಡಿ ಸೇರಿಸಿದಾಗ ಈ ಸಮಸ್ಯೆ ಪರಿಹಾರ ಆಯಿತು."


ಕಳೆದೊಂದು ವಾರ ಕೃಷ್ಣನ್ ಉಣ್ಣಿಯವರ ಮನೆಯಲ್ಲಿ ಬಾಕಾಹುವಿನ ಬೇರೆಬೇರೆ ತಿಂಡಿಗಳದ್ದೇ ಸಮಾರಾಧನೆ. "ಮಧ್ಯಾಹ್ನದೂಟ ಮಾತ್ರ ನಮ್ಮದು ಮಾಮೂಲಿ. ಬಾಕಿ ಎರಡು ಹೊತ್ತೂ ಕಾಯ ಪೊಡಿ ಪ್ರಧಾನವಾದ ತಿಂಡಿಗಳನ್ನು ಎಲ್ಲರೂ ಇಷ್ಟಪಟ್ಟಿದ್ದೇವೆ. ಮುಂದೆ ಎಂದೂ ಇವು ನಮ್ಮ ಅಡುಗೆಯಲ್ಲಿ ಸ್ಥಾನ ಪಡೆಯುವುದು ನಿಶ್ಚಯ", ಕರ್ಷಕಶ್ರೀ ಕೃಷ್ಣನ್ ಉಣ್ಣಿ ಸಂತಸದಿಂದ ಹೇಳುತ್ತಾರೆ.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top