ಪುತ್ತೂರು: ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶಗಳು ಹೆಚ್ಚಿರುವುದರಿಂದ, ವಾಣಿಜ್ಯಶಾಸ್ತ್ರದ ಕಲಿಕೆಯ ಕಡೆಗೆ ವಿದ್ಯಾರ್ಥಿಗಳ ಒಲವು ಮೂಡುತ್ತಿದೆ. ಅದರಲ್ಲಿಯೂ ಸಿಎ, ಸಿಎಸ್, ಮತ್ತು ಸಿಎಂಎ ವೃತ್ತಿಪರ ಕೋರ್ಸುಗಳು ಪ್ರಮುಖವಾದದ್ದು. ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಕಲಿಯುತ್ತಿರುವಾಗ ಮತ್ತು ಪದವಿ ನಂತರ ಯಾವ ರೀತಿ ಈ ಮೂರು ವೃತ್ತಿಪರ ಕೋರ್ಸುಗಳಿಗೆ ವಿದ್ಯಾರ್ಥಿಗಳು ನೇರವಾಗಿ ಪ್ರವೇಶ ಪಡೆಯಬಹುದು ಹಾಗೂ ಈ ಮೂರು ವೃತ್ತಿಪರ ಕೋರ್ಸುಗಳಲ್ಲಿ ಬಿಕಾಂ ಪದವಿಯ ವಿಷಯಗಳೇ ಹೆಚ್ಚು ಇರುವುದರಿಂದ, ವಿದ್ಯಾರ್ಥಿಗಳು ಆದಷ್ಟು ಪದವಿ ಕಲಿಯುತ್ತಿರುವ ಸಮಯದಲ್ಲಿಯೇ, ಈ ಮೂರು ವೃತ್ತಿಪರ ಕೋರ್ಸುಗಳ ಮಾಹಿತಿ ಮತ್ತು ತಯಾರಿ ಮಾಡುವುದರಿಂದ ಮೊದಲ ಪ್ರಯತ್ನದಲ್ಲಿಯೇ ಪೂರ್ಣಗೊಳಿಸಬಹುದು ಎಂದು Lekh Pal Business Solutions for Start Ups ನ ಸಂಸ್ಥಾಪಕ ರಾಜ್ ಗಣೇಶ್ ಕಾಮತ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗ, ವಾಣಿಜ್ಯ ಸಂಘ ಮತ್ತು ಐಕ್ಯೂಎಸಿ ಜಂಟಿ ಸಹಯೋಗದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ "ವೃತ್ತಿಪರ ಕೋರ್ಸಿನಲ್ಲಿ ಯಶಸ್ಸಿನ ಹಾದಿ" ಎಂಬ ವಿಷಯದ ಕುರಿತು ನಡೆದ ಒಂದು ದಿನದ ವರ್ಚ್ಯುಯಲ್ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಜಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ ರವಿಕಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿದ್ದರು.
ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಅಕ್ಷತಾ ನಾಯಕ್ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸುವುದರೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ