||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಸ್ತಕ ಪರಿಚಯ: ತಲ್ಲಣಗಳ ಪಲ್ಲವಿ- ಕನ್ನಡ ಕಥಾ ಸಂಕಲನ

ಪುಸ್ತಕ ಪರಿಚಯ: ತಲ್ಲಣಗಳ ಪಲ್ಲವಿ- ಕನ್ನಡ ಕಥಾ ಸಂಕಲನ


ವಾಟ್ಸ್ ಆಪ್ ಗ್ರೂಪೊಂದರಲ್ಲಿ ಅವರು ಹಾಕುತ್ತಿದ್ದ ಮೆಸೇಜ್‌ಗಳಿಂದಾಗಿ ಪರಿಚಯವಾದವರು ಉಡುಪಮೂಲೆ ಅನುಪಮಾ ರಾಘವೇಂದ್ರ ಅವರು. ಅವರ ಯು ಟ್ಯೂಬ್ ಚಾನಲನ್ನು ನೋಡಿ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಮೂಡಿತ್ತು. ಅನ್ಯರ ಬಳಿ ಕೇಳುವುದರ ಬದಲು ಅವರನ್ನೇ ವಿಚಾರಿಸೋಣ ಎಂದು ವಿಚಾರಿಸಿದಲ್ಲಿ ಅವರ ಬಗ್ಗೆ ಗೌರವ ಮೂಡುವಷ್ಟು ವಿಚಾರಗಳು ದೊರಕಿತು. ಅದರೊಂದಿಗೆ ಅವರ ಆಸಕ್ತಿ ಬರವಣಿಗೆಗಳ ಬಗ್ಗೆ ತಿಳಿದು ಅವರು ಬರೆದ ಕತೆಗಳನ್ನೂ ಓದಿದೆ.


ಇತ್ತೀಚೆಗೆ ಅವರು ಬರೆದ ತಲ್ಲಣಗಳ ಪಲ್ಲವಿ ಎಂಬ ಕಥಾಸಂಕಲನದ ಬಗ್ಗೆ ವಾಟ್ಸ್ ಆಪ್ ಗ್ರೂಪೊಂದರಲ್ಲಿ ನೋಡಿ ಆ ಪುಸ್ತಕಕ್ಕಾಗಿ ಅವರನ್ನು ಸಂಪರ್ಕಿಸಿದೆ. ನಾನು ಕೇಳಿದ ಕೆಲವೇ ದಿನಗಳೊಳಗೆ ಆ ಪುಸ್ತಕಗಳು ನನಗೆ ಸಿಕ್ಕುವ ವ್ಯವಸ್ಥೆ ಮಾಡಿದರು. ಅವರನ್ನು ಮನೆಗೇ ಕರೆದಿದ್ದೆ. ಆದರೆ ಅಂದು ಅವರು ನಮ್ಮೂರು ತಲಪುವಾಗ ರಾತ್ರೆಯಾದ ಕಾರಣ ಅಲ್ಲದೆ ಕೃಷ್ಣ ಜನ್ಮಾಷ್ಟಮಿಯೂ ಆದುದರಿಂದ ನಮ್ಮ ಭೇಟಿ ತಪ್ಪಿ ಹೋಯಿತು.


ಅವರು ಈ ಪುಸ್ತಕದೊಂದಿಗೆ ಹತ್ತಗುಳು ಮತ್ತು ಕಲಾತರಂಗ ಕಲಾಂತರಂಗ ಎಂಬ ಅವರೇ ಬರೆದ ಮತ್ತೆರಡು ಪುಸ್ತಕಗಳನ್ನು ಕೊಟ್ಟಿದ್ದರು. ಸಮಯದ ಅಭಾವದಿಂದ ಈ ಪುಸ್ತಕಗಳನ್ನು ಓದುವುದು ತುಂಬಾ ಮುಂದೆ ಹೋಯಿತು. 


ಇಂದು ತಲ್ಲಣಗಳ ಪಲ್ಲವಿ ಓದಿ ಮುಗಿಸಿದಾಗ ಜೀವನಕ್ಕೆ ಅತಿ ಸಮೀಪದ ಕತೆಗಳನ್ನು ಓದಿದಂತೆನ್ನಿಸಿತು. ಎಲ್ಲವೂ ಸಾಧ್ಯ, ಅಸಾಧ್ಯಗಳು ಯಾವ ಕತೆಯಲ್ಲೂ ಕಾಣಲಿಲ್ಲ. ಕೂಡು ಕುಟುಂಬದ ಬಗ್ಗೆ ಇವರ ಒಲುಮೆ ಕತೆಗಳಲ್ಲಿ ಕಾಣ ಸಿಕ್ಕಿತು. ಆ ಮಾತು ಎಂಬ ಕತೆಯಲ್ಲಿ ಬಂದ ಮಾಷ್ಟ್ರಂತಹವರು ಇಂದು ಲೋಕದಲ್ಲಿ ಸಾಕಷ್ಟು ಇದ್ದಾರೆ. ನಾನೇ ಇದಕ್ಕೆ ಅತಿ ಸಮೀಪದ ಅನುಭವವನ್ನು ಅನುಭವಿಸಿದ್ದೇನೆ. ಜ್ವಾಲಾಮುಖಿ ಮಹಾಭಾರತದಲ್ಲಿ ಬರುವ ಅಂಬೆಯನ್ನು (ಮುಂದೆ ಶಿಖಂಡಿ ಆದವಳು) ಅವರದ್ದೇ ಆದ ಬಗೆಯಲ್ಲಿ ತೋರಿಸುವ ಪ್ರಯತ್ನದಲ್ಲಿ ಅವರು ಗೆದ್ದಿದ್ದಾರೆ ಎಂದೇ ಅನ್ನಿಸಿತು.

 

ಪ್ರತಿ ಕತೆಯಲ್ಲೂ ಒಂದೊಂದು ಪಾಠ ಇರುವಂತೆ ಬರೆದ ಈ ಕಥಾ ಸಂಕಲನ ತುಂಬಾ ಇಷ್ಟವಾಯಿತು. 

ಕತೆಗಳನ್ನು ಅಚ್ಚಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ ಕಾಗದಗಳ ಬೆಲೆ ನೂರು ರುಪಾಯಿ ಎಂದು ಬರೆದು ಕಂಡಿತು. ಇರ ಬಹುದು ಆದರೆ ಅದು ಕೃತಿಗಳ ಮೌಲ್ಯ ಖಂಡಿತಾ ಅಲ್ಲ. ಕೃತಿಗಳ ಮೌಲ್ಯ ಓದುಗನ ಭಾವನೆಯ ಮೇಲೆ ನಿಂತಿರುವುದಲ್ಲವೇ? ನಾನಂತೂ ಕೃತಿಯ ಮೌಲ್ಯ ಮಾಪನ ಮಾಡಲು ಹೊರಡುವುದಿಲ್ಲ. ಆ ಕಾಗದಗಳ ಬೆಲೆ ಅಲ್ಲಿ ಬಂದ ಒಂದು ಕತೆಯ ಮೌಲ್ಯವೂ ಆಗಲಾರದೆಂಬುದು ವಾಸ್ತವ.


ಹಲವೂ ಪ್ರತಿಭೆಗಳ ಅನುಪಮಾ ಅವರ ಬಗ್ಗೆ ಮುಂದೆ ಬರೆಯೋಣ. ಸಧ್ಯ ಈ ಒಂದು ಪುಸ್ತಕದ ಬಗ್ಗೆ ಮಾತ್ರ ಬರೆದಿದ್ದೇನೆ.

-ಎಡನಾಡು ಕೃಷ್ಣ ಮೋಹನ ಭಟ್ಟ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post