||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಶೋಧನಾ ವಿದ್ಯಾರ್ಥಿಗಳ ಮೊಗದಲ್ಲಿ ಹರ್ಷ ಮೂಡಿಸಿದ ಶಾಸಕ ಬಿ. ಹರ್ಷವರ್ಧನ್

ಸಂಶೋಧನಾ ವಿದ್ಯಾರ್ಥಿಗಳ ಮೊಗದಲ್ಲಿ ಹರ್ಷ ಮೂಡಿಸಿದ ಶಾಸಕ ಬಿ. ಹರ್ಷವರ್ಧನ್

ಅನುದಾನಕ್ಕಾಗಿ ಶ್ರಮಿಸಿದ ಶಾಸಕ ಬಿ. ಹರ್ಷವರ್ಧನ್‌ ಅವರಿಗೆ ಮೈಸೂರು ವಿವಿ ಎಸ್‌ಸಿ/ಎಸ್‌ಟಿ ಸಂಶೋಧನಾರ್ಥಿಗಳ ಕೃತಜ್ಞತೆನಂಜನಗೂಡು (ಮೈಸೂರು): ಮೈಸೂರು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ/ ಪಂಗಡದ ಎಲ್ಲಾ ಸಂಶೋಧನಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡಿಸುವಲ್ಲಿ ನಂಜನಗೂಡು ಶಾಸಕ ಬಿ ಹರ್ಷವರ್ಧನ್ ಯಶಸ್ವಿಯಾಗಿದ್ದಾರೆ.


ಹರ್ಷವರ್ಧನ್ ಅವರ ಸಕಾರಾತ್ಮಕ ಮಧ್ಯಪ್ರವೇಶದಿಂದಾಗಿ ವಿಶ್ವವಿದ್ಯಾಲಯವು ವಿವಿಧ ವಿಭಾಗಗಳ ಹೆಚ್ಚುವರಿ 60 ಸಂಶೋಧನಾ ವಿದ್ಯಾರ್ಥಿಗಳಿಗೆ ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ನೀಡಿದೆ.


ವಿಶ್ವವಿದ್ಯಾಲಯದ 56 ವಿಭಾಗಗಳಲ್ಲಿ ಪರಿಶಿಷ್ಟ ಜಾತಿ/ ಪಂಗಡಗಳಿಗೆ ಸೇರಿದ 80 ಸಂಶೋಧನಾರ್ಥಿಗಳಿದ್ದಾರೆ. ಪ್ರಸ್ತುತ, 80 ಸಂಶೋಧನಾ ವಿದ್ಯಾರ್ಥಿಗಳಲ್ಲಿ ಕೇವಲ 20 ಮಂದಿ ಮಾತ್ರ ಅನುದಾನವನ್ನು ಪಡೆಯುತ್ತಿದ್ದಾರೆ. ಉಳಿದ ಸಂಶೋಧನಾ ವಿದ್ಯಾಥಿ೯ಗಳು ಶಿಷ್ಯವೇತನದಿಂದ ವಂಚಿತರಾಗಿ ತಮ್ಮ ಸಂಶೋಧನೆಯನ್ನು ಮುಂದುವರಿಸುವುದು ಕಷ್ಟವಾಗಿತ್ತು. ಎಲ್ಲಾ ಎಸ್‌ಸಿ/ ಎಸ್‌ಟಿ ವಿದ್ಯಾಥಿ೯ಗಳಿಗೆ ಶೀಷ್ಯವೇತನ ನೀಡಲು ಹಣವಿಲ್ಲವೆಂದು ಮೈಸೂರು ವಿ.ವಿ.ಯ ಆಡಳಿತ ವಗ೯ವು ತಿಳಿಸಿತ್ತು. ಆದರೆ ಉಳಿದ 60 ಜನರಲ್ಲಿ ಹೆಚ್ಚಿನವರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ.


ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಹರ್ಷವರ್ಧನ್ ಅವರ ನೆರವನ್ನು ಕೋರಿದ್ದರು. ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ತಮಗೂ ಅನುದಾನ ಲಭ್ಯವಾಗುವಂತೆ ಮಾಡಬೇಕೆಂದು ವಿನಂತಿಸಿದ್ದರು.


ರಾಜ್ಯದಲ್ಲಿ ಎಸ್.ಸಿ.ಪಿ/ ಟಿ.ಎಸ್.ಪಿ. ಯೋಜನೆಯಲ್ಲಿ ಬಳಕೆಯಾಗದ ಹಲವು ಕೋಟಿ ಹಣ ಉಳಿದಿದ್ದು, ಅದನ್ನು ಸಂಶೋಧನಾ ವಿದ್ಯಾಥಿ೯ಗಳ ಶಿಷ್ಯವೇತನಕ್ಕೆ ಮಂಜೂರು ಮಾಡಿಸಿಕೊಡುವ ಮೂಲಕ ವಿ.ವಿಯ ಎಸ್.ಸಿ./ ಎಸ್.ಟಿ ವಿದ್ಯಾಥಿ೯ಗಳ ಸಂಶೋಧನಾ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವಂತೆ ಸಂಶೋಧಕರ ಸಂಘ(ರಿ)ದ ವಿದ್ಯಾಥಿ೯ಗಳು ನಂಜನಗೂಡು ಮೀಸಲು ಕ್ಷೇತ್ರದ ಶಾಸಕ 'ಬಿ.ಹಷ೯ವಧ೯ನ್' ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.


ತ್ವರಿತವಾಗಿ ಸ್ಪಂದಿಸಿದ ಶಾಸಕ ಹರ್ಷವರ್ಧನ್, ಕೇವಲ 72 ಗಂಟೆಗಳಲ್ಲಿ ಸಂಶೋಧನಾರ್ಥಿಗಳಿಗೆ ಅನುದಾನ ಬಿಡುಗಡೆ ಮಾಡುವ ಭರವಸೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಮೈಸೂರು ವಿ.ವಿ.ಯ ಸಂಶೋಧಕರ ಸಂಘ(ರಿ)ದ ಮನವಿಯನ್ನು ಆಧರಿಸಿ ಅನುಸೂಚಿತ ಜಾತಿ/ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಸೆಪ್ಟೆಂಬರ್ 2ರಂದು ಶಾಸಕ ಬಿ.ಹಷ೯ವಧ೯ನ್ ಅವರು ಬೆಂಗಳೂರಿನ ಕಛೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಜೊತೆಗೆ, ಕುಲಪತಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಶೀಘ್ರದಲ್ಲೇ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೂ, ಅವರು ಸಂಶೋಧನೆಗೆ ಪ್ರವೇಶ ಪಡೆದ ದಿನದಿಂದಲೇ ಶಿಷ್ಯ ವೇತನ ನೀಡಬೇಕೆಂದು ಆಗ್ರಹಿಸಿದ್ದರು.


ಜೊತೆಗೆ, ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಕರ್ನಾಟಕ ರಾಜ್ಯ ಎಸ್ ಸಿ, ಎಸ್ಟಿ ಆಯೋಗದ ಆಯುಕ್ತರಿಗೆ ಸಹ ಪತ್ರ ಸಲ್ಲಿಸಿದ್ದರು.


ಹರ್ಷವರ್ಧನ್ ಅವರ ನಿರಂತರ ಫಾಲೋ ಅಪ್ ನಿಂದಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡವು ಸೆಪ್ಟೆಂಬರ್ 4ರಂದು ಮೈಸೂರು ವಿಶ್ವವಿದ್ಯಾಲಯದ ಎಸ್‌ಸಿ/ಎಸ್‌ಟಿ ಸೆಲ್‌ಗೆ ಭೇಟಿ ನೀಡಿತು. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಅನುದಾನವನ್ನು ಏಕೆ ಬಳಸಿಲ್ಲ ಎಂದು ಅವರು ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಪ್ರಶ್ನಿಸಿದರು. ಜೊತೆಗೆ ಉಪ ಕುಲಪತಿಗಳ ಮುಂದೆಯೂ ಈ ವಿಷಯವನ್ನು ಎತ್ತಿದರು.


ಪರಿಣಾಮವಾಗಿ, ಎಲ್ಲಾ ಸಂಶೋಧನಾರ್ಥಿಗಳಿಗೆ ಅನುದಾನವನ್ನು ಮಂಜೂರು ಮಾಡುವ ಕುರಿತು ಭರವಸೆ ಸಿಕ್ಕಿದ್ದು, ಔಪಚಾರಿಕ ಲಿಖಿತ ಆದೇಶ ಹೊರಡಿಸುವುದು ಮಾತ್ರ ಬಾಕಿ ಇದೆ.


ಸಂಶೋಧನಾರ್ಥಿಗಳ ಸಮಸ್ಯೆಯನ್ನು ಅರ್ಥಮಾಡಿಕೊಂಡು ತ್ವರಿತವಾಗಿ ಕಾರ್ಯ ಪ್ರವೃತ್ತರಾಗಿ ಸಮಸ್ಯೆ ಪರಿಹರಿಸಿದ್ದಕ್ಕಾಗಿ ಹರ್ಷವರ್ಧನ್ ಅವರಿಗೆ ಸಂಶೋಧನಾರ್ಥಿಗಳ ಸಂಘವು ಧನ್ಯವಾದಗಳನ್ನು ಅರ್ಪಿಸಿದೆ.

 

ಕಗ್ಗಂಟಾಗಿದ್ದ ಸಮಸ್ಯೆ ಪರಿಹರಿಸಿದ ಹರ್ಷವರ್ಧನ್:

ಪ್ರತಿವರ್ಷ ಸುಮಾರು 360 ಕೋಟಿ ರೂಗಳಿಗೂ ಅಧಿಕ ಬಜೆಟ್ ಮಂಡಿಸುವ ಮೈಸೂರು ವಿಶ್ವ ವಿದ್ಯಾನಿಲಯವು ಎಲ್ಲಾ ಎಸ್.ಸಿ/ ಎಸ್.ಟಿ. ಸಂಶೋಧನಾ ವಿದ್ಯಾರ್ಥಿಗಳಿಗೂ ಶಿಷ್ಯ ವೇತನ ನೀಡದೆ ನಿರ್ಲಕ್ಷಿಸುತ್ತಿದೆ.


ಈ ಹಿನ್ನೆಲೆಯಲ್ಲಿ ಪರಿಶಿಷ್ಟ ವಿದ್ಯಾಥಿ೯ಗಳ ಮನವಿಗೆ ಸ್ಪಂದಿಸಿ ಅವರ ಪರವಾಗಿ ಧ್ವನಿ ಎತ್ತಿದ ನಂಜನಗೂಡು ಮೀಸಲು ಕ್ಷೇತ್ರದ ಶಾಸಕ 'ಬಿ.ಹಷ೯ವಧ೯ನ್' ಅವರು ಕಗ್ಗಂಟಾಗಿದ್ದ ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ಮೂಲಕ ಶೋಷಿತ ಸಮುದಾಯಗಳ ಭರವಸೆಯ ಬೆಳಕು ಎನಿಸಿಕೊಂಡರು.(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post