ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ಇಂದು (ಸೆ.21) "ರಾಷ್ಟೀಯ ಹೊಸ ಶಿಕ್ಷಣ ನೀತಿ 2020" ವಿಶೇಷ ಕಾರ್ಯಾಗಾರ ನಡೆಯಿತು.
ಕಾಲೇಜಿನ ಸಹಾಯ ಪ್ರಾಧ್ಯಾಪಕರಾದ ಆಂಜನೇಯ ಎಂ.ಎನ್. ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಎನ್‌ಇಪಿ ಯ ಸಂರಚನೆ, ವೈಶಿಷ್ಟತೆ ಹಾಗೂ ಅನುಷ್ಠಾನ, ಪಠ್ಯಕ್ರಮ, ಮೌಲ್ಯಮಾಪನ, ಚಟುವಟಿಕೆ ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಂತೋಷ್ ಪ್ರಭು ಎಂ ಕಾರ್ಯಕ್ರಮವನ್ನು ನಿರೂಪಿಸಿದರು. IQAC ಯ ಸಂಯೋಜಕರಾದ ಪ್ರೊ. ರವಿಶಂಕರ್. ಬಿ ಹಾಗೂ ಡಾ. ಲೋಕೇಶ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
20 ಉಪನ್ಯಾಸಕರು ಹಾಗೂ 45 ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ