ಬಾಕಾಹು ಪೀನಟ್ ಬಟರ್ ಕುಕೀಸ್

Upayuktha
0


ಪಾಕ : ಗೀತಾ ಭಟ್


ಬೇಕಾಗುವ ಸಾಮಗ್ರಿಗಳು: ಬಾಕಾಹು (ಬಾಳೆಕಾಯಿ ಹುಡಿ)- ಅರ್ಧ ಕಪ್, ನೆಲಕಡಲೆ ಹುರಿದು ಸಿಪ್ಪೆ ತೆಗೆದದ್ದು- ಅರ್ಧ ಕಪ್, ಸಕ್ಕರೆ ಹುಡಿ- ಅರ್ಧ ಕಪ್, ತುಪ್ಪ (ಕರಗಿಸಿದ್ದು)-  ಮೂರು ಟೇಬಲ್ ಚಮಚ, ಬೇಕಿಂಗ್ ಪೌಡರ್- ಕಾಲು ಚಮಚ, ಚೂರು ಮಾಡಿದ ನೆಲಕಡಲೆ ಒಂದು ದೊಡ್ಡ ಚಮಚ (ಅಲಂಕಾರಕ್ಕೆ)


ಮಾಡುವ ವಿಧಾನ: ನೆಲಕಡಲೆಯನ್ನು ಮಿಕ್ಸಿಯ ಸಣ್ಣ ಜಾರ್ ಗೆ ಹಾಕಿ ಪಲ್ಸ್ ಮಾಡಿ ಪುಡಿಯಾದ ಮೇಲೆ ಸರಿಯಾಗಿ ತಿರುಗಿಸಿ. ಅದು ಎಣ್ಣೆ ಬಿಟ್ಟು ಪೇಸ್ಟ್ ನಂತೆ ಆಗುವ ವರೆಗೆ. ಈಗ ಒಂದು ಪಾತ್ರೆಯಲ್ಲಿ ಅಲಂಕಾರಕ್ಕೆ ಇರುವ ನೆಲಕಡಲೆ ಚೂರುಗಳನ್ನು ಬಿಟ್ಟು ಉಳಿದ ಸಾಮಗ್ರಿಗಳನ್ನು ಮಿಶ್ರಗೊಳಿಸಿ. ಒಂದು ಸಣ್ಣ ನಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು ಉಂಡೆ ಮಾಡಿ ಅಂಗೈಯಲ್ಲಿ ಸ್ವಲ್ಪ ಚಪ್ಪಟೆ ಮಾಡಿ ಮೇಲ್ಭಾಗದಲ್ಲಿ ನೆಲಕಡಲೆ ಚೂರುಗಳನ್ನು ಹಾಕಿ ಅಂಟುವಷ್ಟು ಒತ್ತಿ ಬೇಕಿಂಗ್ ಟ್ರೇಯಲ್ಲಿ ಜೋಡಿಸಿ. ಓವೆನ್ ಅನ್ನು 180° ಯಲ್ಲಿ ಪ್ರಿ ಹೀಟ್‌ ಮಾಡಿ ಕುಕೀಸ್ ಅನ್ನು 12- 14 ನಿಮಿಷಗಳ ಕಾಲ ಬೇಕ್ ಮಾಡಿ.


(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


Key Words: Banana Flour, Banana Powder, Bakahu, Butter Coockies, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಬಟರ್ ಕುಕೀಸ್, ಸವಿರುಚಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top