ಪಾಕ: ಸೌಭಾಗ್ಯ ಗೋಪಾಲ್ ಮಾವಿನತೋಪು
ಒಂದು ಕಪ್ ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು), ಕಾಲು ಕಪ್ ಪುಟಾಣಿ ಹಿಟ್ಟು ಮತ್ತು ಒಂದು ಕಪ್ ಬೆಲ್ಲ- ಈ ಮೂರನ್ನೂ ರುಬ್ಬಿ ಪಕ್ಕಕ್ಕಿಡಿ.
ನಂತರ ಜರಡಿ ಹಿಡಿದ ಒಂದೂವರೆ ಕಪ್ ಗೋಧಿ ಹಿಟ್ಟಿಗೆ ಒಂದು ಸಣ್ಣ ಕಪ್ ಹಾಲು, ಎರಡು ಟೀ ಚಮಚೆ ಬಿಸಿ ಕೊಬ್ಬರಿ ಎಣ್ಣೆ ಮತ್ತು ಅರ್ಧ ಕಪ್ ಬಿಸಿನೀರು ಸೇರಿಸಿ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ಬಿಡಿ.
ಆಮೇಲೆ ಈ ಹಿಟ್ಟನ್ನು ಚಿಕ್ಕಚಿಕ್ಕ ಎಲೆಗಳ ಆಕಾರದಲ್ಲಿ ಲಟ್ಟಿಸಿ. ಇದರ ಒಳಗೆ ಆರಂಭದಲ್ಲಿ ರುಬ್ಬಿ ಇಟ್ಟ ಹುಡಿ ತುಂಬಿ. ಎಣ್ಣೆ ಕಾಯಲು ಇಟ್ಟು, ಅದು ಕಾದ ಮೇಲೆ ಇವನ್ನು ಹುರಿದುಕೊಳ್ಳಿ. ಕರ್ಜಿಕಾಯಿ ರೆಡಿ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ