ನೀವಿನ್ನೂ ಮಾಡಿಲ್ಲವೇ ದಿಢೀರ್ ಬಾಕಾಶಾ?

Upayuktha
0


ಕಾಸರಗೋಡು- ದಕ ಜಿಲ್ಲೆಗಳ ಸಾಂಪ್ರದಾಯಿಕ ಉಪಾಹಾರ ಇದು. ದಶಕಗಳ ಹಿಂದೆ ಚಾಲ್ತಿಯಲ್ಲಿತ್ತು. ಆಗಲೂ ವ್ಯಾಪಕವೋ, ಜನಪ್ರಿಯವೋ ಆಗಿದ್ದಂತಿಲ್ಲ.


ಯಾವುದೇ ಜಾತಿಯ ಬಾಳೆಕಾಯಿ ತೆಕ್ಕೊಳ್ಳಿ. ಸಿಪ್ಪೆ ಸಮೇತ ಇಡ್ಲಿ ಪಾತ್ರೆ / ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿ. ಬಿಸಿ ಪೂರ್ತಿ ಆರುವ ಮೊದಲೇ ಸಿಪ್ಪೆ ಬಿಡಿಸಿ ಶಾವಿಗೆ ಮಣೆಯಲ್ಲಿ ಒತ್ತಿ. ಇದರಲ್ಲಿ ಉಪ್ಪು ಇರುವುದಿಲ್ಲ. ಹಾಗಾಗಿ ಉಪ್ಪು, ಹಸಿಮೆಣಸು, ಈರುಳ್ಳಿ ಮತ್ತು ನಿಮ್ಮ ಇಷ್ಟವಸ್ತುಗಳನ್ನು ಸೇರಿಸಿ ಒಗ್ಗರಣೆ ಮಾಡಿ.ಶಾವಿಗೆ ಮಣೆ ಇಲ್ಲದಿದ್ದರೆ ಚಕ್ಕುಲಿ ಮುಟ್ಟಿನಲ್ಲೂ ಓಕೆ.


ಬಾಕಾಶಾ ಮೊದಲ ಪೋಸ್ಟ್ ಪ್ರಕಟವಾದದ್ದು ಮೊನ್ನೆ ಭಾನುವಾರ, ಸೆಪ್ಟೆಂಬರ್ 19ಕ್ಕೆ. ಅನಂತರ ಹಲವರು ಇದನ್ನು ಮಾಡಿದರು. ಅದೇ ರಾತ್ರಿ ಮಾಡಿದವರು ದಾವಣಗೆರೆಯ ರೇವತಿ ಅಡಿಗ. ಮರುದಿನ ಪುತ್ತೂರಿನ ಸೌಖ್ಯ ಮೋಹನ್. ನಿನ್ನೆ ಕಾಸರಗೋಡು ಮೀಯಪದವಿನ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ. ಇಂದು ಬೆಳಗ್ಗೆ ದಕ ಮಾಣಿಯ ಪಡಾರು ರಾಮಕೃಷ್ಣ ಶಾಸ್ತ್ರಿ. ಈಗ ಸಂಜೆ ಮಣಿಪಾಲದಲ್ಲಿ ಸುರೇಶ್ ಶಿರಂತಡ್ಕ. ಹೊಸಪೇಟೆಯಲ್ಲಿ ಹೆಸರರಿಯದ ಹಲವಾರು ಕುಟುಂಬಗಳು. ನಮಗೆ ಗೊತ್ತಾಗದ ಇನ್ನೂ ಹಲವು ಕುಟುಂಬಗಳು ಇರಬಹುದು. 


"ನಮ್ಮ ಮನೆಯ ಎಲ್ಲರೂ ಮೆಚ್ಚಿಕೊಂಡರು. ಒಳ್ಳೆ ರುಚಿ.ನಮ್ಮದೇ ಬಾಳೆಕಾಯಿಯ ಉಪ್ಕರಿ ತಿನ್ನುವ ಖುಷಿಯೇ ಬೇರೆ" ಎನ್ನುತ್ತಾರೆ ಎಲ್ಲರೂ.


ನೀವಿನ್ನೂ ಬಾಳೆಕಾಯಿ ಶಾವಿಗೆಯ (ಬಾಕಾಶಾ), ಅರ್ಧ ಗಂಟೆಯಲ್ಲಿ ತಯಾರಿಸಬಲ್ಲ ದಿಢೀರ್ ಬಾಕಾ ಶಾವಿಕೆ ಉಪ್ಕರಿ ಸವಿದಿಲ್ಲವೇ?

- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top