ಅಮ್ಮನ ಸೃಷ್ಟಿಯನು ಮಾಡಿದ ಬ್ರಹ್ಮ
ತಾನು ಜಗದಲಿ ಮುಖ ಮರೆಸಿ ಕುಳಿತ
ತನ್ನ ದೇವ ಹೃದಯವ ಅಮ್ಮನಿಗೆ ನೀಡಿ
ಆ ಹೃದಯದ ಬಡಿತದಲಿ ತಾನೇ ಅವಿತ..
ಪ್ರೀತಿಯ ಬಿಂದು ಕಣ ಕಣದಲಿ ತುಂಬಿ
ಅಮ್ಮನೆಂಬ ಕಲಾಕೃತಿಯನು ಮಾಡಿದ
ಅಲ್ಲೇ ಇನ್ನೊಂದು ಜೀವದ ಸಿಂಧುವಿಟ್ಟು
ತನ್ನ ಸೃಷ್ಟಿಯ ಚಮತ್ಕಾರವ ತೋರಿದ..
ಮುಗ್ಧತೆಯ ಸಾಕಾರಕ್ಕೆ ಹಸ್ತದ ನೇವರಿಕೆ
ಅಮ್ಮನೆಂಬ ಪದವೊಂದು ಸಾಹಿತ್ಯಮಾಲೆ
ತಾಯಿಯ ಪ್ರೀತಿ ವಾತ್ಸಲ್ಯವೇ ಸುಂದರ
ನುಡಿಗಳ ಕಲಿಸುವ ಮೊದಲ ಪಾಠಶಾಲೆ..
-ಆತ್ಮಸಖಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ