ಪಾಕ: ನಿರ್ಮಲಾ ಚಿಕ್ಕಣ್ಣ, ಪೊನ್ನಂಪೇಟೆ
ಸಾಮಗ್ರಿಗಳು: ಬಾಳೆ ಕಾಯಿ ಪುಡಿ (ಬಾಕಾಹು)- 2 ಕಪ್, ಕಡಲೆ ಹಿಟ್ಟು- 1 ಕಪ್, ಸಕ್ಕರೆ- 3 ಕಪ್, ತುಪ್ಪ 3- ಕಪ್ ಮತ್ತು ನೀರು- 2 ಕಪ್
ಮಾಡುವ ವಿಧಾನ: ಕಡಲೆ ಹಿಟ್ಟು ಮತ್ತು ಬಾಳೆಕಾಯಿ ಪುಡಿ ಎರಡನ್ನೂ ಮಿಶ್ರ ಮಾಡಿ. ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಬಾಂಡಲೆಯಲ್ಲಿ ಸಕ್ಕರೆ ಹಾಕಿ ನೀರು ಸೇರಿಸಿ ಒಂದು ಎಳೆ ಪಾಕ ಮಾಡಿಕೊಳ್ಳಿ. ಹುರಿದಿಟ್ಟ ಪುಡಿ ಸೇರಿಸಿ ಕೈಯಾಡಿಸಿ.
ಮೂರು ನಾಲ್ಕು ಬಾರಿ ಸ್ವಲ್ಪ ಸ್ವಲ್ಪ ಕಾಯಿಸಿದ ತುಪ್ಪ ಹಾಕಿ ತಳ ಬಿಡುವ ವರೆಗೆ ತಿರುಗಿಸಿ. ನಂತರ ತಟ್ಟೆಗೆ ತುಪ್ಪ ಸವರಿ ಪಾಕ ಅದಕ್ಕೆ ಸುರುವಿ ಅರ್ಧ ಗಂಟೆ ಹಾಗೆಯೇ ಬಿಡಿ. ನಂತರ ಚಾಕುವಿನಿಂದ ಬೇಕಾದ ರೀತಿಯಲ್ಲಿ ಕತ್ತರಿಸಿಕೊಳ್ಳಿ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
-S
Super good I try this in my home it is Good
ReplyDelete