ಸವಿರುಚಿ: ಬಾಕಾಹು ಬೆಲ್ಲದ ಬೂಂದಿ

Upayuktha
0


ಬೇಕಾಗುವ ಸಾಮಗ್ರಿಗಳು:

ಬೇಕಾಗುವ ಸಾಮಗ್ರಿಗಳು: ಬಾಕಾಹು (ಬಾಳೆಕಾಯಿ ಹಿಟ್ಟು)- 250 ಗ್ರಾಮ್, ಸಾವಯವ ಬೆಲ್ಲ- 250 ಗ್ರಾಮ್, ಹುರಿದ ಕೊಬ್ಬರಿ ಪುಡಿ - 2 ಕಪ್, ಹುರಿಗಡಲೆ ಪುಡಿ - 50 ಗ್ರಾಮ್, ಬಾದಾಮಿ ಪುಡಿ- 25 ಗ್ರಾಮ್, ಗೋಡಂಬಿ ಪುಡಿ- 50 ಗ್ರಾಮ್, ಒಣಶುಂಠಿ ಪುಡಿ- 5 ಗ್ರಾಮ್, 5- 6 ಲವಂಗದ ಪುಡಿ, 15 ಏಲಕ್ಕಿಯ ಪುಡಿ, ಒಂದು ಚಿಟಿಕೆ ಕೇಸರಿ ಬಾತ್ ಮಾಡುವ ಬಣ್ಣ, 150 ಮಿ.ಲೀ. ಬಿಸಿನೀರು, ಚಿಟಿಕೆ ಉಪ್ಪು, ಕರಿಯಲು ಎಣ್ಣೆ


ಮಾಡುವ ವಿಧಾನ: 

250 ಗ್ರಾಂ ಬಾಕಾಹು ಪುಡಿಗೆ ಒಂದು ಚಿಟಿಕೆ ಉಪ್ಪು ಕಾಯಿಸಿದ ಬಿಸಿನೀರಿಗೆ ಒಂದು ಚಿಟಿಕೆಯಷ್ಟು ಕೇಸರಿಬಾತ್ ಮಾಡಲು ಬಳಸುವ ಬಣ್ಣವನ್ನು ಮಿಶ್ರಣ ಮಾಡಿ ಅದನ್ನು ಚಕ್ಕಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ ತದನಂತರ ಎಣ್ಣೆಯನ್ನು ಬಿಸಿಯಾಗಲು ಹಿಡಿ ಈಗ ಚಿಕ್ಕ ಚಿಕ್ಕ ರಂಧ್ರವಿರುವ ಚಕ್ಕಲಿ ಒರಳಿನ ಬಿಲ್ಲೆಯನ್ನು (ಖಾರ ಒತ್ತುವ ಬಿಲ್ಲೆ) ಚಕ್ಕುಲಿ ಒರಳಿಗೆ ಹಾಕಿ ಕಾದ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಗರಿ ಗರಿಯಾಗಿ ಕರೆದು ಅದನ್ನು ಒಂದು ಕಡೆ ಇಟ್ಟುಕೊಳ್ಳಿ.


ಮಾಡುವ ವಿಧಾನ: ಬಾಕಾಹು ಪುಡಿಗೆ ಉಪ್ಪು, ಬಿಸಿನೀರು, ಬಣ್ಣವನ್ನು ಮಿಶ್ರ ಮಾಡಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅನಂತರ ಎಣ್ಣೆಯನ್ನು ಬಿಸಿಯಾಗಲು ಇಡಿ. ಚಕ್ಕುಲಿ ಒರಳಿಗೆ ಚಿಕ್ಕಚಿಕ್ಕ ರಂಧ್ರವಿರುವ ಬಿಲ್ಲೆ ಹಾಕಿ ಕಾದ ಎಣ್ಣೆಗೆ ಇದನ್ನು ಒತ್ತಿ. ಚೆನ್ನಾಗಿ ಗರಿ ಗರಿಯಾಗಿ ಕರಿದು ಒಂದು ಕಡೆ ಹಿಟ್ಟುಕೊಳ್ಳಿ.


ನೀರನ್ನು ಪಾತ್ರೆಗೆ ಹಾಕಿ, ಬೆಲ್ಲ ಸೇರಿಸಿ ದಾರದಂತೆ ಪಾಕ ಬರುವ ಹಾಗೆ ಕುದಿಸಿ. ಅದಕ್ಕೆ ಬಾದಾಮಿ ಪುಡಿ, ಗೋಡಂಬಿ ಪುಡಿ, ಏಲಕ್ಕಿ ಪುಡಿ, ಲವಂಗ ಪುಡಿ ಮತ್ತು ಶುಂಠಿ ಪುಡಿ ಎಲ್ಲವನ್ನೂ ಸೇರಿಸಿ. ಕರಿದಿಟ್ಟುಕೊಂಡಿರುವ ಬಾಕಾಹು ಶ್ಯಾವಿಗೆಯನ್ನು ಪುಡಿ ಮಾಡಿ ಹಾಕಿ ಅದಕ್ಕೆ ಹುರಿಗಡಲೆ ಪುಡಿ, ಕೊಬ್ಬರಿ ಪುಡಿ ಸೇರಿಸಿ ಚಿಕ್ಕಚಿಕ್ಕ ಉಂಡೆ ಮಾಡಿ.


-ರಘು ಆರ್.ಎಸ್

ಕುಲಂಬಿ, ಹೊನ್ನಾಳಿ (ತಾ)

ದಾವಣಗೆರೆ (ಜಿ)

ದೂರವಾಣಿ ಸಂಖ್ಯೆ:9535282617


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top