ಮಂಗಳೂರು ವಿವಿ: 42ನೇ ಸಂಸ್ಥಾಪನಾ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ

Upayuktha
0


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಸಂಸ್ಥಾಪನಾ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ 'ಮಂಗಳಾ ಸಭಾಂಗಣ'ದಲ್ಲಿ ಸೆಪ್ಟೆಂಬರ್ 22ರ ಬುಧವಾರ ಪೂರ್ವಾಹ್ನ 10:30ಕ್ಕೆ ನಡೆಯಲಿದೆ. 


ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ, ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ ಜಿ ತಳವಾರ್ ಅವರು ಮುಖ್ಯ ಅತಿಥಿಯಾಗಿರಲಿದ್ದಾರೆ. ಎನ್ಹೆಚ್ಆರ್ಡಿಎನ್ ನ್ಯಾಷನಲ್ ಬೋರ್ಡ್ ಮೆಂಬರ್ ಹಾಗೂ ಟಿಸಿಎಸ್ ಲಿಮಿಟೆಡ್ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಫ್. ಇಸ್ರೇಲ್ ಇನ್ಬರಾಜ್ ಗೌರವ ಅತಿಥಿಯಾಗಿರಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.  


ಇದೇ ವೇಳೆ, ಶೈಕ್ಷಣಿಕ ಸಾಧನೆಗಾಗಿ ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಯುಜಿಸಿ- ಬಿಎಸ್ಆರ್ ಫ್ಯಾಕಲ್ಟಿ ಡಾ. ಕೆ ಆರ್ ಶ್ರೀಧರ್, ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಿಕೆ ಡಾ. ವಿಶಾಲಾಕ್ಷಿ ಬಿ ಹಾಗೂ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ ಹೆಚ್ ಶೇಖರ್ ಅವರನ್ನು ಸನ್ಮಾನಿಸಲಾಗುವುದು. 2019-20 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ನೀಡುವ  ʼಕರ್ನಾಟಕ ಕ್ರೀಡಾ ಪೋಷಕʼ ಪ್ರಶಸ್ತಿಯನ್ನು ಪಡೆದ ದೈಹಿಕ ಶಿಕ್ಷಣ ವಿಭಾಗದ, ನಿರ್ದೇಶಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.  


ಆನ್ಲೈನ್ನಲ್ಲಿ ಕಾರ್ಯಕ್ರಮ ವೀಕ್ಷಣೆಗಾಗಿ https://mangaloreuniversity.ac.in/foundation-day-celebration-2021 ವೆಬ್ ಲಿಂಕ್ ಅಥವಾ ಯೂ ಟ್ಯೂಬ್ ಲಿಂಕ್ https://youtu.be/EHrC66gsu.Jc ನ್ನು ಬಳಸಬಹುದು, ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top