|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೇಚರ್ ಕ್ಲಬ್‌ನಿಂದ ಪಕ್ಷಿ, ಸಸ್ಯ ವೀಕ್ಷಣೆ ಕಾರ್ಯಕ್ರಮ

ನೇಚರ್ ಕ್ಲಬ್‌ನಿಂದ ಪಕ್ಷಿ, ಸಸ್ಯ ವೀಕ್ಷಣೆ ಕಾರ್ಯಕ್ರಮ



ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ವಿಭಾಗಗಳ ಸಹಯೋಗದೊಂದಿಗೆ ನೇಚರ್ ಕ್ಲಬ್ ಪಕ್ಷಿ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಈ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಹಾಸ್ ಕೃಷ್ಣ, ನೇಚರ್ ಕ್ಲಬ್ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆಯ ಮಾರ್ಗದರ್ಶನ ಮಾಡಿ, ಪರಿಸರ ವ್ಯವಸ್ಥೆಯಲ್ಲಿ ಈ ಜೀವಿಗಳ ಸ್ಥಾನ, ಪಾತ್ರಗಳ ಕುರಿತು ಅರಿವು ಮೂಡಿಸಿದರು.


ಇದರೊಂದಿಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ವಿವಿಧ ರೀತಿಯ ಪಕ್ಷಿಗಳ ಗೂಡುಗಳು, ಅವುಗಳ ಅಗತ್ಯ, ಸಸ್ಯಗಳ ಮೇಲಿನ ಅವುಗಳ ಅವಲಂಬನೆ, ಪಕ್ಷಿಗಳ ವಲಸೆ ಹೋಗುವ ಸ್ವಭಾವದ ಕುರಿತಾಗಿ ವಿವರಿಸಿದರು.


ಬೆಳಗಿನ ಜಾವದಲ್ಲಿ ಆರಂಭವಾಗಿದ್ದ ಈ ಕ್ಷೇತ್ರ ಅವಲೋಕನೆಯ ಕಾರ್ಯಾಗಾರದಲ್ಲಿ ಸುಮಾರು 45 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೂವತ್ತೊಂದು ಹಕ್ಕಿಗಳ ಜೊತೆಗೆ ನಾಲ್ಕು ಕೀಟಗಳು ಮತ್ತು ಐದು ಜೇಡಗಳ ಪ್ರಭೇದಗಳನ್ನು ಗುರುತಿಸಲಾಯಿತು. ವಿಭಾಗದ ಇತರ ಪ್ರಾಧ್ಯಾಪಕರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  


ಸಸ್ಯ ವೀಕ್ಷಣೆ ಕಾರ್ಯಾಗಾರ

ವಿವೇಕಾನಂದ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ನೇಚರ್ ಕ್ಲಬ್‍ನ ಸದಸ್ಯರಿಗಾಗಿ ಸಸ್ಯಪ್ರಭೇದಗಳನ್ನು ಗುರುತಿಸುವ ಚಟುವಟಿಕೆಯನ್ನು ಹಮ್ಮಿಕೊಂಡಿತ್ತು. ಅಂತಿಮ ವರ್ಷದ ಸಸ್ಯಶಾಸ್ತ್ರ ವಿದ್ಯಾರ್ಥಿಗಳೂ ಭಾಗವಹಿಸಿದ್ದ ಕಾರ್ಯಾಗಾರದಲ್ಲಿ ಶ್ರೀಕೃಷ್ಣಗಣರಾಜ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಸಸ್ಯಗಳನ್ನು ಗುರುತಿಸುವಾಗ ಯಾವ ಅಂಶಗಳಿಗೆ ಗಮನ ನೀಡಬೇಕೆನ್ನುವುದನ್ನು ತೋರಿಸುತ್ತಾ, ಹಲವು ಪ್ರಭೇದಗಳನ್ನು ಗುರುತಿಸುವುದಕ್ಕೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು. ಬಾಹ್ಯಲಕ್ಷಣಗಳ ಆಧಾರದಲ್ಲಿ ಗುರುತಿಸುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದ ಅವರು ಉನ್ನತವ್ಯಾಸಂಗದಲ್ಲಿ ಈ ಕ್ಷೇತ್ರವನ್ನು ಆರಿಸುವ ಆಯ್ಕೆ ವಿದ್ಯಾರ್ಥಿಗಳಿಗೆ ಇದೆ ಎನ್ನುವ ಮಾತನ್ನು ಹೇಳಿದರು. ಈ ಕಾಲೇಜಿನ ಆವರಣದ ಒಳಗೆ 131 ಸಸ್ಯಪ್ರಭೇದಗಳನ್ನು ಗುರುತಿಸಲಾಯಿತು. ಕಾರ್ಯಾಗಾರದಲ್ಲಿ 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post