ಮಂಗಳೂರು: ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ತನ್ನ ಉಪನ್ಯಾಸ ಮಾಲಿಕೆಯ 5ನೇ ಉಪನ್ಯಾಸ ಕಾರ್ಯಕ್ರಮ ಹಾಗೂ ಶಿಕ್ಷಕರ ಕವಿಗೋಷ್ಠಿಯನ್ನು ಸೆಪ್ಟೆಂಬರ್ 25ರಂದು ರಾತ್ರಿ 7 ಗಂಟೆಗೆ ಮಂಗಳೂರಿನ ಗೂಗಲ್ ಮೀಟ್ ವೆಬಿನಾರ್ ಮೂಲಕ ಆಯೋಜಿಸಿದೆ.
ಜನಪ್ರಿಯ ವಾಗ್ಮಿಗಳಾದ ಎಂ.ಆರ್.ಪಿ.ಎಲ್ ನ ಪ್ರಶಿಕ್ಷಣ ವಿಭಾಗದ ಉಪ ಮಹಾ ಪ್ರಬಂಧಕಿ ವೀಣಾ ಟಿ.ಶೆಟ್ಟಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ 'ತುಳುವ ಮಣ್ಣ್'ದ ಕಮ್ಮೆನ' ಎಂಬ ವಿಷಯದ ಕುರಿತು ತುಳು ಭಾಷೆಯಲ್ಲಿ ಉಪನ್ಯಾಸ ನೀಡಲಿದ್ದಾರೆ. ಶಿಕ್ಷಕರ ದಿನಾಚರಣೆ ನಿಮಿತ್ತ 'ಕಲಿಸುವ ಮನಸಿನ ಕವಿತೆ' ಎಂಬ ಶಿಕ್ಷಕರ ಕನ್ನಡ ಕವಿಗೋಷ್ಟಿಯನ್ನು ಏರ್ಪಡಿಸಲಾಗಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಮಾಧವ ಎಂ.ಕೆ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವರು.
ಉದ್ಯಮಿ ಸಾಹಿತ್ಯ ಪೋಷಕ ಗುರುಪ್ರಸಾದ್ ಕಡಂಬಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಸ್ತಾವನೆ ಗೈಯುವರು.
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು ಇದರ ಶಿಕ್ಷಕಿ ಚಿತ್ರಾಶ್ರೀ ಕೆ.ಎಸ್, ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ತುಳು ಎಂ.ಎ ಉಪನ್ಯಾಸಕಿ ಪ್ರಶಾಂತಿ ಶೆಟ್ಟಿ ಇರುವೈಲು, ಬಿ.ಎಂ.ಪ್ರೌಢಶಾಲೆ, ಉಳ್ಳಾಲ ಇದರ ಶಿಕ್ಷಕಿ ಶ್ರೀಮತಿ ಉಷಾ ಎಂ, ಕಲ್ಮಂಜ ಸ.ಹಿ.ಪ್ರಾ.ಶಾಲೆ ಕಲ್ಮಂಜ, ಬಂಟ್ವಾಳ ಇದರ ಶಿಕ್ಷಕ ನಾಗರಾಜ ಖಾರ್ವಿ, ಕೆನರಾ ಪ್ರೌಢಶಾಲೆ ಉರ್ವ ಇದರ ಕನ್ನಡ ಶಿಕ್ಷಕಿ ಲಕ್ಷ್ಮೀ ವಿ. ಭಟ್, ಸರಕಾರಿ ಪ್ರೌಢಶಾಲೆ, ನಾರ್ಶ ಮೈದಾನ, ಬಂಟ್ವಾಳ ಇದರ ಶಿಕ್ಷಕಿ ತುಳಸಿ ಕೈರಂಗಳ, ಬೆಸೆಂಟ್ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲಬೈಲು ಇದರ ಶಿಕ್ಷಕಿ ಸುಮಾ ಬಾರ್ಕೂರು, ಶಾರದಾ ವಿದ್ಯಾ ನಿಕೇತನ ಪದವಿ ಪೂರ್ವ ಕಾಲೇಜು, ತಲಪಾಡಿ ಇದರ ಉಪನ್ಯಾಸಕ ಸುರೇಶ್ ರಾವ್ ಅತ್ತೂರು, ನವಜೀವನ ಪ್ರೌಢ ಶಾಲೆ ಪೆರಡಾಲ, ಬದಿಯಡ್ಕದ ಶಿಕ್ಷಕಿ ಸುಶೀಲಾ ಕೆ.ಪದ್ಯಾಣ, ನಿವೃತ್ತ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಉದಯರಾಜ್ ಬೆಂಗಳೂರು ಆಹ್ವಾನಿತ 10 ಮಂದಿ ಶಿಕ್ಷಕರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಉಪಸ್ಥಿತರಿರುವರು. ಮಂಗಳೂರು ತಾಲೂಕು ಚುಸಾಪ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಸಮನ್ವಯಕಾರಾಗಿ ಕಾರ್ಯಕ್ರಮ ನಡೆಸಿಕೊಡುವರು. ಆಸಕ್ತರು ಗೂಗಲ್ ಮೀಟ್ ನಲ್ಲಿ https://meet.google.com/vqr-iqke-igs ಕೊಂಡಿ ಬಳಸಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ