|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀಕೃಷ್ಣ ವಿವೇಕ ವಲ್ಲರಿ-ಬಾಲಲೀಲೆ ದಶಕಲಾಮಾಲೆ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ

ಶ್ರೀಕೃಷ್ಣ ವಿವೇಕ ವಲ್ಲರಿ-ಬಾಲಲೀಲೆ ದಶಕಲಾಮಾಲೆ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ ವಿನೂತನ ಪ್ರಯತ್ನ




ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತು ಉಪನ್ಯಾಸಕರ ಸಹಕಾರದಿಂದ ಸಾಂಸ್ಕೃತಿಕ ವೈವಿಧ್ಯ- ಶ್ರೀಕೃಷ್ಣ ವಿವೇಕ ವಲ್ಲರಿ ಎಂಬ ಕಾರ್ಯಕ್ರಮವು ಯುಟ್ಯೂಬ್‌ನಲ್ಲಿ ಬಿತ್ತರಗೊಳ್ಳಲಿದೆ. ಈ ಕಾರ್ಯಕ್ರಮವು ಆಗಸ್ಟ್ 30 ರಂದು ಸಂಜೆ ಐದು ಗಂಟೆಗೆ ಪ್ರಸಾರವಾಗಲಿದೆ. ಇದು ಶ್ರೀಕೃಷ್ಣನ ಬಾಲಲೀಲೆಯನ್ನು ಮತ್ತು ದಶಕಲಾಮಾಲೆಯನ್ನು ನಿರೂಪಿಸುವ ಕಲಾತ್ಮಕ ಮತ್ತು ಸೃಜನಶೀಲ ಪ್ರಸ್ತುತಿಯಾಗಿದೆ. ಯಕ್ಷಗಾನ, ಹರಿಕಥೆ, ಶ್ಲೋಕಪಠಣ, ಕೊಳಲು ವಾದನ, ಭಜನೆ, ಚಿತ್ರಕಲೆ, ಕೀಬೋರ್ಡ್, ಭರತನಾಟ್ಯ, ಸಂಗೀತ, ಶೃಂಗವಾದನ ಹೀಗೆ ಒಟ್ಟು ಹತ್ತು ಕಲಾಪ್ರಕಾರಗಳ ಮೂಲಕ ಶ್ರೀಕೃಷ್ಣನ ಬಾಲಲೀಲೆಯನ್ನು  ಪ್ರಸ್ತುತಪಡಿಸಲಾಗಿದೆ. Upayuktha


ಭಜನೆಯಲ್ಲಿ ವಿದ್ಯಾರ್ಥಿಗಳಾದ ಮೋಕ್ಷಾ, ಅನನ್ಯಾ, ಅಕ್ಷಯ ಶಂಕರಿ ಬಿ, ಗೌರವ್ ಜಿ ಕೆ ಹಾಗೂ ಚರಣ್ ಪಿ, ಹರಿಕಥೆಯಲ್ಲಿ ಸನ್ಮಯಾ ಐ ಕೆ, ಶೃಂಗದಲ್ಲಿ ಅನ್ವಿತಾ ವಿ, ಭರತನಾಟ್ಯದಲ್ಲಿ ಆಶ್ರಯಾ ಪಿ, ಸುಷ್ಮಿತಾ ಎಂ, ಭಾರ್ಗವಿ, ಮಾನವಿ ವಿ, ಪೃಥ್ವಿ ಎಂ ಆರ್ ಹಾಗೂ ಶ್ರೀಪಾದ ರಮೇಶ್ ರಾವ್, ತಬಲದಲ್ಲಿ ಕೀರ್ತನ್ ರಾಜ್ ಹಾಗೂ ವೈಶಾಖ್, ಯಕ್ಷಗಾನದಲ್ಲಿ ಹೇಮಸ್ವಾತಿ ಕುರಿಯಾಜೆ, ಅಂಬಾತನಯ ಅರ್ನಾಡಿ, ಲಕ್ಷ್ಮೀಶ ಭಟ್, ನವೀನಕೃಷ್ಣ, ಕೀಬೋರ್ಡ್ನಲ್ಲಿ ಅಂಜಲಿ ವಿ, ಶ್ಲೋಕಪಠಣದಲ್ಲಿ ದೇವಿಕಾ ಕುರಿಯಾಜೆ, ದೀಪಶ್ರೀ ಪದ್ಯಾಣ, ಧನ್ಯಶ್ರೀ ಮತ್ತು ಸಿಂಚನಾ ಟಿ, ಸಂಗೀತದಲ್ಲಿ ನೇಹಾ ಭಟ್, ಮನಸ್ವಿ ಭಟ್, ದೀಕ್ಷಾ ಶರ್ಮ ಹಾಗೂ ದೀಪ್ತಿ, ಕೊಳಲುನಲ್ಲಿ ಸಾತ್ವಿಕ್ ಪ್ರಭು , ನಿರೂಪಕಿಯಾಗಿ ಕೃತಿ ಕೆ ತಮ್ಮ ಸಹಕಾರವನ್ನು ನೀಡಿರುತ್ತಾರೆ.


ಈ ಕಾರ್ಯಕ್ರಮದ ಪರಿಕಲ್ಪನೆ ಮತ್ತು ನಿರ್ದೇಶನವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್, ಸಮನ್ವಯಕಾರರಾಗಿ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅಜಯಶಾಸ್ತ್ರೀ, ವಾಣಿಜ್ಯ ವಿಭಾಗದ ಉಪನ್ಯಾಸಕ ದೇವಿಪ್ರಸಾದ್ ಹಾಗೂ ಶ್ರೀವತ್ಸ, ಸಂಕಲನಕಾರರಾಗಿ ವಿವೇಕಾನಂದ ಪದವಿ ಕಾಲೇಜಿನ ವಿಕಸನ ಸ್ಟುಡಿಯೋದ ತಂತ್ರಜ್ಞ ಸಂತೋಷ್ ನಿರ್ವಹಿಸಿರುತ್ತಾರೆ. ಕಾರ್ಯಕ್ರಮಕ್ಕೆ ಉಪನ್ಯಾಸಕರಾದ ವಿಶ್ವನಾಥ್, ಸ್ನೇಹ, ಶ್ರುತಿ, ಭಾಗ್ಯಶ್ರೀ, ದಿವ್ಯಾ ರಾವ್ ತಮ್ಮ ಸಹಕಾರವನ್ನು ನೀಡಿರುತ್ತಾರೆ. ಇದರ ಜೊತೆಗೆ ವಿವೇಕಾನಂದ ಪದವಿ ಕಾಲೇಜಿನ ವಿಕಸನ ಸ್ಟುಡಿಯೋ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದೆ.


ನಿಗದಿಪಡಿಸಲಾದ ಸಮಯದಲ್ಲಿ http://youtu.be/DudfscF_H3g ಲಿಂಕ್ ಓಪನ್ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶವಿದೆ. ಅದೇ ರೀತಿ ಯುಟ್ಯೂಬ್‌ನಲ್ಲಿ vpuc Puttur ಎಂದು ಸರ್ಚ್ ಮಾಡಿದರೂ ಆಯ್ಕೆ ಲಭ್ಯವಿರುತ್ತದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post