|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮನ ದಿವ್ಯ ಕಥನದ ಮನನದಿಂದ ಜೀವನ ಪಾವನ: ಎಡನೀರು ಶ್ರೀಗಳು

ಶ್ರೀರಾಮನ ದಿವ್ಯ ಕಥನದ ಮನನದಿಂದ ಜೀವನ ಪಾವನ: ಎಡನೀರು ಶ್ರೀಗಳು

 ಗಮಕ ಶ್ರಾವಣ ಸಮಾರೋಪ




ಎಡನೀರು: "ಪ್ರಾಚೀನವಾದ ಗಮಕ ಕಲೆ ಭಾರತೀಯ ಸಂಸ್ಕೃತಿಯ ದ್ಯೋತಕವಾಗಿದೆ. ಶ್ರಾವಣ ಮಾಸದಲ್ಲಿ ಶ್ರೀಮದ್ರಾಮಾಯಣದ ವಾಚನ-ವ್ಯಾಖ್ಯಾನಗಳನ್ನು ಮಾಡುವುದರಿಂದ ಮಾನವರ ಜೀವನವು ಸಾರ್ಥಕವಾಗುವುದು; ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಭಾರತೀಯರ ಆರಾಧ್ಯಮೂರ್ತಿಯಾಗಿದ್ದಾನೆ. ಅಂಥವನ ದಿವ್ಯಕಥೆಯನ್ನು ನಾವೆಲ್ಲರೂ ಗೌರವದಿಂದ ಮನನ ಮಾಡಬೇಕು" ಎಂಬುದಾಗಿ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಅಭಿಪ್ರಾಯ ಪಟ್ಟರು.  


ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ ಆದಿ ಗಮಕಿಗಳಾದ ಕುಶಲವರ ಜನ್ಮಮಾಸಾಚರಣೆಯ ಸರಣಿ ಕಾರ್ಯಕ್ರಮದ ಕೊನೆಯ ದಿನ ಶ್ರೀ ಮಠದ ಚಾತುರ್ಮಾಸ ಸಭಾಭವನದಲ್ಲಿ ಜರಗಿದ ಸಮಾರೋಪ ಸಮಾರಂಭವನ್ನು ದೀಪಜ್ವಾಲನೆಯೊಂದಿಗೆ ನೆರವೇರಿಸಿ ಮಾತನಾಡಿದರು.


ಕಾಸರಗೋಡು ಕರ್ನಾಟಕ ಸಮಿತಿಯ ಅಧ್ಯಕ್ಷ ಶ್ರೀ ಕೆ.ಎಂ. ಬಳ್ಳಕ್ಕುರಾಯರು ಸಮಾರೋಪ ಭಾಷಣ ಮಾಡುತ್ತಾ "ಪ್ರಾಚೀನ ಕಲೆಯಾಗಿರುವ ಗಮಕ ವಾಚನ-ವ್ಯಾಖ್ಯಾನಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನಡೆಸುವುದರೊಂದಿಗೆ ನಾಡಿನಾದ್ಯಂತ ಪ್ರಚಾರ ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ. ಹಿಂದಿನ ಕಾಲದಲ್ಲಿ ರಾಜಾಶ್ರಯ ಇದ್ದಂತಹ ಗಮಕ ಕಲೆಯನ್ನು ಇಂದು ಅನಿವಾರ್ಯವಾಗಿ ಜನಸಾಮಾನ್ಯರೇ ಮುಂದುವರಿಸಿಕೊಂಡು ಹೋಗಬೇಕು" ಎಂದು ನುಡಿದರು.


ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಶ್ರೀ ತೆಕ್ಕೆಕೆರೆ ಶಂಕರನಾರಾಯಣ ಭಟ್ಟರು ಅಧ್ಯಕ್ಷತೆ ವಹಿಸಿದರು. 


ಈ ಸಂದರ್ಭದಲ್ಲಿ ತೊರವೆ ರಾಮಾಯಣದ ಮಾಯಾಮೃಗದ ಕಥೆಯ ಆಯ್ದಭಾಗವನ್ನು  ಶಿಕ್ಷಕಿ ಕುಮಾರಿ ಅನುಷಾ ಎಸ್ ಮಯ್ಯ ಅವರು ಸುಶ್ರಾವ್ಯವಾಗಿ ವಾಚನ ಮಾಡಿದರು. ಸಾಹಿತ್ಯರತ್ನ ವಿ.ಬಿ. ಕುಳಮರ್ವ ಅವರು ಭಾವಪೂರ್ಣವಾಗಿ ವ್ಯಾಖ್ಯಾನ ಗೈದರು.


ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಮತ್ತು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಶ್ರೀ ವಿ.ಬಿ.ಕುಳಮರ್ವ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಮಕ ಪರಿಷತ್ತಿನ ಜತೆಕಾರ್ಯದರ್ಶಿ ಶ್ರೀ ಶಿವರಾಮ ಪಿ.ವಿ. ಸ್ವಾಗತಿಸಿದರು. ಚಾತುರ್ಮಾಸ ಸಮಿತಿಯ ಅಧ್ಯಕ್ಷ ಶ್ರೀ ರವೀಶ ತಂತ್ರಿ ಕುಂಟಾರು ಅವರು ಧನ್ಯವಾದಗಳನ್ನು ಸಮರ್ಪಿಸಿದರು. ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ದಿ|ಕುಳಮರ್ವ ವೆಂಕಪ್ಪ ಭಟ್ಟರು ತಾಳೆಯೋಲೆಗಳಲ್ಲಿ ಉಕ್ಕಿನ ಕಂಠದ ಸಹಾಯದಿಂದ ಬರೆದ "ತೊರವೆ ರಾಮಾಯಣದ" ಬೃಹತ್ ಗ್ರಂಥವು ವೇದಿಕೆಯ ಪ್ರಧಾನ ಆಕರ್ಷಣೆಯಾಗಿತ್ತು.



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post