||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಣೇಶ ಬಂದಾ ಕಾಯಿ ಕಡುಬು ತಿಂದ... ನಿಮ್ಮ ಮನೆಗೆ ಬರಮಾಡಿಕೊಳ್ಳಿ ಪರಿಸರ ಸ್ನೇಹಿ ಗೋಮಯ ಗಣಪನನ್ನು

ಗಣೇಶ ಬಂದಾ ಕಾಯಿ ಕಡುಬು ತಿಂದ... ನಿಮ್ಮ ಮನೆಗೆ ಬರಮಾಡಿಕೊಳ್ಳಿ ಪರಿಸರ ಸ್ನೇಹಿ ಗೋಮಯ ಗಣಪನನ್ನುಕಲಬುರಗಿ ಜಿಲ್ಲೆ ಹಾಗೂ ಕಲಬುರಗಿ ತಾಲೂಕಿನ ಗರೂರ (ಬಿ) ಗ್ರಾಮದಲ್ಲಿ ಹಸುವಿನಿಂದ ಸಿಗುವಂತಹ ಗೋಮಯ, ಗೋ ಮೂತ್ರ, ಹಾಲು, ಮೊಸರು, ತುಪ್ಪವನ್ನು ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸಲಾಗುತ್ತಿದೆ. ಹಿಂದೆ ನಮ್ಮ ಪೂರ್ವಜರು ಸಗಣಿಯ ಉಂಡೆಯನ್ನು ಇಟ್ಟು ಅದರ ಮೆಲೆ ಗರಿಕೆಯನ್ನು ಇಟ್ಟು ಗಣಪ ಎಂದು ಪೂಜಿಸುತ್ತ ಇದ್ದರು ಹಾಗೂ ಓಡಾಡುವ ಜಾಗದಲ್ಲೂ ಕೂಡ ಈ ರೀತಿ ಇಡುತ್ತಿದ್ದರು. ಈ ರೀತಿ ಇಡುವುದರಿಂದ ನೆಗೆಟಿವ್ ಎನರ್ಜಿ ಮನೆಯೊಳಗೆ ಪ್ರವೇಶ ಮಾಡದಂತೆ ತಡೆಯುತ್ತದೆ.  ರೇಡಿಶನ್ ಪ್ರಭಾವ ಕೂಡ ಬೀರುವುದಿಲ್ಲ ಎಂದು ಈ ರೀತಿಯಾಗಿ ಮಾಡುತ್ತಲಿದ್ದರು. ಹಿಂದೆ ನಮ್ಮ ಪೂರ್ವಜರು ಮಾಡಿರುವ ಆಚಾರ ವಿಚಾರಗಳು ತುಂಬಾ ಒಳ್ಳೆಯದೇ ಆಗಿವೆ.


ಆದರೆ ಈಗಿನ ಜನ ಪಿಒಪಿ ಗಣಪತಿ ವಿಗ್ರಹಗಳನ್ನು ಕೂರಿಸಿ ಪರಿಸರಕ್ಕೆ ಬಹಳಷ್ಟು ಮಾಲಿನ್ಯವಾಗುತ್ತಿರುವುದನ್ನು ನೋಡುತ್ತಿದ್ದೇವೆ. ರಾಸಾಯನಿಕ ಮಿಶ್ರಿತ ಗಣೇಶ ಮೂರ್ತಿಯನ್ನು ಮುಳುಗಿಸಿ ಕೆರೆಯನ್ನು ಕಲುಷಿತಗೊಳಿಸುವುದನ್ನು ತಡೆಗಟ್ಟಲು ಹಾಗೂ ನಗರದ ಜನರಲ್ಲಿ ಪರಿಸರ ಕಾಳಜಿ ಮೂಡಿಸುವುದರೊಂದಿಗೆ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಜನರನ್ನು ಭಾಗಿಯಾಗಿಸಿಕೊಳ್ಳಲು ಮಂದಹಾಸ ಸಂಸ್ಥೆಯು ಪರಿಸರ ಸ್ನೇಹಿ ಗೋಮಯ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದೆ.


ಗೋಮಯ ಗಣಪತಿ ಮೂರ್ತಿ ಯಾವುದೇ ರೀತಿಯಿಂದ ರಾಸಾಯನಿಕ ಬಳಸಿಕೊಂಡು ಮಾಡಿರುವಂತಹದು ಅಲ್ಲ. ಹಸುವಿನಿಂದ ಸಿಗುವಂತಹ ಪಂಚಗವ್ಯಗಳನ್ನು ಬಳಸಿಕೊಂಡು ಮಾಡಲಾಗಿದೆ. ಇದು ಮನೆಯಲ್ಲಿ ವಿಸರ್ಜನೆ ಮಾಡಿದರೆ ಗೊಬ್ಬರವಾಗುತ್ತದೆ ಅಥವಾ ಕೆರೆಯಲ್ಲಿ ವಿಸರ್ಜನೆ ಮಾಡಿದರೆ ಜೀವಿಗಳಿಗೆ ಆಹಾರವಾಗುತ್ತದೆ ಹೊರತು ಪರಿಸರಕ್ಕೆ ಹಾನಿಯಾಗುವುದಿಲ್ಲ.


ಅದೇ ರೀತಿ ರೋಗ ನಿರೋಧಕ ಶಕ್ತಿಯುಳ್ಳ ಅರಿಶಿಣ ಮಿಶ್ರಿತವಾದ ಗಣಪ ಕೂಡ ಮಾಡುತ್ತಲಿದ್ದೇವೆ.  ಹಳದಿ ಬಣ್ಣದ ಅರಿಶಿಣಕ್ಕೆ ಸನಾತನ ಸಂಪ್ರದಾಯದಲ್ಲಿ ಬಹಳ ಮಹತ್ವವಿದೆ. ಮಂಗಳ ಕಾರ್ಯಗಳಲ್ಲಿ ಅರಿಶಿಣವೇ ಪ್ರಧಾನ. ಇದು ಗ್ರಹಗಳಲ್ಲಿ ಗುರುವಿಗೆ ಸಂಬಂಧಿಸಿದ ದ್ರವ್ಯ ಎಂದು ಹೇಳಲಾಗುತ್ತದೆ. ಇಡೀ ಕುಂಡಲಿಯಲ್ಲಿ ಯೋಗ ಪ್ರಾಪ್ತಿಯನ್ನೂ, ದುರ್ಯೋಗ ನಿವಾರಣೆಯನ್ನೂ ಮಾಡುವವನೇ ಗುರು ಎಂಬುದು ಜ್ಯೋತಿಶ್ಯಾಸ್ತ್ರದ ಅಭಿಮತ.


ಹಳದಿ ಬಣ್ಣ ಜ್ಞಾನದ ಸಂಕೇತ. ವೈಜ್ಞಾನಿಕವಾಗಿ ಹಾಗೂ ವೈದ್ಯಕೀಯವಾಗಿ ಅರಿಶಿಣ ಮಹತ್ವ ಪಡೆದಿದೆ. ಮಾನಸಿಕ ಉದ್ವೇಗಗಳನ್ನು ನಿಯಂತ್ರಿಸುವ ಶಕ್ತಿ ಇದರಲ್ಲಿದೆ. ಅಲ್ಲದೆ, ಅರಿಶಿಣಕ್ಕೆ ಸೋಂಕು ನಿವಾರಕ ವಿಶೇಷ ಗುಣವೂ ಇದೆ. ಹಳದಿ ಬಣ್ಣದ ಅರಿಶಿಣವನ್ನು ರೋಗನಿರೋಧಕವಾಗಿ ಬಳಸಲಾಗುತ್ತದೆ. ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಸಾಮಾನ್ಯವಾಗಿ ಹಳದಿ ಬಣ್ಣದ ದೀಪಗಳನ್ನು ಬಳಸುತ್ತಾರೆ. ಹಳದಿ ಬಣ್ಣ ರೋಗಿಗೆ ನೋವಿನ ಅನುಭವದ ಅರಿವು ಕಡಿಮೆಯಾಗುತ್ತದೆಂಬ ವೈಜ್ಞಾನಿಕ ಕಾರಣಕ್ಕೆ ಹಳದಿ ದೀಪ ಬಳಸಲಾಗುತ್ತದೆ. ಆಧುನಿಕ ವಿಜ್ಞಾನಕ್ಕೂ ನಿಲುಕದ ಹಲವು ಸತ್ಯಗಳು ಪ್ರಕೃತಿಯಲ್ಲಿ ಅಡಗಿವೆ. ಆದ ಕಾರಣಕ್ಕಾಗಿ ಪರಿಸರ ಸ್ನೇಹಿ ಗೋಮಯ ಗಣಪ ಜೊತೆಗೆ ಅರಶಿನ ಗಣಪ ಕೂಡ ಸಿದ್ದಪಡಿಸುತ್ತಲಿದೆ.


ಪಂಚಗವ್ಯ ಗಣಪ ಮಾಡುವ ವಿಧಾನ

ಮೊದಲಿಗೆ ಆಕಳ ಸಗಣಿಯನ್ನು ಚನ್ನಾಗಿ ಒಣಗಿಸಿ ಅದನ್ನು ಪುಡಿಮಾಡಿ ಜರಡಿ ಹಿಡಿದು ಅದರೊಂದಿಗೆ ಗೋ ಮೂತ್ರ, ಹಾಲು, ಮೊಸರು, ತುಪ್ಪ ಇವುಗಳನ್ನು ಬೆರೆಸಿ ಚನ್ನಾಗಿ ಹದಗೊಳಿಸಿ ಬೇಕಾದ ಗಣಪತಿ ಆಕಾರಕ್ಕೆ ಹಾಕಿ ಒಂದು ವಾರದ ವರೆಗೆ ನೆರಳಿನಲ್ಲಿ ಒಣಗಿಸಲಾಗುವುದು ನಂತರ ಅಲಂಕಾರಿಕವಾಗಿ ಕಣ್ಣು, ಹಲ್ಲುಗಳಿಗೆ ಬಣ್ಣ ಹಚ್ಚಿದರೆ ಪರಿಸರ ಸ್ನೇಹಿ ಗೋಮಯ ಗಣಪ ಸಿದ್ದ.


ಮನೆ ಮನೆಗಳಲ್ಲಿ ಮಣ್ಣಿನ, ಗೋ ಮಯ ಅಥವಾ ರೋಗನಿರೋಧಕ ಶಕ್ತಿಯುಳ್ಳ ಅರಿಶಿಣ ಮಿಶ್ರನದಿಂದ ಮಾಡಿದ ಪುಟ್ಟಗಣೇಶ ವಿಗ್ರಹಗಳನ್ನು ಪೂಜೆ ಮಾಡಿದಲ್ಲಿ ನಮ್ಮ ಹಾಗೂ ಕುಟುಂಬದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಹೊಸತನವನ್ನು ನಾವು ತಂದುಕೊಳ್ಳಬೇಕಾಗಿದೆ.


ಹೆಚ್ಚಿನ ಮಾಹಿತಿಗಾಗಿ 7259128278, 8095007278


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post