ಪಾಕ: ರೇವತಿ ಎಸ್ ಅಡಿಗ, ದಾವಣಗೆರೆ
ಸಾಮಗ್ರಿಗಳು: ಬಾಕಾಹು 1 ಕಪ್, ಕಂಡೆನ್ಸ್ ಡ್ ಮಿಲ್ಕ್ 1 ಕಪ್, 1ಟೀ ಸ್ಪೂನ್ ಬೇಕಿಂಗ್ ಪೌಡರ್, 1/2ಟೀ ಸ್ಪೂನ್ ಬೇಕಿಂಗ್ ಸೋಡಾ, 1 ಟೇಬಲ್ ಸ್ಪೂನ್ ವೆನಿಲ್ಲಾ ಎಸೆನ್ಸ್ ಮತ್ತು 1/2 ಕಪ್ ಹಾಲು
ವಿಧಾನ: ಒಂದು ಪಾತ್ರೆಯಲ್ಲಿ ಕಂಡೆನ್ಸ್ ಡ್ ಮಿಲ್ಕ್ ಮತ್ತು ವೆನಿಲಾ ಎಸೆನ್ಸ್ ಅನ್ನು ಮಿಕ್ಸ್ ಮಾಡಿ ಅದಕ್ಕೆ ಬಾಕಾಹು ಪುಡಿ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾವನ್ನು ಹಾಕಿ ಚೆನ್ನಾಗಿ ಕಲಸಿ. ಹಾಲನ್ನು ಕೇಕ್ ಮಿಶ್ರಣಕ್ಕೆ ಬೇಕಾಗುವಷ್ಟು ಸೇರಿಸಿ. ಟೂಟಿ ಫ್ರೂಟಿ ಅಥವಾ ಡ್ರೈ ಫ್ರೂಟ್ಸ್ ಅನ್ನು ಸೇರಿಸಿ. ದಪ್ಪ ತಳದ ಪಾತ್ರೆಯಲ್ಲಿ ಅಥವಾ ಓವನ್ ನಲ್ಲಿ 20 ರಿಂದ 25 ನಿಮಿಷ ಬೇಯಿಸಿದರೆ ಕೇಕ್ ರೆಡಿ.
ಬಾಕಾಹು (ಬೇಸನ್) ಲಾಡು
ಸಾಮಗ್ರಿಗಳು: ಬಾಕಾಹು ಹಿಟ್ಟು 1 ಕಪ್, ಶುಗರ್ ಪೌಡರ್ 1 ಕಪ್, ಚಿರೋಟಿ ರವೆ 1 ಕಪ್, ತುಪ್ಪ 1ಕಪ್
ವಿಧಾನ: ಚಿರೋಟಿ ರವೆ ಬಿಸಿ ಮಾಡಿ. ತುಪ್ಪದಲ್ಲಿ ಬಾಕಾಹು ಪುಡಿಯನ್ನು ಹಾಕಿ ಪರಿಮಳ ಬರುವವರೆಗೆ ಹುರಿದು ಒಲೆಯಿಂದ ಕೆಳಗಿಳಿಸಿ. ಅದಕ್ಕೆ ಸಕ್ಕರೆ ಪುಡಿ ಮತ್ತು ಹುರಿದ ಚಿರೋಟಿ ರವೆಯನ್ನು ಹಾಕಿ ಚೆನ್ನಾಗಿ ಕಲಸಿ ಉಂಡೆ ಮಾಡಿ. ನಿಮಗೆ ಬೇಕಾದ ಡ್ರೈಫ್ರೂಟ್ ನಿಂದ ಅಲಂಕರಿಸಿ. ನೀರು ಬಳಸದ ಕಾರಣ ಇದನ್ನು ಹತ್ತರಿಂದ ಹದಿನೈದು ದಿನಗಳ ವರೆಗೆ ಏರ್ ಟೈಟ್ ಡಬ್ಬಿಗಳಲ್ಲಿ ಇಡಬಹುದು.
(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key Words: Banana Flour, Banana Powder, Bakahu, Recipe, ಬಾಕಾಹು, ಬಾಳೆ ಕಾಯಿ ಹುಡಿ, ಸವಿರುಚಿ,