ಬಾಕಾಶಾ!
ಬಾಳೆಕಾಯಿ ಶಾವಿಗೆ.
ಬಾಳೆಕಾಯಿಯನ್ನು ಆವಿಯಲ್ಲಿ ಬೇಯಿಸಿ. ಸಿಪ್ಪೆ ಸುಲಿದು ಅದು ಬಿಸಿ ಇದ್ದಾಗಲೇ ಶಾವಿಗೆ ಯಂತ್ರದಲ್ಲಿ ಒತ್ತಿ. ಒಗ್ಗರಣೆ ಹಾಕಿ. ಸವಿಯಿರಿ.
ಅರ್ಧ ಗಂಟೆ ಸಾಕು. ಯಾವುದೇ ಬಾಳೆಕಾಯಿ ಓಕೆ. ರುಚಿರುಚಿಯ ಉಪಾಹಾರ. ಪೋಷಕಸಮೃದ್ಧ!
ಸಾಗರದ ಮಿತ್ರರೊಬ್ಬರು ತಿಳಿಸುತ್ತಾರೆ, ಅವರ ಅಜ್ಜಿಯ ಕಾಲದಿಂದಲೂ ಅವರ ಮನೆಯಲ್ಲಿ ಇದು ಚಾಲ್ತಿಯಲ್ಲಿದೆಯಂತೆ.
ನಿಮ್ಮೂರಲ್ಲಿ / ನಿಮ್ಮ ಮನೆಯಲ್ಲಿ ಬಾಕಾಶಾ ಮಾಡುತ್ತಾರಾ? ಹಿಂದೆ ಮಾಡುತ್ತಿದ್ದರಾ?
ಹಿರಿ ತಲೆಗಳನ್ನು ಕೆದಕಿ, ನಮಗೂ ತಿಳಿಸಿ.
ಜತೆಯಾಗಿ ಈ ಸೂಪರ್ ಬ್ರೇಕ್ ಫಾಸ್ಟನ್ನು ಬೆಳಕಿಗೆ ತರೋಣ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ