ಸವಿರುಚಿ: ಬಾಕಾಹು ಕೊಕೊ ಚಾಕಲೇಟ್

Upayuktha
0



ಬಾಕಾಹು ಕೊಕೊ ಚಾಕಲೇಟ್

ಪಾಕ: ಪ್ರಶಾಂತಿ ಶಾಸ್ತ್ರಿ C.N


ಬೇಕಾದ ಸಾಮಗ್ರಿ: ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು) -200 gms, ಹುರಿದ ಕೊಕೊ ಬೀಜ- 30 gms, ತುಪ್ಪ- 100 ml, ಸಕ್ಕರೆ- 400 gms, ಹಾಲು- 200 ml


ಮಾಡುವ ವಿಧಾನ: ಹುರಿದ ಕೊಕೊ ಬೀಜಗಳ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಬಾಕಾಹು, ಹಾಲು, ಸಕ್ಕರೆ ಮತ್ತು ಕೊಕೊ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕಾಯಿಸಿ.


ಮಿಶ್ರಣ ಗಟ್ಟಿಯಾಗಲು ಪ್ರಾರಂಭವಾದಾಗ ಸ್ವಲ್ಪ ಸ್ವಲ್ಪವಾಗಿ ತುಪ್ಪ ಸೇರಿಸಿ ಕಾಯಿಸುವುದನ್ನು ಮುಂದುವರಿಸಿ.


ಮಿಶ್ರಣ ತಳ ಬಿಡಲು ಪ್ರಾರಂಭಿಸಿದ ನಂತರ ಉರಿ ಆರಿಸಿ ಬಿಸಿ ಆರಲು ಬಿಡಿ. ಬಿಸಿ ಆರಿದ ನಂತರ ಸಣ್ಣ ಸಣ್ಣ ಉಂಡೆ ಮಾಡಿ.


ಬಾಯಿ ನೀರೂರಿಸುವ ಚಾಕೊಲೇಟ್ ಸವಿಯಲು ರೆಡಿ.


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top