ಹೊಸದಿಲ್ಲಿ: ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (ಐಎನ್‌ಎಸ್‌ಎ) ಮತ್ತು ವಿಜ್ಞಾನ & ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್‌ಇಆರ್‌ಬಿ) ಜಂಟಿಯಾಗಿ- 'ನಮ್ಮ ಜೀವನ ಮತ್ತು ವಿಜ್ಞಾನ: ಸಾಂಕ್ರಾಮಿಕದ ಅವಧಿಯಲ್ಲಿ ಮತ್ತು ಅನಂತರದಲ್ಲಿ' ಎಂಬ ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿವೆ.
ಕೋವಿಡ್ 19 ಸಾಂಕ್ರಾಮಿಕ ತಂದೊಡ್ಡಿದ ಸಂಕಷ್ಟಗಳಿಂದಾಗಿ ಜನಜೀವನದ ಮೇಲೆ ಬಹು ಆಯಾಮದ ದೀರ್ಘಕಾಲೀನ ಪರಿಣಾಮಗಳು ಉಂಟಾಗಿವೆ. ಪ್ರಯೋಗಾಲಯಗಳ ಸಂಶೋಧನೆಯ ಆದ್ಯತೆ ಮತ್ತು ಕಾರ್ಯಶೈಲಿಗಳನ್ನೂ ಇದು ಬದಲಾಯಿಸಿದೆ. ಸತತ ನಿಗಾವಣೆ, ಮತ್ತು ಸಂವಾದವನ್ನು ಅನಿವಾರ್ಯಗೊಳಿಸಿದೆ.
ಸಾರ್ವತ್ರಿಕ ಲಸಿಕಾ ಅಭಿಯಾನದಿಂದಾಗಿ ಚೇತರಿಕೆಯ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಆದರೂ ಸವಾಲುಗಳು ಇನ್ನೂ ಇವೆ. ಪ್ರಬಂಧದಲ್ಲಿ ಒತ್ತು ನೀಡಬೇಕಾದ ಅಂಶವೆಂದರೆ- ಪರಿಸ್ಥಿತಿಯ ವಾಸ್ತವಿಕ ಮೌಲ್ಯಮಾಪನ ಮತ್ತು ವೈರಸ್‌ನ ಹೊಸ ಹೊಸ ಅವತಾರಗಳು ಒಡ್ಡುವ ಸವಾಲುಗಳನ್ನು ಎದುರಿಸುವ ಮಾರ್ಗೋಪಾಯವನ್ನೂ ಒಳಗೊಂಡಿರಬೇಕಾಗುತ್ತದೆ.
ಪ್ರಯೋಗಾಲಯಗಳು ಮತ್ತು ಒಟ್ಟಾರೆ ಸಮಾಜ ಎದುರಿಸುವ ಸವಾಲುಗಳಿಗೆ ರಚನಾತ್ಮಕ ಪರಿಹಾರೋಪಾಯಗಳು ಬೇಕಾಗಿವೆ. ಜೀವನಶೈಲಿಯ ಬದಲಾವಣೆ, ಸಮಬಂಧಗಳು, ಮೌಲ್ಯಗಳು, ಕಾರ್ಯಶೈಲಿ ಎಲ್ಲವೂ ಸಾಂಕ್ರಾಮಿಕದ ಕಾರಣದಿಂದ ಬದಲಾಗುತ್ತಿವೆ. ಈ ವಿಷಯಗಳನ್ನು ಪ್ರಬಂಧದಲ್ಲಿ ಪ್ರಧಾನವಾಗಿ ಉಲ್ಲೇಖಿಸಬೇಕಾಗುತ್ತದೆ.
ಬರವಣಿಗೆಯ ಭಾಷೆ, ಶೈಲಿ, ವಿಷಯದ ಸ್ಪಷ್ಟತೆ- ಇತ್ಯಾದಿಗಳು ಮೌಲ್ಯಮಾಪನದಲ್ಲಿ ಪ್ರಮುಖವಾಗಿ ಪರಿಗಣನೆಗೆ ಬರುತ್ತವೆ.
ನಿಯಮಗಳು:
1. ಪ್ರಬಂಧ: ಒಬ್ಬ ಲೇಖಕ ಒಂದೇ ಪ್ರಬಂಧವನ್ನು ಕಳುಹಿಸಬೇಕು.
2. ನಾಲ್ಕು ವಿಭಾಗಗಳು:
ಅ.) ವಿಜ್ಞಾನದ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು
ಆ). ಆಡಳಿತ ನಿರ್ವಹಣೆ, ವೈದ್ಯಕೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವೀಧರರು ಮತ್ತು ಸ್ನಾತಕೋತ್ತರರು
ಇ). ಪಿಎಚ್.ಡಿ ಮತ್ತು ಅದಕ್ಕಿಂತ ಹೆಚ್ಚಿನ ಉನ್ನತ ಪದವಿ ಹೊಂದಿದವರು
ಈ). ಮೇಲಿನ ಮೂರು ವಿಭಾಗಕ್ಕೆ ಹೊರತಾದ ಎಲ್ಲರೂ- ಸಾರ್ವಜನಿಕ ವಿಭಾಗ.
3. ಪದಗಳ ಮಿತಿ: 1500ರಿಂದ 3000
4. ಕೊನೆಯ ದಿನಾಂಕ: ಆಗಸ್ಟ್ 30, 2021
5. ಪ್ರವೇಶಗಳನ್ನು ಕಳುಹಿಸುವ ವಿಳಾಸ: InsaEssay2021@gmail.com
6. ಯಾವುದೇ ಸಂದೇಹಗಳಿದ್ದಲ್ಲಿ: InsaEssayCorrespondence@gmail.com
ಬಹುಮಾನ ಗೆದ್ದ ಪ್ರಬಂಧಗಳ ಎಲ್ಲ ಹಕ್ಕುಗಳು ಐಎನ್‌ಎಸ್‌ಎ ಗೆ ಸೇರುತ್ತವೆ.
ಲೇಖನ ಸ್ವಂತದ್ದಾಗಿರಬೇಕು (ಒರಿಜಿನಲ್). ಬೇರೆಲ್ಲೂ ಪ್ರಕಟವಾಗಿರಬಾರದು. ಅಲ್ಲದೆ ಸ್ಪರ್ಧೆಯ ನಿಯಮಗಳಿಗೆ ಬದ್ಧವಾಗಿರುವುದಾಗಿ ಸ್ವಯಂ ದೃಢೀಕರಣ ಮಾಡಿರಬೇಕು.
ಹೆಚ್ಚಿನ ಮಾಹಿತಿಗಳಿಗಾಗಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಪುಟಗಳು ಮತ್ತು ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ: www.insaindia.res.in , www.serb.gov.in
ಅಂಚೆ ವಿಳಾಸ: INDIAN NATIONAL SCIENCE ACADEMY, 2, BAHADUR SHAH ZAFAR MARG, NEW DELHI-110002 011 23221931- 50 (20 lines)
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ