|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಮ್ಮೂರ ಪ್ರತಿಭೆ: ರಂಗಭೂಮಿ, ಕಿರುತೆರೆ, ಸಿನಿಮಾ ರಂಗದಲ್ಲಿ ಬೆಳಗುತ್ತಿರುವ ಕಾರ್ತಿಕ್ ಸಾಮಗ

ನಮ್ಮೂರ ಪ್ರತಿಭೆ: ರಂಗಭೂಮಿ, ಕಿರುತೆರೆ, ಸಿನಿಮಾ ರಂಗದಲ್ಲಿ ಬೆಳಗುತ್ತಿರುವ ಕಾರ್ತಿಕ್ ಸಾಮಗ



ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಕನ್ನಡ ಚಿತ್ರರಂಗ ಕ್ಷೇತ್ರಕ್ಕೆ ಅನೇಕ ಪ್ರತಿಭೆಯನ್ನು ಕೊಡುಗೆಯಾಗಿ ನೀಡಿದೆ. ಇಂತಹ ಪ್ರತಿಭೆಯಲ್ಲಿ ಇಂದು ಪ್ರಜ್ವಲಿಸುತ್ತಿರುವ ಪ್ರತಿಭೆ ಶ್ರೀಯುತ ಕಾರ್ತಿಕ್ ಸಾಮಗ.


ಉಡುಪಿ ಜೆಲ್ಲೆಯ ಕಾಪುವಿನ ಪಾದೂರಿನ ಶ್ರೀಮತಿ ಸೀತಾ ಹಾಗೂ ಶ್ರೀಯುತ ಗೋಪಾಲಕೃಷ್ಣ ಸಾಮಗ ಇವರ ಮಗನಾಗಿ ದಿನಾಂಕ 09.05.1988 ರಂದು ಜನನ. ಎಂ.ಕಾಂ ಇವರ ವಿದ್ಯಾಭ್ಯಾಸ. ಚಿತ್ರ ರಂಗಕ್ಕೆ ಬರಬೇಕು ಎಂಬುವುದು ಇವರ ಕನಸಾಗಿತ್ತು. ಇವರು ತಮ್ಮ ಹೈಸ್ಕೂಲ್ ಶಿಕ್ಷಣದ ನಂತರ ಉಡುಪಿಯ ಸಂಸೃತ ಕಾಲೇಜ್ ಗೆ ಸೇರಿದ ಇವರು ಹಗಲು ಕೆಲಸಕ್ಕೆ ಹೋಗಿಕೊಂಡು ಸಂಧ್ಯಾ ಕಾಲೇಜಿಗೆ ಹೋಗಿ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್, ಕ್ಲಾಸಿಕಲ್ ಡಾನ್ಸ್ ಸೀನಿಯರ್, ಸಂಗೀತ ಜೂನಿಯರ್ ಪದವಿ, ಹೀಗೆ ಚಿಕ್ಕ ವಯಸ್ಸಿನಲ್ಲಿ ತಾವು ಚಿತ್ರರಂಗಕ್ಕೆ ಬರಬೇಕು, ಏನು ಆದ್ರೂ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಾ ತಮ್ಮ ಕನಸುಗಳನ್ನು ಸಾಕಾರಗೊಳಿಸುತ್ತ ಬಂದವರು ಶ್ರೀಯುತ ಕಾರ್ತಿಕ್ ಸಾಮಗ.


ಪದವಿ ಶಿಕ್ಷಣ ಮುಗಿದ ತಕ್ಷಣ ಉಡುಪಿ ರಂಗಭೂಮಿಯಲ್ಲಿ ನಾಟಕ ಮಾಡುತ್ತಿದ್ದರು. ಹಾಗಾಗಿ ಮಂಡ್ಯ ರಮೇಶ್ ಇವರ ಪರಿಚಯ ಆಯಿತು. ಮಂಡ್ಯ ರಮೇಶ್ ಇವರ ಗುರುಗಳು. ನಂತರ ಒಂದು ತುಳು ಚಿತ್ರದಲ್ಲಿ ಸೆಟ್ ವರ್ಕ್ ಮಾಡಿದ ಇವರು ನಂತರ ಶಿವಧ್ವಜ ಶೆಟ್ಟಿ ಅವರ ಒಂದು ಕೊಡವ ಭಾಷೆಯ ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆ ಆಗ್ತಾರೆ. ಚಿತ್ರದಲ್ಲಿ ಯೋಧ ಪಾತ್ರದ ನಟನೆಗೆ ಆಯ್ಕೆ ಆಗುತ್ತಾರೆ. ಆದರೆ ತುಳು ಚಿತ್ರದಲ್ಲಿ ತುಂಬಾ ಕೆಲಸ ಮಾಡಿದ ಕಾರಣ ತುಂಬಾ ತೂಕ ಕಳೆದುಕೊಂಡಿದ್ದರಿಂದ ನಾಯಕ ನಟ ಆಗುವ ಅವಕಾಶದಿಂದ ವಂಚಿತರಾಗುತ್ತಾರೆ. ಆದರೆ ಇವರು ಅವರ ಬಳಿ ಏನಾದರೂ ಕೆಲಸಕ್ಕೆ ಬರ್ತೇನೆ ಎಂದು ಹೇಳಿದಾಗ ಚಿತ್ರದಲ್ಲಿ ಆರ್ಟ್ ಡೈರೆಕ್ಷನ್ ಕೆಲಸವನ್ನು ಕೊಡುತ್ತಾರೆ. ನಂತರ ಶೆಟ್ಟಿ ಅವರು ಇವರನ್ನು ರವಿ ಗರಣಿ ಅವರ ಹತ್ತಿರ ಕಳಿಸಿಕೊಟ್ಟು, ಅಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಮೃತ ವರ್ಷಿಣಿ, ಕೃಷ್ಣ ರುಕ್ಮಿಣಿ, ಪ್ರಿಯದರ್ಶಿನಿ, ಅವನು ಮತ್ತು ಶ್ರಾವಣಿ, ಅರಗಿಣಿ ಇಷ್ಟು ಧಾರಾವಾಹಿಗಳಿಗೂ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅರಗಿಣಿ ಹೊಸ ಕತೆಯ ಶೂಟಿಂಗ್ ಬಿಜಾಪುರದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ವಿಲನ್ ಪಾತ್ರಕ್ಕೆ ಬರಬೇಕಾದ ನಟ ಬರುವುದಿಲ್ಲ, ಹಾಗಾಗಿ ವಿಲನ್ ಪಾತ್ರ ಮಾಡುವ ಅವಕಾಶ ಇವರಿಗೆ ಸಿಗುತ್ತದೆ. ಅಲ್ಲಿಂದ ಇವರ ಚಿತ್ರ ಜೀವನ ಪ್ರಾರಂಭವಾಗುತ್ತದೆ. ಇದಕ್ಕೂ ಮುಂಚೆ ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ಚಿಕ್ಕ ಪಾತ್ರವನ್ನು ಕಾರ್ತಿಕ್ ಸಾಮಗ ಅವರು ಮಾಡಿದ್ದರು.


ಒಂದು ಪಾತ್ರದ ಬಗ್ಗೆ ನಟನೆ ಮಾಡುವ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತಿರ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ಒಂದು ಪಾತ್ರ ಮಾಡುವ ಮುಂಚೆ ಆ ಪಾತ್ರ ಹೇಗೆ ಇರುತ್ತೆ ಎಂದು ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳುತ್ತೇನೆ. ಉದಾಹರಣೆ ಇಂದ್ರ ಪಾತ್ರ ಮಾಡುವಾಗ ಇಂದ್ರ ದೇವರಿಗೆ ತುಂಬಾ ಅಹಂಕಾರ ಇತ್ತು, ನಾನೇ ತುಂಬಾ ಸುಂದರ ಎಂದುಕೊಂಡಿದ್ದ. ಹೀಗೆ ನನ್ನ ಪಾತ್ರದ ಒಳಗೆ ಹೋಗಿ ಒಮ್ಮೆ ಮನೆಯಲ್ಲಿ ಅಭಿನಯ ಮಾಡಿ ಪಾತ್ರಕ್ಕೆ ಸಜ್ಜುಗೊಳ್ಳುತ್ತೇನೆ ಎಂದು ಹೇಳುತ್ತಾರೆ ಕಾರ್ತಿಕ್ ಸಾಮಗ.


ಇಂದ್ರ ಪಾತ್ರ ನನ್ನ ನೆಚ್ಚಿನ ಪಾತ್ರ. ಮುಂದೆ ಕೃಷ್ಣ, ವಿಷ್ಣು, ರಾಮ ಪಾತ್ರ ಮಾಡಬೇಕು ಎಂದು ತುಂಬಾ ಆಸೆ ಇದೆ. ಚಿತ್ರದಲ್ಲಿ ನಾಯಕ ನಟ, ವಿಲನ್ ಯಾವ ಪಾತ್ರವಾದರೂ ಮಾಡಲು ನನಗೆ ತುಂಬಾ ಖುಷಿ. ನನ್ನ ಸ್ನೇಹಿತರು ಕೆಲವರು ಸೇರಿ ಕೆಲವೊಂದು ಚಿತ್ರಗಳನ್ನು ಮಾಡುವ ಯೋಚನೆ ಮಾಡುತ್ತಿದ್ದಾರೆ ಎಂದು ಸಾಮಗರು ಹೇಳುತ್ತಾರೆ.


ನಿಮ್ಮ ಮುಂದಿನ ಯೋಜನೆಗಳು ಕೇಳಿದಾಗ ಹೀಗೆ ಹೇಳುತ್ತಾರೆ:-

ಮುಂದಿನ ಯೋಜನೆ ಕೇಳಿದಾಗ ಇವರು ಹೇಳುವುದು ಸಿನಿಮಾ... ಸಿನಿಮಾದಲ್ಲಿ ಅನೇಕ ರೀತಿಯ ಸಿನಿಮಾ, ಬೇರೆ ಬೇರೆ ತರಹದ ಪಾತ್ರಗಳನ್ನು ಮಾಡಬೇಕು ಎಂಬ ಕನಸು ಕಾಣುತ್ತಿದ್ದಾರೆ. ಇವರು ಹಾಗೂ ಇವರ ಸ್ನೇಹಿತರು ಸೇರಿ ಒಂದು ಚಿತ್ರ ಮಾಡಬೇಕು ಎಂಬ ಯೋಜನೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಚಿತ್ರದ ಕೆಲಸ ಪ್ರಾರಂಭ ಮಾಡಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ.


ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಇವರು ಹೀಗೆ ಹೇಳುತ್ತಾರೆ:-

ನಿಮಗೆ ನಿಮ್ಮ ಮೇಲೆ ನಂಬಿಕೆ ಇರಬೇಕು, ಸಿನಿಮಾ ರಂಗದಲ್ಲಿ ನಾನು ಸಾಧನೆ ಮಾಡುತ್ತೇನೆ ಎಂಬ ಛಲ ಇದ್ದರೆ ಬನ್ನಿ. ಅವರು ಬಂದ್ರು, ಇವರು ಬಂದ್ರು ಅಂತ ಬರಬೇಡಿ. ಯಾಕೆ ಏನಂದ್ರೆ ಈ ರೀತಿ ಬಂದ್ರೆ ಸಾಧನೆ, ಯಶಸ್ಸು ಸಿಗಲು ಸಾಧ್ಯವಿಲ್ಲ ಎಂದು ನನ್ನ ಅಭಿಪ್ರಾಯ ಎಂದು ಸಾಮಗರು ಹೇಳುತ್ತಾರೆ.


"ಶನಿ" ಸೀರಿಯಲ್ ನಲ್ಲಿ ಇಂದ್ರ ಪಾತ್ರಕ್ಕೆ "ಅತ್ಯುತ್ತಮ ಪೌರಾಣಿಕ ನಟ" ಎಂಬ ಪ್ರಶಸ್ತಿ ಇವರಿಗೆ ಸಿಕ್ಕಿರುತ್ತದೆ.

ಪುಸ್ತಕ ಓದುವುದು, ಕ್ರಿಕೆಟ್ ಆಡುವುದು, ಸಂಗೀತ ಹಾಡುವುದು ಇವರ ಹವ್ಯಾಸಗಳು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم