ಗೋಕರ್ಣ: ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಜ್ಞಾನ- ವಿಜ್ಞಾನ ಚಿಂತನ ಸತ್ರ ಮಾಲಿಕೆಯ 6ನೇ ಕಾರ್ಯಕ್ರಮವನ್ನು ಸ್ವಾತಂತ್ರ್ಯ ದಿನಾಚರಣೆಯಂದು (ಆ.15) ಹಮ್ಮಿಕೊಳ್ಳಲಾಗಿದೆ.
ಕಾನ್ಪುರ ಐಐಟಿಯಲ್ಲಿ ಎಂಟೆಕ್ ಪದವಿ ಪಡೆದು ಅಮೆರಿಕದ ಉತಹ್ ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ವಿಶ್ವದ ಖ್ಯಾತ ಸಾಫ್ಟ್‍ವೇರ್ ಎಂಜಿನಿಯರ್, ಪುಣೆ ಎಂಐಟಿ ಸ್ಕೂಲ್ ಆಫ್ ವೇದಿಕ್ ಸೈನ್ಸಸ್‍ನ ಡೀನ್ ಡಾ.ಸಾಯಿ ರಾಮಕೃಷ್ಣ ಸುಸಾರ್ಲಾ ಅವರು "ವಿಜ್ಞಾನ ಮತ್ತು ಶಾಸ್ತ್ರ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸುವರು. ಆಗಸ್ಟ್ 15ರಂದು ಬೆಳಿಗ್ಗೆ 11.45ರಿಂದ ಝೂಮ್ ಮೀಟಿಂಗ್‍ನಲ್ಲಿ ಈ ಆನ್‍ಲೈನ್ ವಿಚಾರಸಂಕಿರಣ ನಡೆಯಲಿದೆ ಎಂದು ವಿದ್ಯಾ ಪರಿಷತ್ ಉಪಾಧ್ಯಕ್ಷ ಮರುವಳ ನಾರಾಯಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸ್ವತಃ ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದು, ಸಂಸ್ಕೃತ ಮತ್ತು ಶಾಸ್ತ್ರಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ, ಶಾಸ್ತ್ರದಲ್ಲಿರುವ ಸತ್ಯಗಳನ್ನು ಆಧುನಿಕ ಜಗತ್ತಿಗೆ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಸುಸಾರ್ಲ ಮಾತನಾಡುವರು. ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಕಾರ್ಯದರ್ಶಿ ನೀಲಕಂಠ ಯಾಜಿ, ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ ಮತ್ತಿತರರು ಪಾಲ್ಗೊಳ್ಳುವರು.
ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ. ಝೂಮ್ ಮೀಟಿಂಗ್ ಐಡಿ: 91232939532. ಪಾಸ್‍ಕೋಡ್: 179719
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ