|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವ್ಯಕ್ತಿ, ದೇಶದ ಭವಿಷ್ಯ ರೂಪಿಸುವವರೇ ಶಿಕ್ಷಕರು

ವ್ಯಕ್ತಿ, ದೇಶದ ಭವಿಷ್ಯ ರೂಪಿಸುವವರೇ ಶಿಕ್ಷಕರು


ಜೀವನದಲ್ಲಿ ಧನಾತ್ಮಕ ಚಿಂತನೆ ಬೆಳೆಸಿ ಸರಿ ಮಾರ್ಗವನ್ನು ತೋರುವವರು ಅವರೇ. ಭರವೆಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಅಸಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಶಿಕ್ಷಕ.  

   

ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಮಕ್ಕಳ ಭವಿಷ್ಯವನ್ನು ರೂಪಿಸುವ, ಪಠ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ, ದೂರದೃಷ್ಟಿ, ಮಾನವೀಯತೆಯನ್ನು ಬೋಧಿಸುವ, ತನ್ಮೂಲಕ  ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತಿ ಮಹತ್ವದ್ದಾಗಿದೆ.

               

ನನಗೆ ಶಿಕ್ಷಕರು ಎಂದರೆ ನೆನಪಾಗುವುದೇ ಬಾಲ್ಯದಲ್ಲಿ ಶಿಕ್ಷಕರೊಂದಿಗೆ ಕಳೆದ ಸಮಯ, ಆ ನೆನಪುಗಳು. ತಮಗೆ ಗೊತ್ತಿದ್ದ ವಿದ್ಯೆಗಳನ್ನೆಲ್ಲ ಬಳಸಿ ಮಕ್ಕಳನ್ನು ರಂಜಿಸುವುದರೊಂದಿಗೆ ಪಾಠವನ್ನು ಅರ್ಥಮಾಡಿಸುತ್ತಿದ್ದರು. ಪ್ರತಿಭಾ ಕಾರಂಜಿಗೆ ಮಕ್ಕಳನ್ನು ತಯಾರು  ಮಾಡಿಸುವುದು, ಮಕ್ಕಳ ದಿನಾಚರಣೆ, ತಿಂಗಳ ಹಬ್ಬ, ಶಾಲಾ ವಾರ್ಷಿಕೋತ್ಸವ ಇನ್ನೂ ಹಲವು ಸಂಗಾತಿಗಳಲ್ಲಿ ಶಿಕ್ಷಕರನ್ನು ಮರೆಯುವಂತಿಲ್ಲ.


ಇನ್ನು ಶಿಕ್ಷಕರ ದಿನಾಚರಣೆ ಎಂದರೆ ವಿದ್ಯಾರ್ಥಿಗಳಿಗೂ ಸಂಭ್ರಮ. ಎಲ್ಲರೂ ಹಣವನ್ನು ಒಟ್ಟುಗೂಡಿಸಿ ತಂದು ಶಿಕ್ಷಕರನ್ನು ಆಟವಾಡಿಸುವುದು, ವಿಧವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಶಿಕ್ಷಕರನ್ನು ಖುಷಿಪಡಿಸುವುದು, ಅವರಿಗೆ ಬಹುಮಾನ ನೀಡುವುದು, ಶಿಕ್ಷಕರ ಬಗ್ಗೆ ಭಾಷಣ... ಹೀಗೆ ಶಿಕ್ಷಕರ ದಿನಾಚರಣೆ ಹಲವು ಬಗೆ.


ಶಾಲೆಯಿರಲಿ, ಕಾಲೇಜಿರಲಿ ಶಿಕ್ಷಕರನ್ನು ಮರೆಯುವಂತಿಲ್ಲ. ಎಲ್ಲರ ಶ್ರಮವೂ ಮಹತ್ವವಾದದ್ದು. ವಿದ್ಯೆ, ಜ್ಞಾನ, ಮಾಹಿತಿ ಪಡೆಯುವುದು ಈಗ ಸುಲಭವಾದರೂ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿ ಹೇಳಲು ಗುರುವೊಬ್ಬರ ಅಗತ್ಯ ಇದ್ದೇ ಇರುತ್ತದೆ. ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ ಸರಿ ಮಾರ್ಗವನ್ನು ತೋರುವವರೆ ಅವರೇ.


ಅಸಂಖ್ಯ ಮಕ್ಕಳ ಭವಿಷ್ಯ ರೂಪಿಸಿ, ಆ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡುವ ಶಿಕ್ಷಕರೆಲ್ಲರನ್ನು ನಮಿಸುವುದು ನಮ್ಮ ಕರ್ತವ್ಯ. ನಮಗೆ ಉತ್ತಮ ಮಾರ್ಗದರ್ಶನ ನೀಡಿ ಗೆಳೆಯರಂತೆಯೆ ನಮ್ಮೊಂದಿಗೆ ಬೆರೆತು, ಜೀವನದಲ್ಲಿ ಶಿಸ್ತನ್ನು ಕಲಿಸಿದ ಎಲ್ಲಾ ಶಿಕ್ಷಕರಿಗೆ ವಂದನೆಗಳು.



-ಹರ್ಷಿಣಿ,   

ತೃತೀಯ ಬಿ.ಎ 

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post