ಸವಿರುಚಿ: ಬಾಕಾಹು ಬರ್ಫಿ

Upayuktha
0


ಪಾಕ: ನಯನಾ ಹೆಗಡೆ ಉಮ್ಮಚಗಿ


ಶಿರಸಿಯ ಪಾಕ ಸ್ಪರ್ಧೆಯಲ್ಲಿ ದಿನಬಳಕೆಯ (!) ತಿಂಡಿ ವಿಭಾಗದಲ್ಲಿ ಎರಡನೆ ಬಹುಮಾನ ವಿಜೇತ ತಯಾರಿಯಿದು


ಬೇಕಾಗುವ ಸಾಮಗ್ರಿ: ಬಾಕಾಹು- 1 ಕಪ್, ಸಕ್ಕರೆ- ಮುಕ್ಕಾಲು ಕಪ್, ಅನಾನಸು ಹಣ್ಣಿನ ತುಂಡು- 1 ಕಪ್, ಏಲಕ್ಕಿ ಪುಡಿ- ಚಿಟಿಕೆ, ತುಪ್ಪ. 1/2 ಕಪ್, ಗೋಡಂಬಿ, ಬಾದಾಮಿ  -ಸ್ವಲ್ಪ, ಕಾರ್ನ್ ಪ್ಲೋರ್ (ಬೇಕಾದರೆ ಮಾತ್ರ)- 2- 3 ಚಮಚ.


ಮಾಡುವ ವಿಧಾನ: ಒಂದು ದಪ್ಪ ತಳದ ಪಾತ್ರೆಗೆ ಸಕ್ಕರೆ ಹಾಕಿ ಕರಗಿಸಿ, ಬಾಕಾಹು ಸೇರಿಸಿ. ರುಬ್ಬಿ ತಯಾರಿಸಿದ ಅನಾನಸು ರಸವನ್ನು ಸೋಸಿ ಇದಕ್ಕೆ ಮಿಶ್ರಮಾಡಿ. ಅದನ್ನು ಸಕ್ಕರೆ ಮಿಶ್ರಣಕ್ಕೆ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಕೈ ಬಿಡದೆ ತಿರುಗಿಸಿ. ಸ್ವಲ್ಪ ದಪ್ಪವಾದ ನಂತರ ತುಪ್ಪ ಹಾಕುತ್ತಾ ಚೆನ್ನಾಗಿ ತೊಳಸಿ. ತಳ ಬಿಟ್ಟ ನಂತರ ತುಪ್ಪ ಸವರಿದ ತಟ್ಟೆಗೆ ಗೋಡಂಬಿ, ಬಾದಾಮಿ ಚೂರುಗಳನ್ನು ಹರಡಿ ,ಅದರ ಬೆಂದು ತಯಾರಾದ ಬರ್ಫಿ ಹರಡಿ ತಣ್ಣಗಾದ ನಂತರ ಕತ್ತರಿಸಿ..


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top