|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೂರ್ಣ ಪ್ರಮಾಣದ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮತ್ತೆ ಆರ್‌ಟಿ-ಪಿಸಿಆರ್‌ ವರದಿ ಅಗತ್ಯವಿಲ್ಲ: ಕೇಂದ್ರ ಪುನರುಚ್ಚಾರ

ಪೂರ್ಣ ಪ್ರಮಾಣದ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮತ್ತೆ ಆರ್‌ಟಿ-ಪಿಸಿಆರ್‌ ವರದಿ ಅಗತ್ಯವಿಲ್ಲ: ಕೇಂದ್ರ ಪುನರುಚ್ಚಾರ



ಹೊಸದಿಲ್ಲಿ: ಕೋವಿಡ್ ಲಸಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ (ಎರಡೂ ಡೋಸ್‌ಗಳನ್ನು) ಪಡೆದುಕೊಂಡವರಿಗೆ ಅಂತಾರಾಜ್ಯ ಪ್ರಯಾಣದ ವೇಳೆ ಆರ್‌ಟಿ-ಪಿಸಿಆರ್‌ ವರದಿಯನ್ನು ಕಡ್ಡಾಯಗೊಳಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.


ಹಲವು ರಾಜ್ಯಗಳು ಮತ್ತು ಜಿಲ್ಲಾಡಳಿತಗಳು ಇಂತಹ ನಿರ್ಬಂಧಗಳನ್ನು ವಿಧಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಲಸಿಕಾಕರಣದ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು (NTAGI) ಮೇ ತಿಂಗಳಲ್ಲೇ ಈ ಬಗ್ಗೆ ಮೊದಲ ಬಾರಿ ಸ್ಪಷ್ಟನೆ ನೀಡಿತ್ತು. ಇದೀಗ ಪುನಃ ಇದೇ ಸ್ಪಷ್ಟನೆಯನ್ನು ನೀಡಿದ್ದು, ಪೂರ್ಣ ಲಸಿಕೆ ಹಾಕಿಸಿಕೊಂಡವರಿಗೆ ಆರ್‌ಟಿಪಿಆರ್‌ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಪುನರುಚ್ಚರಿಸಿದೆ.


ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿದೆ. ಕೋವಿಡ್ 129 ಲಸಿಕೆಗಳು ಸೋಂಕಿನ ವಿರುದ್ಧ ಬಲವಾದ ನಿರೋಧಕ ಶಕ್ತಿ ಹಾಗೂ ರಕ್ಷಣೆಯನ್ನು ನೀಡುತ್ತದೆ. ಕೋವಿಡ್ ವಿರುದ್ಧ ಈಗ ನಡೆಯುತ್ತಿರುವ ಸಮರದಲ್ಲಿ ಆರ್‌ಟಿ -ಪಿಸಿಆರ್ ತಪಾಸಣೆಗಳನ್ನು ಅಗತ್ಯವಿದ್ದಲ್ಲಿ ಮಾತ್ರವೇ ನಡೆಸಬೇಕು. ಪೂರ್ಣ ಪ್ರಮಾಣದ ಲಸಿಕೆ ಹಾಕಿಸಿಕೊಂಡವರಿಗೆ ಅಲ್ಲ. ಅಂಥವರು ಪ್ರಯಾಣದ ವೇಳೆ ತಮ್ಮ ಲಸಿಕೆ ಪ್ರಮಾಣಪತ್ರವನ್ನು ತೋರಿಸಿದರೆ ಸಾಕು' ಎಂದು ಎನ್‌ಟಿಎಜಿಐ ಕೋವಿಡ್ -19 ಕಾರ್ಯಪಡೆಯ ಅಧ್ಯಕ್ಷ ಡಾ. ಎನ್‌.ಕೆ ಅರೋರಾ ಸ್ಪಷ್ಟಪಡಿಸಿದ್ದಾರೆ.


ಕರ್ನಾಟಕ, ತಮಿಳುನಾಡು, ಗೋವಾ, ಸೇರಿದಂತೆ ಕೆಲವು ರಾಜ್ಯಗಳು ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೂ ಆರ್‌ಟಿ-ಪಿಸಿಆರ್‌ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.


ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೂ ಇದು ಅನ್ವಯವಾಗುತ್ತದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم