ಸಣ್ಣ ಐಡಿಯಾ, ದೊಡ್ಡ ಪ್ರಯೋಜನ!

Upayuktha
0



'ಐಡಿಯಾಸ್ ರೂಲ್ ದಿ ವರ್ಲ್ಡ್' ಎಂಬ ಮಾತೊಂದಿದೆ. 


ಶಿರಸಿಯ ಜಾಣ ಗೃಹಿಣಿ ಮನೋರಮಾ ಜೋಷಿ ಈಚೆಗೆ ಹೂಡಿದ ಒಂದು ಉಪಾಯ ನೋಡಿ. ಎಲ್ಲರಂತೆ ಬಾಳೆಕಾಯಿಯ ಸ್ಲೈಸ್ ಮಾಡಿ ಒಣಗಿಸುವ ಬದಲು ವೆಜಿಟೇಬಲ್ ಕಟ್ಟರ್ ಮೂಲಕ ಚೂರುಚೂರು ಮಾಡಿದರು. ಮಾಡಿದ ಬದಲಾವಣೆ ಇಷ್ಟೇ.


ಇದರಿಂದಾಗಿ 'ಕೆಲಸವೂ ಸುಲಭ, ಒಣಗುವುದೂ ಬೇಗ’ ಎನ್ನುತ್ತಾರೆ ಅವರು. ಈ ಮಾರ್ಪಾಡಿನಿಂದಾಗಿ ಇವರ ಮನೆ ನಂದಿಹೊಂಡದಲ್ಲಿ ತಯಾರಾದದ್ದು ಬಾಕಾಹು- ಬಾಳೆಕಾಯಿ ಹುಡಿ ಅಲ್ಲ, ಬದಲಿಗೆ 'ಬಾಕಾ ರ'- ಬಾಳೆಕಾಯಿ ರವಾ!


ಏನು ಪ್ರಯೋಜನ? ಸುಲಭದಲ್ಲಿ ಇದನ್ನು ಉಪ್ಪಿಟ್ಟು ಮಾಡಬಹುದು. "ಬಾಕಾ ರವಾ, ಮೊಸರು, ಉಪ್ಪು, ಖಾರ, ಈರುಳ್ಳಿ, ಮಸಾಲೆ ಸೇರಿಸಿ ಕರಿದರೆ ಬಾಕಾ ರವಾ ಕ್ರಿಸ್ಪಿ ಬೋಂಡಾ ಆಯ್ತು! ಬೇರೆ ಯಾವ ಹಿಟ್ಟು, ಸೋಡಾ ಇಲ್ಲದೇನೇ ರುಚಿಯಾದ ಬೋಂಡಾ ಮಾಡಬಹುದು" ಎನ್ನುತ್ತಾರೆ ಅವರು.


ಬಾಕಾ ರವಾ ಮನೋರಮಾರ ಡಬ್ಬದಿಂದ ಹೊರಬರುವಾಗ ತರಕಾರಿಯೂ ಆಗುತ್ತದೆ ನೋಡಿ. ಈಚೆಗೆ ಹಬ್ಬಕ್ಕೆ ಕರೆಯಲು ನೆಚ್ಚಿನ ತಂದೆ ಇವರ ಮನೆಗೆ ಬಂದಿದ್ದರು. ಅವರಿಗೆ ಮಾಡಿ ಬಡಿಸಿದ ಪ್ರೀತಿಯ ಖಾದ್ಯ ಏನು ಗೊತ್ತೇ? ಮರಕೆಸು ಮತ್ತು ಬಾಕಾ ರವಾ ಸೇರಿಸಿ ಪಲ್ಯ. ಹಲಸಿನ ಉಪ್ಪು ಸೊಳೆಯ ಜಾಗದಲ್ಲಿ ಬಾಕಾ ರವಾ.


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top