ಒಂದು ಪ್ರೀತಿಯ ಕತೆ

Upayuktha
0


ಡಾಕ್ಟರನ್ನು ಕರೆಯುವುದು ಬೇಡವೇ ಬೇಡ ಎಂದವಳು ಹೇಳಿದಳು. ಅವನ ಕೈಯ್ಯನ್ನು ಗಟ್ಟಿ ಆಗಿ ಹಿಡಿದು ಕಣ್ಣು ಮುಚ್ಚಲು ಹೇಳಿದಳು.  


ನಮ್ಮಿಬ್ಬರ ಮೊದಲ ಭೇಟಿ, ಮೊದಲ ಪ್ರೊಪೋಸಲ್, ಮೊದಲ ಸ್ಪರ್ಶ, ಮೊದಲ ಅಪ್ಪುಗೆ, ಮೊದಲ ಮುತ್ತು... ಹೀಗೆ ನೆನಪು ಮಾಡಿಸುತ್ತಾ ಹೋದಳು. ಹೆರಿಗೆ ವಾರ್ಡಿನಲ್ಲಿ ಅಸಾಧ್ಯ ನೋವು ಪಡುತ್ತಾ, ರಕ್ತದಲ್ಲಿ ಮುಳುಗಿ ಹೋಗಿದ್ದ ಪುಟ್ಟ ಮಗುವನ್ನು ಕೈ ಎತ್ತಿ ನಿನಗೆ ನೀಡಿದ ದೃಶ್ಯವನ್ನು ನೆನಪು ಮಾಡು ಎಂದಳು. ಅವನು ಕಣ್ಣು ಮುಚ್ಚಿ ಕೂತಿದ್ದ. 


ನಾನು ನಿನಗೆ ಒಳ್ಳೆಯ ಪತ್ನಿ ಆಗಲು, ಅದಕ್ಕಿಂತ ಹೆಚ್ಚಾಗಿ ಒಳ್ಳೆಯ ಗೆಳತಿ ಆಗಲು ಪ್ರಯತ್ನ ಪಟ್ಟಿದ್ದೇನೆ. ನನಗೆ ಎಷ್ಟು ಮಾರ್ಕ್ಸ್ ಕೊಡ್ತೀ ಹೇಳು? ಎಂದು ಅವಳು ಕಣ್ಣು  ಮಿಟುಕಿಸಿ ತುಂಟತನದಲ್ಲಿ ಕೇಳಿದಾಗ ಅವನ ಕಣ್ಣಲ್ಲಿ ನೀರು!  


ನೀನು ನನ್ನನ್ನು ಮೊದಲ ಬಾರಿಗೆ ಕೈ ಹಿಡಿದು ಚರ್ಚಿಗೆ ಕರೆದುಕೊಂಡು ಹೋದಾಗ ನಗುತ್ತಾ ಕರೆದುಕೊಂಡು ಹೋಗಿದ್ದೆ ಅಲ್ವಾ? ಮತ್ತೆ ಈಗ್ಯಾಕೆ ಅಳುವುದು ಎಂದು ಅವನ ಕಣ್ಣೀರು ಒರೆಸಿದಳು. ನಾನು ನಿನ್ನನ್ನು ಮದುವೆ ಆಗುವ ಮೊದಲು ಹಲವರನ್ನು ಪ್ರೀತಿ ಮಾಡಿದ್ದೆ. ಆದರೆ ಮದುವೆ ಆದ ನಂತರ ನಿನಗೆ ನಿಷ್ಠಳು ಆಗಿದ್ದೆ. ಒಂದು ಕ್ಷಣವೂ ನಿನ್ನ ಪ್ರೀತಿಗೆ ದ್ರೋಹ ಮಾಡಿಲ್ಲ ಅಂದಳು. ಅವನು ಹೌದು ಅಂದ. 


ನಿನ್ನ ಹೃದಯದಲ್ಲಿ ಬೆಚ್ಚಗೆ ನನಗೆ ಸ್ಥಾನವನ್ನು ಕೊಟ್ಟದ್ದಕ್ಕೆ ಥ್ಯಾಂಕ್ಸ್ ಅಂದಳು. ಅವನು ಮೌನವಾಗಿ ಅವಳ ಕೈಯ್ಯನ್ನು ಒತ್ತಿದ. ಅಳುತ್ತಾ ನನ್ನನ್ನು ನೀನು ಕಳುಹಿಸುವುದು ಬೇಡ. ನನಗೆ ನೋವಾಗ್ತದೆ ಅಂದಳು! ಅವನು ಹಾಂ ಅಂದ. 


ಗಟ್ಟಿಯಾಗಿ ಎಷ್ಟೋ ಹೊತ್ತು ಹಾಗೆಯೇ ಕಣ್ಣು ಮುಚ್ಚಿ ಅವರು ಪ್ರೀತಿಯನ್ನು ಫೀಲ್ ಮಾಡುತ್ತ ಕೂತಿದ್ದರು ಸ್ವರ್ಗದ ಬಾಗಿಲು ತೆರೆಯುವವರೆಗೆ! ಅವರಿಬ್ಬರ ತುಟಿಗಳಲ್ಲಿ ಮಂದಹಾಸ ಹಾಗೆಯೇ ಇತ್ತು!


ಕಥೆಗೆ ಪ್ರೇರಣೆಯಾದ ಚಿತ್ರ ನೋಡಲೇಬೇಕೆಂದಿದ್ದರೆ....


-ರಾಜೇಂದ್ರ ಭಟ್ ಕೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top