ಶಿರಸಿಯಲ್ಲಿ ಇತ್ತೀಚೆಗೆ ನಡೆದ ಬಾಕಾಹು (ಬಾಳೆಕಾಯಿ ಹುಡಿ) ಖಾದ್ಯ ವೈವಿಧ್ಯ ಪ್ರದರ್ಶನದಲ್ಲಿ ದಾವಣಗೆರೆಯ ಸ್ಪೆಷಲ್ ತಿನಿಸುಗಳು. ಸ್ವಂತ ಉದ್ಯಮ ನಡೆಸಿ ಏನಾದರೂ ಸಾಧನೆ ಮಾಡಬೇಕೆಂದುಕೊಂಡಿರುವ ಯುವ ಸಾಹಸಿ ರಘು ಆರ್.ಎಸ್ ಕುಲಂಬಿ ಅವರು ಈ ಖಾದ್ಯಗಳನ್ನು ತಯಾರಿಸಿ ಪ್ರದರ್ಶನಕ್ಕೆ ತಂದಿದ್ದರು.
ಬಾಳೆಕಾಯಿ ಹುಡಿಯ ಜತೆಗೆ ಬಾದಾಮಿ, ಏಲಕ್ಕಿ, ಗೋಡಂಬಿ, ಒಣ ಶುಂಠಿ ಪುಡಿ, ಬಾರ್ಲಿ, ಅಗಸೆ ಬೀಜದ ಪುಡಿಗಳನ್ನು ಸೇರಿಸಿ ಹೆಲ್ತ್ ಡ್ರಿಂಕ್ ಮಿಕ್ಸ್‌ಗಳನ್ನು ತಯಾರಿಸುತ್ತಿದ್ದಾರೆ.
ಮೈಸೂರಿನಲ್ಲಿ ಸಿಎಫ್‌ಟಿಆರ್‌ಐ ನವರು ಇತ್ತೀಚೆಗೆ ಏರ್ಪಡಿಸಿದ್ದ ಮೂರು ದಿನಗಳ 'ಪಿಎಂ ಎಫ್‌ಎಂಇ' ಯೋಜನೆಯಡಿ ರೈತರಿಗೆ ಆಹಾರ ಸಂಸ್ಕರಣಾ ತರಬೇತಿ ಕಾರ್ಯಕ್ರಮದಲ್ಲಿ ರಘು ಅವರು ಭಾಗವಹಿಸಿದ್ದರು.
ದಾವಣಗೆರೆಯ ಕೃಷಿ ಇಲಾಖೆಯ ಅಧಿಕಾರಿಗಳು ತಮಗೆ ವಿಶೇಷ ಸಹಕಾರ, ಮಾರ್ಗದರ್ಶನಗಳನ್ನು ನೀಡಿರುವುದನ್ನು ರಘು ನೆನಪಿಸಿಕೊಳ್ಳುತ್ತಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ