ಪಾಕ: ವಿನೋದ್ ರಾವ್, ಮಂದರ್ತಿ
ಬೇಕಾಗುವ ಸಾಮಗ್ರಿ: ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು)- 500 gram,ತುಪ್ಪ- 10 ಚಮಚ, ಬೆಲ್ಲ- 600 gram, ಕೊಕೋ ಪೌಡರ್- 100 gram, ಏಲಕ್ಕಿ- 2 gram
ಮಾಡುವ ವಿಧಾನ: ಬಾಣಲೆಗೆ ತುಪ್ಪ ಹಾಕಿ ಬಾಕಾಹು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಪರಿಮಳ ಬರತೊಡಗಿದಾಗ ಬೆಲ್ಲ, ಕೊಕೋ, ಏಲಕ್ಕಿ ಕೈಬಿಡದೆ ತಿರುವುತ್ತಿರಿ. ಮಿಶ್ರಣ ತಳ ಬಿಡುತ್ತಾ ಬಂದಾಗ ಒಲೆಯಿಂದ ಇಳಿಸಿ ತುಪ್ಪ ಹಾಕಿದ ತಟ್ಟೆಯಲ್ಲಿ ತೆಳುವಾಗಿ ಹರಡಿ. ಕೂಡಲೇ ಚಾಕಲೇಟ್ ಗಾತ್ರದ ಗೆರೆ ಹಾಕಿ. ಚೆನ್ನಾಗಿ ಆರಿದ ನಂತರ ತುಂಡುಗಳನ್ನು ತೆಗೆಯಿರಿ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ