ಭಾರತೀಯ ಸೇನೆಯ ಲೆಫ್ಟಿನೆಂಟ್‌ ಹುದ್ದೆಗೆ ಬೆಳ್ತಂಗಡಿಯ ಸಾತ್ವಿಕ ಕುಳಮರ್ವ ಆಯ್ಕೆ

Upayuktha
0





ಬೆಳ್ತಂಗಡಿ: ಬೆಳ್ತಂಗಡಿಯ ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವೀಧರ ಸಾತ್ವಿಕ ಕುಳಮರ್ವ ಭಾರತೀಯ ಸೇನಾಪಡೆಯ ಟೆಲಿಕಮ್ಯುನಿಕೇಶನ್‌ ವಿಭಾಗದಲ್ಲಿ ಲೆಪ್ಟಿನೆಂಟ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ.


ಬೆಂಗಳೂರಿನಲ್ಲಿ 24-ಎಸ್‌ಎಸ್‌ಬಿ (ಸರ್ವಿಸ್‌ ಸೆಲೆಕ್ಷನ್‌ ಬೋರ್ಡ್‌) ನ  ಟಿಜಿಸಿ-133 (ಟೆಕ್ನಿಕಲ್‌ ಗ್ರಾಜುಯೇಟ್‌ ಕೋರ್ಸ್‌) ಮೂಲಕ ಭಾರತೀಯ ಸೇನೆಯ ಕಾಯಂ ಹುದ್ದೆಗೆ ಆಯ್ಕೆಯಾಗಿದ್ದಾರೆ.


ಸಾತ್ವಿಕ್ ಕುಳಮರ್ವ ಅವರು ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದಿದ್ದು, ಎಂಎಸ್ ಪದವಿಯನ್ನು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ನಲ್ಲಿ ಪಡೆದಿದ್ದಾರೆ. ಅಮೆರಿಕದ ಅರಿಝೋನಾ ಸ್ಟೇಟ್ ಯುನಿವರ್ಸಿಟಿ (ಎಎಸ್‌ಯು) ಯಲ್ಲಿ ಸ್ನಾತಕೋತ್ತರ ಅಧ್ಯಯನ ಮುಗಿಸಿ ಸ್ವದೇಶಕ್ಕೆ ಆಗಮಿಸಿದ್ದ ಸಾತ್ವಿಕ್‌ ಗೆ ಇದೀಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ..


ಕಾಯಂ ಹುದ್ದೆಗೆ ನಿಯೋಜನೆಗೆ ಮುನ್ನ ಡೆಹ್ರಾಡೂನ್‌ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆಯಬೇಕಿದ್ದು, ಸೆಪ್ಟೆಂಬರ್ 12ರಂದು ಐಎಂಎಗೆ ಸೇರಿಕೊಳ್ಳುವಂತೆ ನಿಯೋಜನೆ ಪತ್ರ ಬಂದಿದೆ.


ಇವರು, ಪುಂಜಾಲಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಮತ್ತು ಪಿಯು ಕಾಲೇಜು ಉಪನ್ಯಾಸಕಿ ಪಿ. ವಸಂತಿ  ದಂಪತಿಗಳ ಪುತ್ರ.


 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top