ಪುಣ್ಯಕೋಟಿ ಹಸುವಿಗೆ ಸ್ಪಷ್ಟವಾಗಿ ಗೊತ್ತಿತ್ತು- ತನ್ನ ಕರುವಿಗೆ ಹಾಲುಕೊಟ್ಟು ಹುಲಿಯ ಬಾಯಿಗೆ ಆಹಾರವಾಗಲು ಹೋಗಲೇಬೇಕು ಎಂದು. ಆದರೆ ಆ ಕರು ತಾಯಿಯನ್ನು ಬಹುವಾಗಿ ಹಚ್ಚಿಕೊಂಡು ಬಿಟ್ಟಿತ್ತು/ ತಾಯಿಗೆ ಗೊತ್ತಿತ್ತು- ಹೀಗೆ ಕ್ಲೋಸ್ ಇದ್ದರೆ ನಾಳೆ ತನ್ನ ಮರಿಗೆ ಕಷ್ಟವಾಗಬಹುದು ಎಂದು ಕರುವನ್ನು ಅವಾಯ್ಡ್ ಮಾಡುತಿತ್ತು, ಆಗಾಗ ಬೇಕೆಂದೇ ಒದೆಯುತಿತ್ತು, ಬೈಯ್ಯುತಿತ್ತು. ಕರುವಿಗೂ ತಾಯಿಯ ಮೇಲೆ ಸಿಟ್ಟಿತ್ತು. ಇದೆಂತಹ ತಾಯಿ ತನ್ನ ಮರಿಗೆ ಒದೆಯುವವಳು ಛೀ ಎಂದು ತಾಯಿಯಲ್ಲಿ ಛೂ ಬಿಟ್ಟಿತ್ತು. ತಾಯಿಗೂ ಇದೆ ಬೇಕಿತ್ತು. ತನ್ನ ಮರಿಯ ಒಳಿತಿಗಾಗಿ ಎಲ್ಲ ನೋವು ಸಹಿಸಿ ಕೊಂಡಿದ್ದಳು. ಆದರೆ ಆ ಕರುವಿಗೆ ಮಾತ್ರ ತಾಯಿಯ ಉದ್ದೇಶ ಅರ್ಥವಾಗಿರಲೇ ಇಲ್ಲ.
ಇನ್ನು ಈ ಕತೆ ಇಲ್ಲಿಗೆ ಮುಗಿಸೋಣ. ನಮ್ಮ ಸಮಾಜದಲ್ಲೂ ನಮ್ಮ ಸುತ್ತಮುತ್ತ ಇಂತಹ ಪುಣ್ಯಕೋಟಿಗಳಿರಬಹುದಲ್ಲವೇ?
ವ್ಯಕ್ತಿ ಸತ್ತಾಗ ಅವ ನನಗೆ ಹಾಗೆ ಮಾಡಿದ್ದ, ಹೀಗೆ ಮಾಡಿದ್ದ. ತಾಯಿಯಾಗಿ ಕರ್ತವ್ಯ ಮಾಡಿಲ್ಲ, ತಂದೆಯ ಕರ್ತವ್ಯ ನಿಭಾಯಿಸಲೇ ಇಲ್ಲ, ಅಜ್ಜನಾಗಿ ಹಾಗೆ ಮಾಡಿದ್ದ, ಬಂಧುವಾಗಿ ನನ್ನ ಮ್ಸನಸ್ಸು ನೋಯಿಸಿದ್ದ, ಗೆಳತಿಯೋ ಗೆಳೆಯನೋ ಆಗಿ ಅಂದು ನನ್ನ ಜೀವನ ಹಾಳು ಮಾಡಿದ್ದ, ಗಂಡ /ಹೆಂಡತಿಯಾಗಿ ಹಾಗೆ ಮಾಡಿದ- ಎಂದು ದೂರುವ ನಾವುಗಳು ಯಾಕೆ ಸ್ವಲ್ಪ ಬದಲಾಗಬಾರದು?
ಅಂದು ಆತ ಹಾಗೆ ಮಾಡಿದ್ದರಿಂದ ಇಂದು ನಾನು ಈ ಮಟ್ಟಕ್ಕೆ ಬೆಳೆದೆ ಬಹುಶಃ ಅದಕ್ಕೆ, ಆತ ಹೀಗೆ ಮಾಡಿದ್ದಿರಬಹುದೋ ಏನೋ? ಅಥವಾ ಅದೇ ದೇವರ ನಿರ್ಧಾರವೊ ಏನೋ?
ಎಂದು ಯೋಚಿಸೋಣ. ವ್ಯಕ್ತಿ ಸತ್ತಾಗ ಇದೆಲ್ಲವನ್ನು ಮರೆತು ಬಿಡೋಣ. ಯಾರಿಗೊತ್ತು ಅದೆಷ್ಟೋ ಸಲ ಪುಣ್ಯಕೋಟಿ ಹಸುವಿನ ಉದ್ದೇಶ ಕರುವಿಗೆ ಕೊನೆಯವರೆಗೂ ಅರಿವಾಗದೇ ಇರಬಹುದೇನೋ ಅಲ್ಲವೆ?
-ಡಾ.ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್, ಉಡುಪಿ
9945130630