ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‍ನಲ್ಲಿ ರಕ್ಷಾಬಂಧನ ಆಚರಣೆ

Upayuktha
0

ದೇಹ ಮತ್ತು ದೇಶದ ಬಂಧವೂ ರಕ್ಷಾಬಂಧನ ಆಚರಣೆಯಲ್ಲಿ ಅಡಗಿದೆ: ಆದರ್ಶ ಗೋಖಲೆ


ಪುತ್ತೂರು: ರಕ್ಷಾಬಂಧನ ಎಂಬುದು ಕೇವಲ ಒಂದು ದಿನದ ಆಡಂಬರಕ್ಕಾಗಿ ಇರುವಂತಹದ್ದಲ್ಲ. ಅದೊಂದು ಪವಿತ್ರ ಬಂಧ. ಒಮ್ಮೆ ರಕ್ಷೆ ಕಟ್ಟಿದರೆ ಆಜನ್ಮ ಪರ್ಯಂತ ಪರಸ್ಪರ ಅಣ್ಣ ತಂಗಿಯರಾಗಿರುತ್ತಾರೆಂಬ ಉತ್ಕøಷ್ಟ ಅರ್ಥ ರಕ್ಷೆ ಕಟ್ಟುವುದರ ಹಿಂದೆ ಅಡಗಿದೆ. ಮಾತ್ರವಲ್ಲದೆ ನಾವು ಬೇರೆ ಎಂಬ ಕಲ್ಪನೆಯಿಂದ ನಾವೆಲ್ಲಾ ಒಂದೇ ಎಂಬ ಹಿರಿದಾದ ಅರ್ಥವನ್ನು ರಕ್ಷಾಬಂಧನ ಹೊಮ್ಮಿಸುತ್ತದೆ ಎಂದು ಕಾರ್ಕಳದ ವಾಗ್ಮಿ ಆದರ್ಶ ಗೋಖಲೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಬಪ್ಪಳಿಗೆಯ ಕ್ಯಾಂಪಸ್‍ನಲ್ಲಿ ಬುಧವಾರ ಆಯೋಜಿಸಲಾದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ರಕ್ಷಾಬಂಧನ ಕೇವಲ ಅಣ್ಣ ತಂಗಿಯ ಬಾಂಧವ್ಯಕ್ಕಷ್ಟೇ ಸೀಮಿತವಲ್ಲ. ದೇಶದೊಂದಿಗೆ ನಾನಿದ್ದೇನೆ ಎಂಬ ವಿಸ್ತøತ ಅರ್ಥವನ್ನೂ ಈ ಹಬ್ಬ ತನ್ನಲ್ಲಿ ಹುದುಗಿಸಿಕೊಂಡಿದೆ. ದೇಹ ಮತ್ತು ದೇಶದ ನಡುವಣ ಬಂಧವನ್ನು ಈ ಆಚರಣೆ ಪ್ರತಿನಿಧಿಸುತ್ತದೆ. ಸಿಕ್ಕ ಸಿಕ್ಕ ವಿಮಾನಗಳಲ್ಲಿ ಯಾವ ದೇಶಕ್ಕೆ ಹೋಗುತ್ತಿದ್ದೇವೆ ಎಂಬ ಪರಿವೆಯೂ ಇಲ್ಲದೆ ತಂಗಿ, ಅಕ್ಕ, ಸಂಸಾರವನ್ನು ತೊರೆದು ಹೋಗುತ್ತಿರುವ ವಿದೇಶೀಯರು ಒಂದೆಡೆಯಾದರೆ ಕೇವಲ ಒಂದು ರಕ್ಷೆ ಕಟ್ಟಿದ ಸಂಬಂಧದಿಂದಾಗಿ, ಕಟ್ಟಿದವರಿಗಾಗಿ ಪ್ರಾಣಾರ್ಪಣೆಗೂ ಸಿದ್ಧವಾಗುವಂತಹ ಸಂಸ್ಕøತಿ ನಮ್ಮ ದೇಶದಲ್ಲಿದೆ. ಇದಕ್ಕೆ ಉದಾಹರಣೆಗಳೂ ಬೇಕಾದಷ್ಟಿವೆ ಎಂದು ನುಡಿದರು.


ನಮ್ಮ ದೇಶದೊಂದಿಗೆ ನಾವಿರುತ್ತೇವೆ ಎಂಬ ಸಂಕಲ್ಪ ರಕ್ಷಾಬಂಧನದ ನೆಲೆಯಿಂದ ರೂಪುಗೊಳ್ಳಬೇಕಿದೆ. ಭಾರತಕ್ಕೆ ಈಗ ಸಿಪಿಟಿ ಪರೀಕ್ಷೆ (ಚೈನಾ, ಪಾಕಿಸ್ಥಾನ, ತಾಲಿಬಾನ್) ಎದುರಾಗಿದೆ. ಆದರೆ ಹೊಡೆದರೆ ಹೊಡೆಸಿಕೊಳ್ಳುವ, ತುಳಿದರೆ ತುಳಿಸಿಕೊಳ್ಳುವ 1962ರ ಭಾರತ ನಮ್ಮದಲ್ಲ, ಇದು 2020ರ ಭಾರತ. ರಾತ್ರಿ ಹಗಲಾಗುವುದರೊಳಗಾಗಿ ಶತ್ರು ರಾಷ್ಟ್ರಕ್ಕೆ ಹೋಗಿ, ಹೊಡೆದು ಬರುವ ತಾಕತ್ತು ಈಗಿನ ಭಾರತಕ್ಕಿದೆ. ಆದರೆ ನಮ್ಮ ನಡುವೆಯೇ ವಿದೇಶಗಳ ಮಾತಿಗೆ ತಾಳ ಹಾಕುವವರು ಇದ್ದಾರೆ. ಇವರೇ ದೇಶಕ್ಕೆ ನಿಜವಾದ ಸವಾಲು. ಅಂತಹವರನ್ನು ಮೀರಿ ದೇಶಭಕ್ತಿಯನ್ನು ಮೆರೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ವಿದ್ವಾನ್ ಕಾಂಚನ ಈಶ್ವರ ಭಟ್ಟ ಮಾತನಾಡಿ ರಕ್ಷಾಬಂಧನ ಎಂಬುದು ರಕ್ಷೆ, ರಕ್ಷಣೆ ಹಾಗೂ ಬಂಧದ ಸಂಕೇತ. ನಮ್ಮ ನಮ್ಮ ಸೋದರ- ಸೋದರಿಯರೊಂದಿಗೆ, ಸಮಾಜದಲ್ಲಿರುವವರನ್ನೂ ಅದೇ ಭಾವದಿಂದ ಆದರಿಸಬೇಕು. ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಸಾಂಸ್ಕøತಿಕ ಹಿನ್ನೆಲೆ ಇರುವುದರಿಂದಲೇ ಸಾಕಷ್ಟು ಮೌಲ್ಯಗಳು ಇಲ್ಲಿ ನೆಲೆಯೂರಿವೆ ಎಂದರಲ್ಲದೆ ವಿದೇಶಗಳಲ್ಲಿನ ದುಃಸ್ಥಿತಿಗೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಹಾಗಾಗಿ ಭಾರತ ಮಾತೆಯನ್ನು ರಕ್ಷಿಸುವ ಜವಾಬ್ಧಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ರಕ್ಷಾಬಂಧನ ಎಂಬುದು ರಾಷ್ಟ್ರೀಯ ಹಬ್ಬ. ನಮಗಿಂದು ರಾಷ್ಟ್ರೀಯತೆಯ ಅಗತ್ಯವಿದೆ. 1992ರಲ್ಲಿ ಕಾಶ್ಮೀರಕ್ಕೆ ಹೋಗಿದ್ದಾಗ ಅಲ್ಲಿ ಪಾಕಿಸ್ಥಾನದ ಧ್ವಜಗಳು ಹಾರಾಡುವುದನ್ನು ಕಂಡು ಮನಸ್ಸಿಗೆ ತೀವ್ರವಾದ ನೋವು ಕಾಡಿತ್ತು. ಆದರೆ ಈಗ ಒಂದು ವಾರದ ಹಿಂದೆ ಹೋಗಿದ್ದಾಗ ಅಲ್ಲಿ ಭಾರತದ ರಾಷ್ಟ್ರಧ್ವಜ ಹಾರಾಡುವುದನ್ನು ಕಂಡು ಮನಸ್ಸಿಗೆ ಅತ್ಯಂತ ಹೆಚ್ಚು ಸಮಾಧಾನ ದೊರಕಿದೆ. ಇಂತಹದ್ದೊಂದು ಬದಲಾವಣೆ ರಾಷ್ಟ್ರಚಿಂತನೆ ಇದ್ದಾಗ ಮಾತ್ರ ಸಾಧ್ಯ. ನಾವು ಡಾಕ್ಟರ್, ಇಂಜಿನಿಯರ್ ಆಗುವುದರೊಂದಿಗೆ ದೇಶಭಕ್ತರೂ ಆಗಬೇಕು ಎಂದು ನುಡಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ, ಬಪ್ಪಳಿಗೆ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲ ರಾಮಚಂದ್ರ ಭಟ್, ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಕ್ಯಾಂಪಸ್ ನಿದೇಶಕ ಭಾಸ್ಕರ ಶೆಟ್ಟಿ, ಬೋಧಕ ಮತ್ತು ಬೋಧಕೇತರ ವೃಂದ, ಸೀಮಿತ ಸಂಖ್ಯೆಯ ಹೆತ್ತವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.  


ದ್ವಿತೀಯ ಪಿಯು ವಿದ್ಯಾರ್ಥಿನಿ ಪ್ರೀತಲ್ ದಯಾನಂದ ಪ್ರಾರ್ಥಿಸಿದರು. ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್ ಸ್ವಾಗತಿಸಿದರು. ಉಪನ್ಯಾಸಕಿ ವಿನುತಾ ವಂದಿಸಿ, ಉಪನ್ಯಾಸಕಿ ಜಯಂತಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಕ್ಷೆಗಳನ್ನು ಕಟ್ಟಿ ಹಬ್ಬದ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಕನ್ನಡ ಶಿಕ್ಷಕ ಸತೀಶ್ ಇರ್ದೆ ರಕ್ಷಾಬಂಧನ ಗೀತೆಯನ್ನು ಪ್ರಸ್ತುತಪಡಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top