||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೇವಸ್ಥಾನ ಧ್ವಂಸದಿಂದ ಸರಕಾರ, ಆಧಿಕಾರಿಗಳು ಹಾಗೂ ನಾವು ಕಲಿಯಬೇಕಾದ ಪಾಠ

ದೇವಸ್ಥಾನ ಧ್ವಂಸದಿಂದ ಸರಕಾರ, ಆಧಿಕಾರಿಗಳು ಹಾಗೂ ನಾವು ಕಲಿಯಬೇಕಾದ ಪಾಠ


ಸರ್ಕಾರ ಅರ್ಥಾತ್ ನಮ್ಮ ಅಧಿಕಾರಿಗಳ ಜನಪರ ಅಧಿಕಾರಿಗಳ ಕಾರ್ಯ ಹೇಗಿರುತ್ತದೆ ಅಂದರೆ ಜನರಿಗೆ ಯಾವುದು ಕಾನೂನಾತ್ಮಕವಾಗಿ ಬರಬೇಕು ಅದನ್ನು ಅವರಾಗಿ ಮಾಡುವುದಿಲ್ಲ. ಆದರೆ ಯಾವ ಕಾನೂನು ಜನರಿಗೆ ತೊಂದರೆ ಕೊಡ ಬೇಕೊ ಅದನ್ನು ಅವರಾಗಿಯೇ ಮುತುವರ್ಜಿ ವಹಿಸಿ ಮಾಡುತ್ತಾರೆ. ಇದಕ್ಕೆ ನಮ್ಮ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆ ಸಾಲು ಸಾಲಾಗಿ ನಿಲ್ಲುತ್ತವೆ.


1. ಕೇೂರ್ಟು ಹೇಳಿದೆ, ದೇವಸ್ಥಾನಗಳು ಅಕ್ರಮವಾದ ಜಾಗದಲ್ಲಿ ಕಟ್ಟಿದ್ದರೆ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಿ ಅಂದಿರಬಹುದು. ಅದನ್ನೇ ನಮ್ಮ ಅಧಿಕಾರಿಗಳು ಹಿಂದೆ ಮುಂದೆ ಆಲೇೂಚಿಸದೆ ಧ್ವಂಸಕ್ಕೆ ಮುಂದಾಗಿದ್ದರು ಅನ್ನುವುದು ಅಷ್ಟೇ ಸ್ವಷ್ಟ. ಅದಕ್ಕೆ ಹೇಳುವುದು ನಮ್ಮ ಅಧಿಕಾರಗಳು ಜನರಿಗೆ ತೊಂದರೆ ಕಷ್ಟ ಆಗುವ ಕೆಲಸಗಳಿಗೆ ಹಿಂದೆ ಮುಂದೆ ನೇೂಡದೇ ಹೇಗೆ ತ್ವರಿತವಾಗಿ ಕಾರ್ಯ ನಿರ್ವಹಿಸುತ್ತಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಇಂತಹ ಅದೆಷ್ಟೊ ಪೀಡನ ಕೆಲಸಗಳು ನಮ್ಮ ನಿಮ್ಮ ಅನುಭವಕ್ಕೆ ದಿನ ನಿತ್ಯವೂ ಬಂದಿರುತ್ತದೆ. ಅವುಗಳನ್ನು ಎಳೆ ಎಳೆಯಾಗಿ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತೇನೆ.


ಒಂದು ವೇಳೆ ನಾಳೆ ಇದೇ ಸುಪ್ರೀಂ ಕೇೂರ್ಟು ತಾವು ನೀಡಿದ ತೀರ್ಪನ್ನು ಪುನರ್ ಉಚ್ಚರಿಸಿ ನಾವು ನಿಮಗೆ ಹೇಳಿದು ಅಕ್ರಮ ಜಾಗದಲ್ಲಿ ಕಟ್ಟಿದ ದೇವಸ್ಥಾನಗಳ ಸಕ್ರಮಾತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಿ ಅಂದಿದೆಯೇ ವಿನಾ, ಕಟ್ಟಡ ಕೆಡವಿ ಎಂದು ಎಲ್ಲೂ ಹೇಳಿಲ್ಲ. ಹಾಗಾಗಿ ಕೆಡವಿದ ದೇವಸ್ಥಾನ ಅದೇ ಜಾಗದಲ್ಲಿ ಅದೇ ರೀತಿಯಲ್ಲಿ ಕಟ್ಟಿ ಕೊಡಿ ಅಂದರೆ ಅದಕ್ಕೆ ನೀವು ಸಾವಿರಾರು ಕಾರಣಗಳನ್ನು ನೀಡುತ್ತೀರಿ ಅಲ್ವೆ?


2. ಒಬ್ಬ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾ ಮಾಡಿ ಅಂದು ಕೇೂಟು೯ ಹೇಳಿದರೆ ಸಾಕು ರಾತ್ರಿ ಬೆಳಗಾಗುವುದರೊಳಗೆ ಆ ನೌಕರರನನ್ನು ಮನೆಗೆ ಕಳುಹಿಸುತ್ತೀರಿ. ಅದೇ ಕೋರ್ಟ್‌ ಅದೇ ನೌಕರನನ್ನು ಕೆಲಸಕ್ಕೆ ಸೇರಿಸಿ ಕೊಳ್ಳಿ ಅಂದ್ರೆ ನೀವು ಖಂಡಿತವಾಗಿಯೂ ಈ ಕೆಲಸದಲ್ಲಿ ಮುಂದಾಗುವುದಿಲ್ಲ. ಬದಲಾಗಿ ಸಂಬಂಧಿಸಿದ ನೌಕರ ನಿಮ್ಮನ್ನು ಹೆಜ್ಜೆ ಹೆಜ್ಜೆಗೂ ನೋಡಿಕೊಂಡರೆ ಮಾತ್ರ ಅವನ ಭಾಗ್ಯದ ಬಾಗಿಲು ತೆರೆಯಬಹುದು. ಅಂದರೆ ಪೀಡಿಸುವಾಗ ಕೇೂರ್ಟಿನ ತೀರ್ಪು ನೆನಪಾಗುವುದಿಲ್ಲ ಅಲ್ವಾ? ಅಂದರೆ ನಮ್ಮ ಅಧಿಕಾರಿಗಳು ನ್ಯಾಯಾಂಗದ ನಿಂದನೆ ಕಾಯಿದೆ ಮುರಿಯಲು ಸಿದ್ದರಿದ್ದೀರಿ. ಅಲ್ವಾ?


3. ಸರಕಾರದಿಂದ ನಮಗೇನಾದರೂ ಅಲ್ಫಸ್ವಲ್ಪ ಹಣ ಬರಬೇಕಾಗಿದೆ ಅಂದರೆ ನಾವು ವರ್ಷಗಟ್ಟಲೆ ಕಾಯಬೇಕು. ಅದಕ್ಕೂ ನಾವು ನೇೂಡಿಕೊಳ್ಳಬೇಕು. ಅದೇ ನಮ್ಮಿಂದ ಸರಕಾರಕ್ಕೆ ಕೊಡಬೇಕಾದರೆ ತಕ್ಷಣವೇ ನೀವು ಕಾನೂನಾತ್ಮಕವಾಗಿ ಮುಂದಾಗುತ್ತೀರಿ. ಹೇಗಿದೆ ನಿಮ್ಮ ಜನಪರ ಕೆಲಸ?


4. ಆದಾಯ ತೆರಿಗೆ ಕಟ್ಟಲು ತಡವಾದರೆ ವಿಶೇಷ ದಂಡ ವಿಧಿಸುತ್ತೀರಿ. ಅದೇ ನಿಮ್ಮಿಂದ ನಮಗೆ ಹಣ ವಾಪಸು ಬೇಕೆಂದಾಗ ತಿಂಗಳು ಗಟ್ಟಲೆ ಕಾಯಬೇಕು. ಅದಕ್ಕೆ ಯಾವ ಬಡ್ಡಿಯೂ ಇಲ್ಲ. ಇಂತಹ ಸಾಕಷ್ಟು ಜೀವಂತ ಉದಾಹರಣೆಗಳು ಕಾಣಸಿಗುತ್ತವೆ.


ನಮ್ಮ ರಾಜಕಾರಣಿಗಳು ಅಷ್ಟೇ- ದೇವಸ್ಥಾನ, ಚರ್ಚು, ಮಸೀದಿ ಬಿದ್ದು ಹೇೂದರೆ ತಮಗೆ ಸಿಗುವ ಓಟು ಬಿದ್ದು ಹೇೂಗುತ್ತದೆ ಅನ್ನುವ ಒಂದೇ ಕಾರಣಕ್ಕೆ ಪ್ರಪಂಚವೇ ತಲೆಯ ಮೇಲೆ ಬಿದ್ದ ಹಾಗೆ ಬೊಬ್ಬೆ ಹಾಕುವುದು. ಸಾರ್ವಜನಿಕರನ್ನು ನೀವು ಮತ್ತು ನಿಮ್ಮ ಅಧಿಕಾರಿಗಳು ಹೇಗೆ ದಿನ ನಿತ್ಯವೂ ಪೀಡಿಸುತ್ತಾರೆ ಅನ್ನುವುದನ್ನು ಒಮ್ಮೆ ಕಣ್ಣು ಹಾಯಿಸಿ ನೇೂಡಿ. ಅನಂತರ ಮಾತನಾಡಿ. ನಿಮಗೆ ಮಾತನಾಡುವ ನೈತಿಕತೆ ಇದೆಯಾ? ಆತ್ಮಾವಲೇೂಕನ ಮಾಡಿ ಕೊಳ್ಳಿ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post