|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೆಇಇ ಮೈನ್ಸ್- ರಾಷ್ಟ್ರಮಟ್ಟದಲ್ಲಿ ಅಂಬಿಕಾ ಪಿಯು ಅತ್ಯುತ್ತಮ ಸಾಧನೆ

ಜೆಇಇ ಮೈನ್ಸ್- ರಾಷ್ಟ್ರಮಟ್ಟದಲ್ಲಿ ಅಂಬಿಕಾ ಪಿಯು ಅತ್ಯುತ್ತಮ ಸಾಧನೆ


ಪುತ್ತೂರು: ಪ್ರತಿಷ್ಟಿತ ಐಐಟಿ ಹಾಗೂ ಎನ್‍ಐಟಿಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ ಜೆಇಇ ಮೈನ್ 20-21 ಪರೀಕ್ಷೆಯಲ್ಲಿ ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರಿದ್ದಾರೆ.


ವಿದ್ಯಾರ್ಥಿಗಳಾದ ಅಚಿಂತ್ಯಕೃಷ್ಣ ಬಿ (96.29 – 33915ನೇ ರ‍್ಯಾಂಕ್‌), ಮೊಹಮ್ಮದ್ ಆಶಿಕ್ ಎಸ್ (93.22– 16006ನೇ ರ‍್ಯಾಂಕ್‌), ರಕ್ಷಿತಾ ಆರ್ (92.09– 39368ನೇ ರ‍್ಯಾಂಕ್‌), ಆಕಾಶ್ ಕೆ.ಪಿ (91.99– 19123ನೇ ರ‍್ಯಾಂಕ್‌), ಶ್ರೇಯಸ್ ಹೇರಳೆ (87.96– 52521ನೇ ರ‍್ಯಾಂಕ್‌), ಧನುಷ್ ರಾಜನ್ (86.84– 33931ನೇ ರ‍್ಯಾಂಕ್‌), ಪುನೀತ್ ಕುಮಾರ್ (85.41 – 61423ನೇ ರ‍್ಯಾಂಕ್‌), ಶಿವಾನಿ ರೈ ಕೆ (84.15– 20867ನೇ ರ‍್ಯಾಂಕ್‌), ಅಜಯ್ ಎಚ್.ಆರ್ (83.40– 21827ನೇ ರ‍್ಯಾಂಕ್‌), ದೀಪಶ್ರೀ ಕೆ (82.9), ನಿಶಾಂತ್ ಗಣೇಶ್ ಭಟ್ (81.49), ಜೈದೀಪ್ ಎನ್(80.81), ಜೀವನ್ ಎಸ್.ಎಂ (80.73) ಹಾಗೂ ವೈಷ್ಣವಿ ರೈ ಪಿ (80.25), ಉತ್ತಮ ಎನ್‍ಟಿಎ ಅಂಕಗಳನ್ನು ಗಳಿಸಿದ್ದಾರೆ. ರಾಷ್ಟ್ರ ಮಟ್ಟದ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಅಧ್ಯಯನ ಬಯಸುವ ವಿದ್ಯಾರ್ಥಿಗಳಿಗಾಗಿ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಮೈನ್ಸ್ ಹಾಗೂ ಜೆಇಇ ಅಡ್ವಾನ್ಸ್‍ಡ್ ಎಂಬ ಎರಡು ಹಂತದ ಪರೀಕ್ಷೆಯನ್ನು ಪ್ರತೀ ವರ್ಷ ನಡೆಸುತ್ತಿದ್ದು ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳು ಸದಾ ಅತ್ಯುತ್ತಮ ಅಂಕಗಳೊಂದಿಗೆ ಸಾಧನೆ ಮೆರೆಯುತ್ತಿದ್ದಾರೆ.


ಪ್ರಸ್ತುತ ವರ್ಷ ಅಂಬಿಕಾ ಸಂಸ್ಥೆಯಿಂದ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇಕಡಾ ಅರವತ್ತಕ್ಕಿಂತಲೂ ಅಧಿಕ ಮಂದಿ ಜೆಇಇ ಅಡ್ವಾನ್ಸ್‍ಡ್ ಪರೀಕ್ಷೆ ಬರೆಯಲು ಅರ್ಹರಾಗಿರುವುದು ವಿದ್ಯಾರ್ಥಿಗಳ ಹಾಗೂ ಶಿಕ್ಷಣದ ಗುಣಮಟ್ಟವನ್ನು ಬಿಂಬಿಸಿದೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post