ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಸ್ಥಾಪಕರಾದ ಡಾ. ಎ.ಪಿ ಭಟ್ ಅವರು 'ಭಾರತೀಯರು ಕಂಡಂತೆ ಬ್ರಹ್ಮಾಂಡ' ಎಂಬ ವಿಷಯವಾಗಿ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಶ್ರವ್ಯ ಸಾಮಾಜಿಕ ಜಾಲತಾಣವಾದ ಕ್ಲಬ್ ಹೌಸ್‌ನಲ್ಲಿ 'ಭಾರತ ದರ್ಶನ ಕ್ಲಬ್' ನಲ್ಲಿ ಇಂದು ಸಂಜೆ 6:55ಕ್ಕೆ ಈ ಕಾರ್ಯಕ್ರಮವಿರುತ್ತದೆ.
ಖಗೋಳ ವಿಜ್ಞಾನದಲ್ಲಿ ಪ್ರಾಚೀನ ಭಾರತೀಯರು ಮಾಡಿದ ಸಾಧನೆ, ಕಂಡುಕೊಂಡಿರುವ ಜ್ಞಾನದ ಮುಂದೆ ಆಧುನಿಕ ಎಂದು ಕರೆಯಲಾಗುತ್ತಿರುವ ಪಾಶ್ಚಾತ್ಯ ಪ್ರಣೀತ ಖಗೋಳ ವಿಜ್ಞಾನವನ್ನು ತುಲನೆ ಮಾಡಲಾಗದು.
ಈ ಹಿನ್ನೆಲೆಯಲ್ಲಿ ಇಂದು ಕ್ಲಬ್ ಹೌಸ್‌ನಲ್ಲಿ ನಡೆಯುವ ಈ ಉಪನ್ಯಾಸ ಕಾರ್ಯಕ್ರಮ ಕುತೂಹಲ ಕೆರಳಿಸಿದೆ. ಆಸಕ್ತರು https://www.clubhouse.com/join/bh%C4%81rata-darshana/WsJLFCL2/M1e8YXOy ಈ ಕೊಂಡಿಯನ್ನು ಬಳಸಿ ಕಾರ್ಯಕ್ರಮವನ್ನು ಆಲಿಸಬಹುದು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ