|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ‘ವಿಕಾಸ’ದ ವತಿಯಿಂದ ಹಿರಿಯ ಮಾಧ್ಯಮ ಸಾಧಕರಿಗೆ ಗೌರವಾರ್ಪಣೆ

‘ವಿಕಾಸ’ದ ವತಿಯಿಂದ ಹಿರಿಯ ಮಾಧ್ಯಮ ಸಾಧಕರಿಗೆ ಗೌರವಾರ್ಪಣೆ



ಬೆಂಗಳೂರಿನ ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ - ವಿಕಾಸ ವತಿಯಿಂದ ಏರ್ಪಸಿದ್ದ ಸಮಾರಂಭವನ್ನು ಮಾಜಿ ಅಡ್ವೋಕೇಟ್ ಜನರಲ್, ಲೋಕ ಶಿಕ್ಷಣ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಉದ್ಘಾಟಿಸಿ ಹಿರಿಯ ಮಾಧ್ಯಮ ಸಾಧಕರಿಗೆ ಗೌರವಾರ್ಪಣೆಯನ್ನು ನಡೆಸಿಕೊಟ್ಟರು.


ಮಾಧ್ಯಮ ಸಮಲೋಚಕ ಮತ್ತು ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ಎರಡು ದಶಕದ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಯು.ಬಿ.ವೆಂಕಟೇಶ್, ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ಹಾಗೂ ವಿಕಾಸದ ಅಧ್ಯಕ್ಷ ಶ್ರೀನಾಥ್ ಜೋಷಿ ವೇದಿಕೆ ಮೇಲಿದ್ದರು.


ಇದೇ ಸಂದರ್ಭದಲ್ಲಿ ವಸಂತ ನಾಡಿಗೇರ್ ರವರು ಬದಲಾದ ಪರಿಸ್ಥಿಯಲ್ಲಿ ಮಾಧ್ಯಮದ ಸ್ಥಿತಿಗತಿ ಕುರಿತು  ಉಪನ್ಯಾಸ ನೀಡಿದರು. ಅಚ್ಯುತ ಸಂಕೇತಿ ಪ್ರಾರ್ಥಿಸಿದರು. ವಿಕಾಸದ ಹನುಮೇಶ್ ಯಾವಗಲ್ ಪ್ರಾಸ್ತಾವಿಕವಾಗಿ ಮಾತನಾಡುತ್ತ ಮುದ್ರಣ- ವಿದ್ಯುನ್ಮಾನ  ಮಾಧ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಹಾಗೂ ನಿರ್ವಹಿಸುತ್ತಿರುವ ಸಮಾನ ಮನಸ್ಕ ಸ್ನೇಹಿತರುಗಳು ಸೇರಿ"ವಿಕಾಸ" ದಿನೇ ದಿನೇ ವಿಕಸಿತಗೊಳ್ಳುತ್ತಿದೆ ಎಂದರು.


ಪರಿಸರ ಜಾಗೃತಿ ಮೂಡಿಸಲು ಸಂಪೂರ್ಣ ಸೇವಾ ಫೌಂಡೇಶನ್ ವತಿಯಿಂದ ಕಾರ್ಯಕ್ರಮಕ್ಕೆ ಬಂದವರಿಗೆಲ್ಲಾ ಎಲ್ಲರಿಗೂ 'ಸಸಿ' ನೀಡಲಾಯಿತು. ವಿಎಚ್‍ಪಿ ಹಿರಿಯ ನಾಯಕಿ ಡಾ. ವಿಜಯ ಲಕ್ಷ್ಮೀ ದೇಶಮಾನೆ, ಉದ್ಯಮಿ ರಂಗನಾಥ ಪ್ರಸಾದ್, ಲಕ್ಷ್ಮೀಕಾಂತ ಜೋಷಿ, ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ, ಕೆ.ಎಚ್. ಸಾವಿತ್ರಿ ಮೊದಲಾದವರು ಉಪಸ್ಥಿತರಿದ್ದರು, ಸದಸ್ಯರಿಗೆ ಐಡಿ ಕಾರ್ಡ್‌  ವಿತರಿಸಲಾಯಿತು. ಡಾ.ಚೇತನಾ ಹಾಗೂ ಪ್ರಸನ್ನ ಬಾಳಿಗಾ ರವರು ವಿದ್ಯಾರ್ಥಿ ವೇತನ ವಿತರಿಸಿದರು.


0 تعليقات

إرسال تعليق

Post a Comment (0)

أحدث أقدم