ಅಕ್ಷತಾರಾಜ್ ಪೆರ್ಲ ಅವರ 'ಬೇಲಿ ಹಾಗೂ ಸಾಪೊದ ಕಣ್ಣ್' ನಾಟಕ ಕೃತಿ ನಾಳೆ (ಸೆ.30) ಬಿಡುಗಡೆ

Upayuktha
0

ಮಂಗಳೂರು: ಲೇಖಕಿ ಅಕ್ಷತಾರಾಜ್ ಪೆರ್ಲ ಅವರು ರಚಿಸಿದ "ಬೇಲಿ ಹಾಗೂ ಸಾಪೊದ ಕಣ್ಣ್" ನಾಟಕ ಕೃತಿ ಬಿಡುಗಡೆ ಸೆ.30ರಂದು ಮಧ್ಯಾಹ್ನ 1.30 ಗಂಟೆಗೆ ಮಂಗಳೂರು ವಿ.ವಿ.ಯ ಡಾ. ಶಿವರಾಮ‌ ಕಾರಂತ ಸಭಾ ಭವನದಲ್ಲಿ ಜರಗಲಿದೆ.


ಧರ್ಮಸ್ಥಳ ಶ್ರೀರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪುರಸ್ಕೃತ ಕೃತಿಯನ್ನು ಮಂಗಳೂರು ವಿ.ವಿ.ಯ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಬಿಡುಗಡೆಗೊಳಿಸುವರು. ವಕೀಲರು ಹಾಗೂ ರಂಗನಿರ್ದೇಶಕರಾಗಿರುವ ಶಶಿರಾಜ್ ಕಾವೂರು ಕೃತಿ ಪರಿಚಯ ಮಾಡಲಿದ್ದು ವಿ.ವಿ.ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ ಸಭೆಯ ಅಧ್ಯಕ್ಷತೆ ವಹಿಸುವರು.


ಎಂ.ಆರ್.ಪಿ.ಎಲ್ ಪ್ರಶಿಕ್ಷಣ ವಿಭಾಗದ ಉಪಮಹಾಪ್ರಬಂಧಕರಾದ ವೀಣಾ.ಟಿ.ಶೆಟ್ಟಿ, ಮಂಗಳೂರು ವಿ.ವಿ ಯ ಬ್ರಹ್ಮಶ್ರೀ ನಾರಾಯಣಗುರು ಪೀಠದ ಸಂಯೋಜಕರಾದ ಡಾ.ಗಣೇಶ್ ಅಮೀನ್ ಸಂಕಮಾರ್ ಮತ್ತು ರಾಮಕೃಷ್ಣ ಮಿಷನ್ ನ ಸ್ವಚ್ಛ ಮನಸ್ ರೂವಾರಿ ರಂಜನ್ ಬೆಳ್ಳರ್ಪಾಡಿ ಮುಂತಾದ ಗಣ್ಯರು ಉಪಸ್ಥಿತರಿರುವರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top