"ಬಾಕಾಶಾ ಹೋಟೆಲುಗಳಲ್ಲೂ ಕಾಣಿಸಿಕೊಳ್ಳಲಿ" - ಗಣೇಶ್ ಕಾಕಲ್
"ನಾವು ಬಾಳೆಕಾಯಿಯ ಪಲ್ಯ ಮಾಡುವುದಿದೆ- ಊಟದ ಜತೆ ಸೇರಿಸಲು. ಈ ಶಾವಿಗೆ ನಮಗೆ ತೀರಾ ಹೊಸತು. ಮೊದಲ ಸಲವೇ ಚೆನ್ನಾಗಿ ಆಯಿತು. ರುಚಿಯೂ ಚೆನ್ನಾಗಿಯೇ ಇದೆ."
ಹೀಗೆಂದವರು ಶಿವಮೊಗ್ಗ ಜಿಲ್ಲೆಯ ಸಾಗರದ ಕೃಷಿಕ- ಉದ್ಯಮಿ ಗಣೇಶ್ ಕಾಕಲ್. "ಬಾಕಾಶಾ, ಬಾಳೆಕಾಯಿ ಶಾವಿಗೆಯ ಮೂಲಭೂತ ರುಚಿಯೇ ಚೆನ್ನಾಗಿದೆ. ಆಮೇಲೆ ಅವರವರ ಇಷ್ಟದ ಅನುಸಾರ ಒಗ್ಗರಣೆ ಹಾಕುವಾಗ ಬೇಕಾದ ಸೇರ್ಪಡೆ ಮಾಡಿಕೊಳ್ಳಬಹುದು ನೋಡಿ", ಅವರು ವಿವರಿಸುತ್ತಾರೆ.
"ನಮ್ಮದೇ ಬೆಳೆಯ ಈ ತಿಂಡಿ ಹೋಟೆಲುಗಳಲ್ಲೂ ಕಾಣಿಸಿಕೊಳ್ಳಲಿ. ಅಲ್ಲೂ ಇದಕ್ಕೊಂದು ಸ್ಥಾನ ಖಂಡಿತ ಇದೆ. ಬೆಂಗಳೂರಿನಲ್ಲಿ ಮಲೆನಾಡಿನ ವಿಶಿಷ್ಟ ರುಚಿಯ ಸಾಂಪ್ರದಾಯಿಕ ತಿಂಡಿ ಮಾಡುವ ನೂರಾರು ಹೋಟೆಲುಗಳಿವೆ. ಅವರು ಈ ಪ್ರಯೋಗವನ್ನು ಕೈಗೆತ್ತಿಕೊಳ್ಳಲಿ" ಎನ್ನುತ್ತಾರೆ ಗಣೇಶ್ ಕಾಕಲ್.
- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ